ಒನಕೆ ಓಬವ್ವರ ದೇಶ ಪ್ರೇಮ. ಪರಾಕ್ರಮ. ಶೌರ್ಯ – ವಿಶ್ವಕ್ಕೆ ಮಾದರಿ.
ಕಾನಾ ಹೊಸಹಳ್ಳಿ ನವೆಂಬರ್.11





ಒನಕೆ ಓಬವ್ವರ ದೇಶ ಪ್ರೇಮ, ಪರಾಕ್ರಮ, ಶೌರ್ಯ ವಿಶ್ವಕ್ಕೆ ಮಾದರಿ ಎಂದು ಗ್ರಾಮ ಆಡಳಿತ ಅಧಿಕಾರಿ ಚೆನ್ನಬಸಯ್ಯ ತಿಳಿಸಿದರು. ಪಟ್ಟಣದ ನಾಡ ಕಚೇರಿಯಲ್ಲಿ ಶ್ರೀ ಒನಕೆ ಓಬವ್ವ ಅವರ ಭಾವ ಚಿತ್ರಕ್ಕೆ ಪೂಜೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು ಚಿತ್ರದುರ್ಗದ ಒನಕೆ ಓಬ್ಬವ್ವ ತೋರಿಸಿದ ಶೌರ್ಯ ಬೇರೆ ಯಾರು ತೋರಲಾರರು, ಯಾರಿಗೂ ತಿಳಿಯದೇ ತಕ್ಷಣ ಬಂದ ಶತ್ರು ಸೈನಿಕರ ಬಗ್ಗೆ ಗಂಡನಿಗೆ ಹೇಳದೆ, ಮನೆಯಲ್ಲಿ ಇದ್ದ ಒನಕೆಯನ್ನೇ ಆಯುಧವನ್ನಾಗಿ ಮಾಡಿ ಕೊಂಡು ತನ್ನ ರಾಜ್ಯ ರಕ್ಷಣೆಗೆ ಹೋರಾಡಿದ ತಾಯಿ ನಾಡಿಗಾಗಿ ಮಡಿದ ಓಬವ್ವ ಸ್ತ್ರೀ ಕುಲದ ಸ್ವಾಭಿಮಾನದ ಸಂಕೇತವಾಗಿದ್ದಾರೆ. ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಹೊನ್ನೂರು ಸ್ವಾಮಿ, ಗ್ರಾಮದ ಮುಖಂಡರಾದ ಫೋಟೋ ಸಿದ್ದಲಿಂಗಪ್ಪ, ಕಾಂಗ್ರೆಸ್ ಮುಖಂಡರದ ಲಕ್ಕಜ್ಜಿ ಮಲ್ಲಿಕಾರ್ಜುನ್, ರಜಿನಿ, ಮಾರಪ್ಪ, ಹೇಮಂತ್, ನಡಲು ಮನೆ ತಿಪ್ಪೇಸ್ವಾಮಿ, ದುಗ್ಗೇಶ್, ಗ್ರಾಮ ಸಹಾಯಕ ಬೋರಪ್ಪ ಸೇರಿದಂತೆ ಸಮುದಾಯದವರು, ಸಾರ್ವಜನಿಕ ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ