ಇಂಡಿಯಲ್ಲಿ ಅದ್ದೂರಿಯ ಶ್ರೀ ರಾಮ ಶೋಭಾ ಯಾತ್ರೆ.
ಇಂಡಿ ಜನೇವರಿ.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ಹಾಗೂ ರಾಮಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಪಟ್ಟಣದಲ್ಲಿ ಸೋಮವಾರ ಅದ್ದೂರಿ ಶ್ರೀರಾಮ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿತ್ತು. ವಿಹಿಂಪ ಭಜರಂಗದಳ ಮತ್ತು ನಗರದ ಗಣ್ಯರು ಶ್ರೀ ರಾಮ ಅಪಾರ ಅಭಿಮಾನಿಗಳು ವ್ಯಾಪಾರಸ್ಥರು ಪಾಲ್ಗೊಂಡಿದ್ದರು.ಶಾಂತೇಶ್ವರ ದೇವಸ್ಥಾನದಿಂದ ಶ್ರೀರಾಮರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಶೋಭಾಯಾತ್ರೆ ಪ್ರಾರಂಭಿಸಲಾಯಿತು.ಬಿರಾದಾರ ಓಣಿ ಮಾರ್ಗವಾಗಿ ಅಗಸಿ ಹನುಮಾನ ದೇವಾಲಯದಿಂದ ಮಹಾವೀರ ವೃತ್ತ , ಅಂಬೇಡ್ಕರ್ ವೃತ್ತದ ಮುಖಾಂತರ ಹಾದು ಬಸವೇಶ್ವರ ವೃತ್ತದಲ್ಲಿ ಶೋಭಾಯಾತ್ರೆ ಕಾರ್ಯಕ್ರಮ ನಡೆಯಿತು.ಅಲ್ಲಿ ಮಾತನಾಡಿದ ಶ್ರೀ ಶಾಂತೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ ಇಲ್ಲಿನ ಸಮಾಜ ಮತ್ತು ಸಂಸ್ಕೃತಿ ಪುನಃ ರಾಮ ರಾಜ್ಯದ ಕನಸ್ಸನ್ನು ಕಾತರಿಸುತ್ತಿದೆ. ಗುಹನಿಂದ ಹಿಡಿದು ಹನುಮನವರೆಗೆ ಎಲ್ಲರನ್ನು ಒಳಗೊಂಡು ಸಾಗಿದ ರಾಮನ ಆದರ್ಶಗಳು ಪುನಃ ಮೌಲ್ಯರೂಪ ತಾಳುವ ಅವಶ್ಯಕತೆಯಂತೂ ಇದ್ದೇ ಇದೆ. ರಾಮಮಂದಿರ ನಿರ್ಮಾಣದೊಂದಿಗೆ ಸಾಮರಸ್ಯದ ಸಮಾಜದ ನಿರ್ಮಾಣವೂ ಆಗುವ ಸದಾಶಯ ಎಂದರು.ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯರರು, ಪ್ರಕಾಶ ಬಿರಾದಾರ, ಅನೀಲಗೌಡ ಬಿರಾದಾರ, ದೇವೆಂದ್ರ ಕುಂಬಾರ, ನೇತಾಜಿ ಪವಾರ ಮಾತನಾಡಿದರು. ಅಂಬಾ ಭವಾನಿ ಭಜನಾ ಮಂಡಳಿ ಕುಂಬಾರ ಓಣಿ, ಗುರುಸಾರ್ವಭೌಮ ಭಜನಾ ಮಂಡಳಿಯವರಿಂದ ಶೋಭಾ ಯಾತ್ರೆ ಯುದ್ದಕ್ಕೂ ರಾಮ ಭಜನೆ ನಡೆಯಿತು. ಸಂಜೆ ಶ್ರೀ ಶಾಂತೇಶ್ವರ ದೇವಸ್ಥಾನ ಸೇರಿದಂತೆ ನಗರದ ಎಲ್ಲ ದೇವಸ್ಥಾನಗಳಲ್ಲಿ ಹಾಗೂ ಗ್ರಾಮೀಣ ಭಾಗದ ಪ್ರತೀ ದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಆರ್‌ಜಿ ಕಾಲೇಜಿನ ಆವರಣದಲ್ಲಿ ಆಕಾಶ ದೀಪೋತ್ಸವ (ಆಕಾಶ ಬುಟ್ಟಿ) ಹಾರಿಸಲಾಯಿತು. ಶೋಭಾಯಾತ್ರೆಯ ನಂತರ ಬಸವೇಶ್ವರ ವೃತ್ತದಲ್ಲಿ ಪ್ರಸಾದ ವ್ಯವಸ್ಥೆ ಸೇರಿದಂತೆ ಶಾಂತೇಶ್ವರ, ಅಂಬಾ ಭವಾನಿ ಮತ್ತು ಪಟ್ಟಣದ ಮತ್ತು ತಾಲೂಕಿನ ಅನೇಕ ದೇವಸ್ಥಾನಗಳಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪಟ್ಟಣ ಸೇರಿದಂತೆ ಗ್ರಾಮಗಳು ಕೇಸರಿ ಧ್ವಜದಿಂದ ಅಲಂಕೃತ ಗೊಂಡಿದ್ದವು. ಪುರಸಭೆ ಮಾಜಿ ಅಧ್ಯಕ್ಷ ಯಮನಾಜಿ ಸಾಳುಂಕೆ, ಶ್ರೀಕಾಂತ ಕುಡಿಗನೂರ, ಚಂದು ದೇವರ, ಮಲ್ಲು ದೇವರ, ಸಂಜಯ ಪವಾರ,ಶಾಂತು ದೇವರ, ಪ್ರಸಾದ ಮಠ, ಅಭಿನಂದನ ಕಿರಣಗಿ, ಶಾಂತು ಶಿರಕನಳ್ಳಿ, ರಾಮಸಿಂಗ ಕನ್ನೊಳ್ಳಿ , ಅಶೋಕ ಹದಗಲ್, ಮಂಜು ತೆನ್ನೆಳ್ಳಿ, ಶಿವಾನಂದ ಬೋಡಿ, ವಿಠ್ಠಲ ಹೊಸಮನಿ, ಅಪ್ಪು ಪವಾರ, ಭೀಮ ಪ್ರಚಂಡಿ, ರಾಚು ಬಡಿಗೇರ,ಮಲ್ಲಿಕಾರ್ಜುನ ಬಿರಾದಾರ, ಬಸು ಕಂಬಾರ,ಪ್ರಶಾಂತ ಲಾಳಸಂಗಿ ಮತ್ತಿತರರು ಇದ್ದರು.
ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ