ಮುಂದಿನ ಪೀಳಿಗೆಗೆ ಪರಿಸರ ಪ್ರಜ್ಞೆ ಮೂಡಿಸಲು ಮಕ್ಕಳ ಮೂಲಕ ಬೀಜಗಳಿಂದ ಸಸ್ಯಗಳ ಉತ್ಪಾದನೆ – ಚನ್ನಪ್ಪ.ಕೆ ಹೊಸಹಳ್ಳಿ.
ಲಿಂಗಸುಗೂರು ಜು.06





ನಗರದ ಕೆ.ಇ.ಬಿ ಕಾಲೋನಿಯಲ್ಲಿ ವನಸಿರಿ ಪೌಂಡೇಷನ್ ವತಿಯಿಂದ ಸಸಿಗಳನ್ನು ತಯಾರಿಸಲು ಪುಟ್ಟ ಮಕ್ಕಳೊಂದಿಗೆ ಮಣ್ಣಿನ ಜೊತೆಗೆ ಸುಮಾರು 35 ಬೀಜಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಿಸುವ ಮೂಲಕ ಪರಿಸರ ಪ್ರಜ್ಞೆ ಮೂಡಿಸಲಾಯಿತು.ಗಿಡ ಮರಗಳು ಬಹಳ ಮುಖ್ಯ, ಏಕೆಂದರೆ ಅವುಗಳು ನಮಗೆ ಆಮ್ಲಜನಕವನ್ನು ಒದಗಿಸುತ್ತವೆ, ನೆರಳು ನೀಡುತ್ತವೆ, ಹಣ್ಣುಗಳು, ತರಕಾರಿಗಳು ಮತ್ತು ಮರವನ್ನು ಕೊಡುತ್ತವೆ, ಮಣ್ಣಿನ ಸವಕಳಿಯನ್ನು ತಡೆಯುತ್ತವೆ ಮತ್ತು ಪರಿಸರವನ್ನು ಶುದ್ಧವಾಗಿಡಲು ಸಹಾಯ ಮಾಡುತ್ತವೆ. ಜೊತೆಗೆ ಗಿಡ ಮರಗಳು ಔಷಧೀಯ ಗುಣಗಳನ್ನು ಹೊಂದಿವೆ ಮತ್ತು ಅನೇಕ ರೀತಿಯಲ್ಲಿ ಉಪಯುಕ್ತವಾಗಿವೆ.

ಒಟ್ಟಾರೆಯಾಗಿ, ಗಿಡ ಮರಗಳು ನಮ್ಮ ಜೀವನಕ್ಕೆ ಅತ್ಯಗತ್ಯ ಮತ್ತು ಅವುಗಳನ್ನು ರಕ್ಷಿಸುವುದು ಮತ್ತು ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ. ಗಿಡ ಮರಗಳು ಮುಂದಿನ ಪೀಳಿಗೆಯ ವರೆಗೆ ಬೆಳೆಯುವುದರ ಜೊತೆಗೆ ಉಳಿಯುವಂತಾಗಲಿ ಎಂದು ಚಿಕ್ಕ ಮಕ್ಕಳಿಗೆ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮಣ್ಣು ತುಂಬಿ ಅದರಲ್ಲಿ ಬೀಜಗಳನ್ನು ಹಾಕಿ ಅವುಗಳನ್ನು ಪೋಸಿಸುವ ಬಗೆಯನ್ನು ತಿಳಿಸಿ ಪರಿಸರ ಪ್ರಜ್ಞೆ ಮೂಡಿಸಲಾಗುತ್ತಿದೆ. ಮತ್ತು ಇಲ್ಲಿಯವರೆಗೆ ಸುಮಾರು 100 ಕ್ಕೂ ಅಧಿಕ ಸಸಿಗಳನ್ನು ಪೋಷಣೆ ಮಾಡಲಾಗುತ್ತದೆ. ಇದು ಒಂದು ಸಂತೋಷದಾಯಕ ವಿಷಯವಾಗಿದೆ ಎಂದು ವನಸಿರಿ ಪೌಂಡೇಷನ್ ಸದಸ್ಯ ಚನ್ನಪ್ಪ ಅವರು ತಿಳಿಸಿದರು.