ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಜನರ ಬೆಂಬಲವಿದೆ–ಡಿಎಸ್ ಸುರೇಶ್
ತರೀಕೆರೆ ಏ.17

ಭಾರತ ರತ್ನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಪುತ್ತಳಿಯನ್ನು ಸ್ಥಾಪನೆ ಮಾಡಿದ್ದೇನೆ ಎಂದು ಡಿಎಸ್ ಸುರೇಶ್ ರವರು ಇಂದು ತರೀಕೆರೆ ಚುನಾವಣಾ ಅಧಿಕಾರಿಯವರಿಗೆ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕ್ಷೇತ್ರ ಅತ್ಯಂತ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಜನರ ಪ್ರೀತಿ-ವಿಶ್ವಾಸ ಬೆಂಬಲವಿದೆ ಆದ್ದರಿಂದ ಸುಮಾರು 40 ಸಾವಿರ ಮತಗಳ ಅಂತರದಲ್ಲಿ ಜಯಗಳಿಸುವ ವಿಶ್ವಾಸವಿದೆ ಎಂದು ಹೇಳಿದರು.

ಚುನಾವಣಾ ಅಧಿಕಾರಿ ಸಿದ್ದಲಿಂಗ ರೆಡ್ಡಿ ರವರು ಡಿ ಎಸ್ ಸುರೇಶ್ ರವರ ನಾಮಪತ್ರ ಪರಿಶೀಲಿಸಿ ಸ್ವೀಕರಿಸಿದರು. ಸಹಾಯಕ ಚುನಾವಣಾ ಅಧಿಕಾರಿಗಳಾದ ತರೀಕೆರೆ ತಾಸಿಲ್ದಾರ್ ಸಿಎಸ್ ಪೂರ್ಣಿಮಾ, ಅಜ್ಜಂಪುರ ತಹಶೀಲ್ದಾರ್ ಸುಮಾ ಜೋಶಿ, ಉಪಸ್ಥಿತರಿದ್ದು ಸೂಚಕರಾಗಿ ಎಸ್‌ಬಿ ಆನಂದಪ್ಪ, ಟಿಎಲ್ ರಮೇಶ್, ಲಕ್ಕವಳ್ಳಿ ರಮೇಶ್, ಜ್ಞಾನೇಶ್, ಸಹಿ ಮಾಡಿರುತ್ತಾರೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಮೆರವಣಿಗೆ ನಡೆಸಿದರು.
ಜಿಲ್ಲಾ ವರದಿಗಾರರು:ಎನ್ ವೆಂಕಟೇಶ್.ತರೀಕೆರೆ