ರೋಗ ಮುಕ್ತ ಜೀವನ ಸಾಗಿಸಲು ಕ್ರೀಡೆ ಅಷ್ಟೇ ಮುಖ್ಯ.
ಕಾನಾ ಹೊಸಹಳ್ಳಿ ನವೆಂಬರ್.10

ಸಮಾಜದಲ್ಲಿನ ತಿರುಳನ್ನು ಅರಿತು ಕೊಳ್ಳಲು ನಮ್ಮಗೆ ಶಿಕ್ಷಣ ಎಷ್ಟು ಮುಖ್ಯ ವಾಗಿದೆಯೋ ಅದರಂತೆ ರೋಗ ಮುಕ್ತ ಜೀವನ ಸಾಗಿಸಲು ಕ್ರೀಡೆ ಅಷ್ಟೇ ಮುಕ್ತವಾಗಿದೆ ಎಂದರು. ತಾಲೂಕಿನ ಚೌಡಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಗಳ ಮಲ್ಲಾಪುರ ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಕ್ರಿಕೆಟ್ ಲವ್ವರ್ಸ್ ತಂಡದ ವತಿಯಿಂದ 3 ನೇ ಭಾರಿಗೆ ಸೂಪರ್ 7 ಕ್ರಿಕೆಟ್ ಟೂರ್ನಿಮೆಂಟ್ ಆಯೋಜನೆಗೆ ಚೌಡಾಪುರ ಗ್ರಾ.ಪಂ ಸದಸ್ಯರಾದ ವೈ ಮಲ್ಲಿಕಾರ್ಜುನ ಉದ್ಘಾಟಿಸಿ ಮಾತನಾಡಿದರು ಕ್ರಿಕೆಟ್ ಆಟವನ್ನು ಪ್ರೀತಿ ಸ್ನೇಹ ವಿಶ್ವಾಸದಿಂದ ಆಡಿ ನಿರ್ಣಾಯಕರ ತೀರ್ಮಾನಕ್ಕೆ ಬದ್ಧವಾಗಿ ಆಟ ಹಾಡಿರಿ ಎಂದು ಹೇಳಿದರು. ಈ ವೇಳೆ ತಂಡದ ಆಯೋಜಕರಾದ ಡಿ. ಪಾಪನಾಯಕ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಯಶಸ್ವಿಯಾಗಿ ನಡೆಸಲು ನಮ್ಮ ಊರಿನ 8 ತಂಡದ ನಾಯಕರು ಹಾಗೂ ಸಹ ಆಟಗಾರರು ಸಹಕರಿಸಬೇಕು ಎಂದು ಹೇಳಿದರು. ನಂತರ ಪಿ. ಕೆ ಪ್ರವೀಣ್ ಮಾತನಾಡಿ ನಮ್ಮ ಊರಿನಲ್ಲಿ ತಂಡಗಳು ಹೆಚ್ಚು ಆಗಿವೆ ಇದರಿಂದ ಕ್ರೀಡಾ ಪ್ರತಿಭೆಗಳು ಈಗೆ ಹುಟ್ಟಿ ಕೊಳ್ಳಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಡಿ. ಪ್ರಕಾಶ, ಡಿ ಮಾರೇಶ, ಶ್ಯಾಮಿ ಯಾನ ವ್ಯವಸ್ಥೆ ಮಾಡಿದ ಮರಬ ದ್ವಾರಕೀಶ್ ಸೇರಿದಂತೆ ಕ್ರೀಡಾ ಅಭಿಮಾನಿಗಳು ಇದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ