ತಾಲೂಕ ಆಡಳಿತ ಸೌಧದಲ್ಲಿ ಎಲ್ಲಾ ಇಲಾಖೆಯವರು ಅಧಿಕಾರಿಗಳ ಜೊತೆ ಕೆ.ಡಿ.ಪಿ ಸಭೆ – ಶಾಸಕರ ಸಮ್ಮುಖದಲ್ಲಿ ಜರುಗಿತು.
ಮೊಳಕಾಲ್ಮುರು ಮಾ.04

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಆಡಳಿತ ಸೌಧದಲ್ಲಿ ಇಂದು ಮಂಗಳವಾರ 4.3.2025 ರಂದು ಪ್ರಗತಿ ಪರಿಶೀಲಿನ ಕೆ.ಡಿ.ಪಿ ಸಭೆಯು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಎನ್.ವೈ ಗೋಪಾಲಕೃಷ್ಣ ಶಾಸಕರ ನೇತೃತ್ವದಲ್ಲಿ ತಾಲೂಕು ಆಡಳಿತ ಎಲ್ಲಾ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಚರ್ಚಿಸಲಾಯಿತು. ಮತ್ತು ಕ್ಷೇತ್ರವಾರು ಆರೋಗ್ಯ ಶಿಕ್ಷಣ ಕುಡಿಯುವ ನೀರು ಸ್ವಚ್ಛತೆ ಎಲ್ಲಾ ಗ್ರಾಮಗಳಲ್ಲಿ ಅಧಿಕಾರಿಗಳು ಸರಿಯಾದ ರೀತಿಯಿಂದ ಕೆಲಸ ಎಲ್ಲಾ ನಾಗರಿಕರಿಗೆ ತೊಂದರೆ ಆಗದಂತೆ ಕೆಲಸ ಮಾಡಬೇಕು ಎಂದು ಮಾನ್ಯ ಶಾಸಕರು ತಿಳಿಸಿದರು. ಮತ್ತು ಈಗ ಹೊಸ ಅಕ್ಕಿ ಜ್ವರ ಅಂತಾ ಖಾಯಿಲೆ ಉತ್ಪತ್ತಿ ಯಾಗಿದ್ದು ಇದನ್ನು ಬಹಳ ಎಚ್ಚರದಿಂದ ಆರೋಗ್ಯ ಇಲಾಖೆ ಅಧಿಕಾರಿಗಳು ಕಾಪಾಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರದ ಟಿ ಜಗದೀಶ್ ತಾಲೂಕು ಪಂಚಾಯಿತಿ ಇಲಾಖೆ ಅಧಿಕಾರಿಗಳು ಜಿಲ್ಲಾ ಪಂಚಾಯತಿ ಇಲಾಖೆ ಅಧಿಕಾರಿಗಳು ಲಿಂಗರಾಜ್ ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ಲಕ್ಷ್ಮೀನಾರಾಯಣ ಗ್ರಾಮ ಪಂಚಾಯತಿ ಪಿ.ಡಿ.ಓಗಳು ಕೃಷಿ ಇಲಾಖೆ ಅಧಿಕಾರಿಗಳು ತೋಟಗಾರಿ ಇಲಾಖೆ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು