ಅನ್ನ ನೀರು ನೆರಳು ಕೊಟ್ಟವರನ್ನು ಮರೆಯಬೇಡಿ.
ತರೀಕೆರೆ (ಮಾರ್ಚ್ 9) :
ಅಭಿವೃದ್ಧಿ ವಿಚಾರದಲ್ಲಿ ಪಕ್ಷಭೇದ ಮರೆತು ಕೆಲಸ ಮಾಡಿದ್ದೇನೆ, ಕಳೆದ 40 ವರ್ಷಗಳಿಂದ ಕೊಳಗೇರಿ ನಿವಾಸಿಗಳಿಗೆ ಹಕ್ಕು ಪತ್ರ ಕೊಟ್ಟಿಲ್ಲ ಎಂದು ಶಾಸಕ ಡಿಎಸ್ ಸುರೇಶ್ ರವರು ಕರ್ನಾಟಕ ಸರ್ಕಾರ, ವಸತಿ ಇಲಾಖೆ ಚಿಕ್ಕಮಗಳೂರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಪುರಸಭೆ ತರೀಕೆರೆ, ವತಿಯಿಂದ ಪಟ್ಟಣದ ಚೌಡೇಶ್ವರಿ ಕಾಲೋನಿ, ನಾಗಪ್ಪ ಕಾಲೋನಿ, ಮತ್ತು ಬಾಪೂಜಿ ಕಾಲೋನಿ, ಕೊಳಚೆ ಪ್ರದೇಶದ ಸುಮಾರು 264 ಜನರಿಗೆ ಹಕ್ಕು ವಿತರಿಸಿ ಮಾತನಾಡಿದರು. ಕಾಂಗ್ರೆಸ್ ನಗರ ಅಧ್ಯಕ್ಷರಾದ ಟಿಎಸ್ ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಚೌಡೇಶ್ವರಿ ಕಾಲೋನಿಯಲ್ಲಿ ಕಳೆದ 40 ವರ್ಷಗಳಿಂದ ಜನರಿಗೆ ಕೊಟ್ಟಿಲ್ಲ 2018 ರಿಂದ ಹಕ್ಕು ಪತ್ರಕ್ಕಾಗಿ ಹೋರಾಟ ಮಾಡುತ್ತಿದ್ದೇವೆ,ಆದರೆ ಈ ಹಿಂದೆ ಇದ್ದ ಶಾಸಕರು ಜನರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ,ಆದರೆ ಬಿಜೆಪಿ ಶಾಸಕ ಡಿಎಸ್ ಸುರೇಶ್ ಅವರು ಪಕ್ಷಭೇದ ಮರೆತು ಕೆಲಸ ಮಾಡಿದ್ದಾರೆ. ಆದ್ದರಿಂದ ಅನ್ನ ನೀರು ನೆರಳು ಕೊಟ್ಟವರನ್ನು ಬರೆಯಬೇಡಿ ಎಂದು ಹೇಳಿದರು ಡಿಸಿಸಿ .ಬ್ಯಾಂಕ್ ಉಪಾಧ್ಯಕ್ಷರಾದ ಟಿಎಲ್ ರಮೇಶ್ ಮಾತನಾಡಿ 40 ವರ್ಷಗಳ ಹೋರಾಟದ ಫಲವಾಗಿ ಇಂದು ಶಾಸಕರು ಎಲ್ಲರಿಗೂ ಹಕ್ಕು ಪತ್ರ ಕೊಡಿಸಿದ್ದಾರೆ. 2022-23 ನೇ ಸಾಲಿನಲ್ಲಿ, 10 ಕೋಟಿ ಹಣವನ್ನು ನಗರೋತ್ಸಾನ್ ಯೋಜನೆ ಅಡಿಯಲ್ಲಿ ಮಂಜೂರು ಮಾಡಿಸಿಕೊಟ್ಟಿದ್ದಾರೆ. ತರೀಕೆರೆ ಪಟ್ಟಣಕ್ಕೆ ತಾಯಿ ಮಗು ಆಸ್ಪತ್ರೆ ಮಂಜೂರು ಮಾಡಿಸಿದ್ದಾರೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಎಲ್ಲರೂ ಆಶೀರ್ವದಿಸಿ ಋಣ ತೀರಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುರಸಭಾ ಅಧ್ಯಕ್ಷರಾದ ಕಮಲ ರಾಜೇಂದ್ರ, ಸದಸ್ಯರಾದ ವಸಂತ ರಮೇಶ್, ಕುರುಬ ಸಮಾಜದ ಮುಖಂಡ ರಾದ ಆನಂದ, ತಿಮ್ಮಯ್ಯ, ಮಾತನಾಡಿದರು. ಕಾರ್ಯಕ್ರಮದಲ್ಲಿ ಪುರಸಭಾ ಉಪಾಧ್ಯಕ್ಷರಾದ ರಿಹನಾ ಪರ್ವೀನ್, ದಾದಾಪೀರ್, ಕೊಳಗೇರಿ ಅಭಿವೃದ್ಧಿ ಮಂಡಳಿಯ ಹಾಸನ ವಿಭಾಗದ ಎ ಇ ಇ ರಾಮಚಂದ್ರಪ್ಪ. ಶ್ರೀ ರಾಮ್, ಪುರಸಭಾ ಮುಖ್ಯ ಅಧಿಕಾರಿ ಹೆಚ್ ಮಹಾಂತೇಶ್,ಪ್ರಕಾಶ್, ಸ್ಲಮ್ ಜನರ ಸಂಘಟನೆ ಕರ್ನಾಟಕ,ಸಂಘದ ಕೃಷ್ಣನಾಯ್ಕ್, ಪದ್ಮ, ಮುಂತಾದವರು ಉಪಸ್ಥಿತರಿದ್ದರು.
ವರದಿಗಾರರು : ತರೀಕೆರೆ N. ವೆಂಕಟೇಶ್