“ಮಾವುತ” ಚಿತ್ರದ ಹಾಡು ಬಿಡುಗಡೆ ಮಾಡಿದ – ಸಂಸದ ಯದುವೀರ ಒಡೆಯರ.
ಮೈಸೂರು ಜ.05

ನಾಡಹಬ್ಬ ದಸರಾ ಎಂದೊಡನೆ ನಮ್ಮ ಕಣ್ಮುಂದೆ ಬರುವದು ಎಂಟು ಬಾರಿ ತಾಯಿ ಚಾಮುಂಡೇಶ್ವರಿಯನ್ನು ಅಂಬಾರಿಯ ಮೇಲೆ ಹೊತ್ತು ಮೆರೆಸಿದ ಅರ್ಜುನ. ಇಂದು ಅರ್ಜುನ ನಮ್ಮ ಕಣ್ಮುಂದೆ ಇಲ್ಲದಿದ್ದರೂ ಆತನ ಸವಿ ನೆನಪಿನಲ್ಲಿ ಚಿತ್ರೀಕರಣ ಗೊಂಡ ಎಸ್.ಡಿ.ಆರ್ ಪ್ರೊಡಕ್ಷನ್ ಅವರ ದ್ವಿತೀಯ ಚಿತ್ರ “ಮಾವುತ” ಚಿತ್ರದ ಅರ್ಜುನನ ಹುಟ್ಟು ಹಬ್ಬದ ಹಾಡಿನಲ್ಲಿ ಆತನನ್ನು ಜೀವಂತವಾಗಿರಿಸುವ ಪುಟ್ಟ ಪ್ರಯತ್ನವನ್ನು ಚಿತ್ರ ತಂಡ ಮಾಡಿದೆ.
ಅರ್ಜುನನ ಸಮಾದಿಯ ಮುಂದೆ ಆತನ ಪ್ರಿಯ ಮಾವುತನಾದ “ವಿನು” ಹಾಗೂ ಮೈಸೂರಿನ ಅರಸು ಹಾಗೂ ಸಂಸದರು ಆಗಿರುವ ಯದುವೀರ ಒಡೆಯರ್ ಅವರ ಅಮೃತ ಹಸ್ತದಿಂದ ಹೊಸ ವರ್ಷದ ಆರಂಭದಲ್ಲಿ “ಗಂಧದ ಗುಡಿಯಲ್ಲಿ ಜನ್ಮೋತ್ಸವ” ಅರ್ಜುನನ ಹಾಡಿಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ನಟ ಹಾಗೂ ನಿರ್ಮಾಪಕರಾದ ಲಕ್ಷ್ಮೀಪತಿ ಬಾಲಾಜಿ, ಸಹ ನಿರ್ಮಾಪಕರಾದ ಚಲುವರಾಜ್ ಎನ್. ಹಾಗೂ ಮುರುಳಿಧರ್ ತಿಪ್ಪುರ್, ನಿರ್ದೇಶಕ ರವಿಶಂಕರನಾಗ್, ಆನಂದ ಸಿಂಗ್, ಕವಿತಸಿಂಗ್, ಭಜರಂಗಿ ಉಮೇಶ್ ಮುಂತಾದವರು ಉಪಸ್ಥಿತರಿದ್ದರು.
ಹೆಸರೇ ಸೂಚಿಸುವಂತೆ ಮಾವುತ ಹಾಗೂ ಆನೆಯ ಭಾಂದವ್ಯದ ಕಾಡಿನ ಕಥಾ ಹಂದರವುಳ್ಳ ಚಿತ್ರ. ಚಿತ್ರಕ್ಕೆ ಲಕ್ಷ್ಮೀಪತಿ ಬಾಲಾಜಿ ಬಂಡವಾಳ ಹಾಕುವುದರೊಂಧಿಗೆ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಸಹ ನಿರ್ಮಾಪಕರಾಗಿ ಮರುಳಿಧರ ತಿಪ್ಪುರ್, ಚಲುವರಾಜ್ ಎನ್ ಸಾಥ್ ಕೊಟ್ಟಿದ್ದಾರೆ.
ರವಿಶಂಕರನಾಗ್ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೇ, ಸಾಹಿತ್ಯ ಬರೆದು ನಿರ್ದೇಶನ ಹೊಣೆ ಹೊತ್ತಿದ್ದಾರೆ. ಛಾಯಾಗ್ರಹಣ ವಿನಸ್ ಮೂರ್ತಿ, ವಿನುಮನಸು ಸಂಗೀತ, ರವಿವರ್ಮ ಹಿನ್ನೆಲೆ ಸಂಗೀತ, ವೆಂಕಿ ಯುಡಿವಿ ಸಂಕಲನ, ಕಮಲ್ ಗೋಯಲ್ ಡಿಐ, ಅಕ್ಷಯ್ ಅವರ ಸಿ.ಜಿ ಕಾರ್ಯ, ಥ್ರಿಲ್ಲರ್ ಮಂಜು ಸಾಹಸ, ಪಿ.ಆರ್.ಓ ಸುಧೀಂದ್ರ ವೆಂಕಟೇಶ, ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ ಅವರಾಗಿದ್ದಾರೆ.
ಚಿತ್ರದ ತಾರಾ ಬಳಗದಲ್ಲಿ ಲಕ್ಷ್ಮೀಪತಿ ಬಾಲಾಜಿ, ಮಹಾಲಕ್ಷ್ಮಿ, ದಿವ್ಯಶ್ರೀ, ಥ್ರಿಲ್ಲರ್ ಮಂಜು, ಪದ್ಮಾವಾಸಂತಿ, ಬಲರಾಜವಾಡಿ, ಲಯ ಕೋಕಿಲ, ನಂಜು ಸಿದ್ದಪ್ಪ, ಕೈಲಾಶ್ ಕುಟ್ಟಪ್ಪ, ಮೈಸೂರ್ ಮಂಜುಳ ಮೊದಲಾದವರು ಅಭಿನಯಿಸಿದ್ದಾರೆ. “ಮಾವುತ” ಚಲನ ಚಿತ್ರ ಸಂಪೂರ್ಣ ಸಿದ್ಧವಾಗಿದ್ದು, ಇದೆ ಜ.೩೦ ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಯಾಗಲಿದೆ.
ರಾಜ್ಯ ಮಟ್ಟದ ವಿಶೇಷ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಡಾ, ಪ್ರಭು ಗಂಜಿಹಾಳ ಗದಗ

