ಮುರಾರ್ಜಿ ವಸತಿ ಶಾಲೆಗೆ ಧಿಡೀರನೆ ಭೇಟಿ ನೀಡಿದ – ಶಾಸಕ ಡಾ. ಎನ್.ಟಿ. ಶ್ರೀ ನಿವಾಸ್.
ಗುಡೇಕೋಟೆ ಜನೇವರಿ.10

ಕೂಡ್ಲಿಗಿ ತಾಲೂಕಿನ ಸಿದ್ದಾಪುರ ಗ್ರಾಮದ (ಗುಡೇಕೋಟೆ ) ಮೊರಾರ್ಜಿ ದೇಸಾಯಿ ವಸತಿ ಶಾಲೆ ಖಾಸಗಿ ಕಟ್ಟಡವನ್ನು ಬಾಡಿಗೆ ಪಡೆದು ನಡೆಸುತ್ತಿರುವ ವಸತಿ ಶಾಲೆಗೆ ಕ್ಷೇತ್ರದ ಶಾಸಕರಾದ ಡಾ. ಶ್ರೀನಿವಾಸ್ ಎನ್.ಟಿ ಅವರು ಭೇಟಿ ನೀಡಿ ಪರಿಶೀಲಿಸಿದರು. ಪ್ರತಿ ತರಗತಿಯ ಕೊಠಡಿಗಳಿಗೆ ತೆರಳಿ ವಿದ್ಯಾರ್ಥಿಗಳ ಯೋಗ ಕ್ಷೇಮವನ್ನು ವಿಚಾರಿಸಿ ಪಾಠ, ಓದು ಮತ್ತು ಊಟದ ವ್ಯವಸ್ಥೆಯನ್ನು ಮಕ್ಕಳನ್ನು ವಿಚಾರ ಮಾಡಿದರು. ನಂತರ ಅಡಿಗೆ ಕೋಣೆಗೆ ತೆರಳಿ ಊಟವನ್ನು ಪರಿಶೀಲಿಸಿದರು. ಮುರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ರಿಂದ ಅಡುಗೆ ಸಿಬ್ಬಂದಿ ಮತ್ತು ಇತರೆ ಸಿಬ್ಬಂದಿಗೆ ಮಾಹಿತಿಯನ್ನು ಪಡೆದು ಕೊಂಡರು. ಮಕ್ಕಳಿಗೆ ಸಿಗಬೇಕಾದ ಸೌಲಭ್ಯಗಳು ಅಚ್ಚು ಕಟ್ಟಾಗಿ ಮಕ್ಕಳಿಗೆ ತಲುಪಿಸ ಬೇಕು ಎಂದು ಪ್ರಾಂಶುಪಾಲರಿಗೆ ತಿಳಿಸಿದರು. ಅಡಿಗೆ ಸಿಬ್ಬಂದಿಯವರು ಕೂಡ ಸ್ವಚ್ಛವಾಗಿ ಇರಬೇಕು ಮಕ್ಕಳಿಗೆ ಉತ್ತಮ ಆಹಾರ ನೀಡಬೇಕು, ಶಿಸ್ತು ಮತ್ತು ಸ್ವಚ್ಛತೆಗೆ ಆದ್ಯತೆ ಕೊಡಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು. ವಿದ್ಯಾರ್ಥಿಗಳ ತರಗತಿ ಕಟ್ಟದ ಸಮಸ್ಯೆಯನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣ ಗೊಳಿಸಲಾಗುವುದು ಎಂದರು. ಇನ್ನೂ ವಿದ್ಯಾರ್ಥಿಗಳು ನೀವುಗಳು ಕಷ್ಟಪಟ್ಟು ಚೆನ್ನಾಗಿ ಓದಬೇಕು. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಅಧಿಕಾರಿಯಾಗ ಬೇಕು, ಛಲವೂಂದಿದ್ದರೇ ಬೇಕಾದುದನ್ನು ಸಾಧಿಸಬಹುದು ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕಿನ ಅಧಿಕಾರಿಗಳು, ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರಾದ ಶಿವಕುಮಾರ್, ನಿಲಯ ಪಾಲಕರಾದ ಮಧು ಕುಮಾರ್, ಶಿಕ್ಷಕರಾದ ಲಕ್ಷ್ಮಿ, ವೆಂಕಟೇಶ್ ಪ್ರಸಾದ್ ಶಾಲೆ ಮಕ್ಕಳು ಹಾಗೂ ಸಿಬ್ಬಂದಿ ವರ್ಗದವರು, ರಾಜಕೀಯ ಮುಖಂಡರು, ಸುತ್ತ ಮುತ್ತಲಿನ ಗ್ರಾಮಗಳ ಮುಖಂಡರು ಮತ್ತು ಪತ್ರಕರ್ತರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ