ಸೂಡಿಯಲ್ಲಿ ಎಲ್ಲಿ ನೋಡಿದರಲ್ಲಿ ಮೈನವಿರೇಳಿಸುವಂತಹ – ಶಿಲ್ಪಕಲೆಗಳ ದರ್ಶನ.
ಗಜೇಂದ್ರಗಡ ಜ.21


ತಾಲೂಕಿನ ಸೂಡಿ ಗ್ರಾಮದಲ್ಲಿ ಪ್ರಾಚೀನ ಕಾಲದ ಭವ್ಯ ಇತಿಹಾಸ ಸಾರುವ ಹಲವಾರು ಪ್ರಾಚೀನ ಕಾಲದ ಮುಖ್ಯವಾದ ಶಿಲ್ಪಾಕಲಾ ಪ್ರಮುಖ ದೇವಸ್ಥಾನಗಳು ಕಂಡು ಬರುತ್ತವೆ. ಈ ಊರು ನಾಡಿನ ಆಕರ್ಷಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇಲ್ಲಿಯ ಶಿಲ್ಪಕಲೆ, ದೇವಾಲಯಗಳು ಅಪರೂಪದ್ದಾಗಿದೆ.

ಇದು ಪ್ರಾಚೀನ ಸಂಸ್ಕೃತಿಯ ಬೀಡಾಗಿದೆ ಈ ಭೂಮಿಯ ಕಣ ಕಣದಲ್ಲೂ ಇತಿಹಾಸ ಸಂಸ್ಕೃತಿ, ಕಲೆ ಅಡಗಿದೆ. 10 ನೇ. ಶತಮಾನದ ಚಾಲುಕ್ಯ ರಾಣಿ ಅಕ್ಕಾದೇವಿಯ ರಾಜಧಾನಿಯಾಗಿದ್ದು. ಅತ್ಯಂತ ಉನ್ನತ ಸ್ಥಿತಿಯಲ್ಲಿ ಮೆರೆಯುತ್ತಿರುವಾಗ ನಿರ್ಮಾಣ ಗೊಂಡಿರುವ ಒಳಗೊಂಡಿರುವ ಜೋಡು ಕಳಸದ ದೇಗುಲ, ಅಕ್ಷೇಶ್ವರ ದೇವಾಲಯ, ನಗರೇಶ್ವರ ದೇವಾಲಯ, ನಾಗಕುಂಡ ಮಷ್ಕರಣಿ, ಹಂಪಿ ಸ್ವರೂಪದ ಬೃಹದಾಕಾರದ ಏಕಶಿಲೆಯ. ಕಡಲೆಕಾಳು ಗಣಪತಿ, ನಂದಿ, ಈಶ್ವರ ವಿಗ್ರಹ ಇರುವ ಮಂಟಪಗಳು, ಅರವತ್ತು ಅಡಿ ಎತ್ತರದ ಸುಂದರವಾದ ಹಾಗೂ ಸೂಡಿಯಲ್ಲಿ ಎಲ್ಲಿ ನೋಡಿದರಲ್ಲಿ ಮೈನವಿರೇಳಿಸುವಂತಹ ಶಿಲ್ಪಕಲೆಗಳು ಇಲ್ಲಿ ಕಾಣಸಿಗುತ್ತವೆ.


ಕಲ್ಯಾಣ ಚಾಲುಕ್ಯರ ಆಳ್ವಿಕೆಯ 200 ವರ್ಷಗಳ ವರೆಗೆ ವೈಭವಯುತವಾಗಿದ್ದ ಗಾಂದ ಶಿಲ್ಪಕಲಾ ಸಂಪತ್ತಿನಲ್ಲಿ ಅತ್ಯಂತ ಉಷಕ್ಷಣೀಯ ಶಿಲೆಯ ಎರಡು ಮರಗಳನ್ನು ಹೊಂದಿರುವ ಜೋಡು ಕಳಸದ (ನಾಗೇಶ್ವರ) ದೇಗುಲ ನೋಡುಗರ ಮನಸೂರೆ ಗೊಳ್ಳುತ್ತಿದೆ. ದ್ರಾವಿಡ ಶೈಲಿಯ ದ್ವಿಕೂಟಾಚಲ ಮಾದರಿಯ ಈ ದೇವಾಲಯ ಎರಡು ಗರ್ಭಗೃಹ ಹೊಂದಿದೆ.


ಒಂದರಲ್ಲಿ ಅಪೂರ್ವ ಕೆತ್ತನೆಯ ಈಶ್ವರನ ಮೂರ್ತಿ ಕಂಗೊಳಿಸುತ್ತಿದೆ. ಭವ್ಯವಾದ ಅಕೇಶ್ವರ(ಅನಂತಶಯನ ಮಲ್ಲಿಕಾರ್ಜುನ) ದೇವಾಲಯ, ವೃತ್ತಾಕಾರದ ಹನ್ನೆರಡು ಶಿಲಾ ಸ್ತಂಭಗಳ ಮಧ್ಯ ನವರಂಗ ನಂದಿಯ ವಿಗ್ರಹ, ಶಿಲಾ ಶಾಸನಗಳು ಇಂದಿಗೂ ಸ್ಫೂರ್ತಿಯ ಸೆಲೆಯಾಗಿವೆ.

ಇಂಗ್ಲೆಂಡ್ ವಾಸ್ತು ಶಿಲ್ಪದ ಪ್ರಾಧ್ಯಾಪಕ ವಾಸ್ತುತಜ್ಞ ಜೆರಾರ್ಡ್ ಜೋಕಿಮಾ ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಇತಿಹಾಸ ಸಂಶೋಧನಾ ವಿದ್ಯಾರ್ಥಿಗಳು ಸೂಡಿ ಗ್ರಾಮಕ್ಕೆ ಹಲವು ವರ್ಷಗಳ ಹಿಂದೆ ಭೇಟಿ ನೀಡಿ ಇಲ್ಲಿಯ ಅದ್ಭುತ ಶಿಲ್ಪಕಲಾ ಸಂಪತ್ತು ಕಂಡು ನಿಬ್ಬೆರಗಾಗಿದ್ದಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್ ವಿ ಸಂಕನಗೌಡ್ರ. ರೋಣ ಗದಗ