ಡಿ.ಜೆ ಬಳಸುವಂತಿಲ್ಲ ಸರ್ಕಾರದ ನಿಯಮ ಪಾಲನೆ ಮಾಡಿ–ಸಿ.ಪಿ.ಐ ವೆಂಕಟಸ್ವಾಮಿ.
ಕೊಟ್ಟೂರು ಸಪ್ಟೆಂಬರ್.10

ಪಟ್ಟಣದ ಹರಪನಹಳ್ಳಿ ರಸ್ತೆ ಯಲ್ಲಿರುವ ಪೊಲೀಸ್ ಠಾಣೆಯಲ್ಲಿ ಆವರಣದಲ್ಲಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಭಾನುವಾರದಂದು ಶಾಂತಿ ಸಭೆ ನೆಡೆಸಿದರು.ನಂತರ ಮಾತನಾಡಿದ ಪಟ್ಟಣದ ಪ್ರಮುಖ ಮುಖಂಡರು ಹಾಗೂ ಸಂಘ ಸಂಸ್ಥೆಯ ಮುಖಂಡರು ಈ ಸಂದರ್ಭದಲ್ಲಿ ಕಾನೂನಿನ ಅಡಿಯಲ್ಲಿ ನಾವುಗಳು ಒಗ್ಗಟಾಗಿ ಸೇರಿಕೊಂಡು ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿ ಯುತವಾಗಿ ಆಚರಣೆ ಮಾಡಿಕೊಂಡು ಯಾವುದೇ ರೀತಿಯ ಕೋಮು ಗಲಭೆ ನಡೆಯದಂತೆ ನಾವುಗಳು ಹಬ್ಬವನ್ನು ಆಚರಣೆ ಮಾಡಬೇಕು ಎಂದು ಹೇಳಿದರು. ಗಣೇಶ ಮೂರ್ತಿಗಳ ವಿಸರ್ಜನೆಗೆ ಸಣ್ಣ ಪುಟ್ಟ ಮಕ್ಕಳು ಮೆರವಣಿಗೆ ಹೋಗದಂತೆ ಪೋಷಕರು ಗಮನ ಹರಿಸಿ ಹಾಗೂ ಮೂರ್ತಿಗಳ ವಿಸರ್ಜನೆ ನಮ್ಮ ಇಲಾಖೆ ಬೇಕಾದ ಅಗತ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುವುದು. ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಿದ್ದು, ಯಾರೂ ಕೂಡಾ ಪಿಒಪಿ ಗಣೇಶ ಮೂರ್ತಿಗಳನ್ನು ಖರೀದಿಸದೇ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು. ವಿಸರ್ಜನೆ ಸಂದರ್ಭದಲ್ಲಿ ತ್ಯಾಜ್ಯವನ್ನು ಒಂದು ನಿಗದಿಪಡಿಸಿದ ಸ್ಥಳದಲ್ಲಿ ಹಾಕಬೇಕು’ ಎಂದು ಸಲಹೆ ನೀಡಿದರು.

ಕೆಲವು ಡಬ್ಬಿ ಅಂಗಡಿಗಳು, ಡಾಬಾ ಹೋಟೆಲ್‍ಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತದೆ ಎಂಬ ದೂರುಗಳಿದ್ದು ಅಬಕಾರಿ ಮತ್ತು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿದೆ. ಹಬ್ಬದ ವೇಳೆ ಪ್ಲೆಕ್ಸ್ ಅಳವಡಿಸಲು ನಿಗಧಿತ ಸ್ಥಳಗಳಲ್ಲಿ ಮಾತ್ರ ಅನುಮತಿ ಪಡೆದು ಅಳವಡಿಸಬೇಕೆಂದು ಸೂಚಿಸಲಾಗಿದೆ.ಪ್ರತಿ ಒಂದು ಗಣೇಶ ಮೂರ್ತಿ ಇರುವ ಸ್ಥಳದಲ್ಲಿ ಯಾವುದೇ ಕಾರಣಕ್ಕೂ ಡಿಜೆ ಬಳಸುವಂತಿಲ್ಲ ಹಾಗೂ ಅಕ್ರಮ ಚಟುವಟಿಕೆ ನಡೆದರೆ ಅಂಥವರ ವಿರುದ್ಧ ಪ್ರಕರಣ ಮಾಡುತ್ತೇವೆ ಎಂದು ಸಿಪಿಐ ವೆಂಕಟಸ್ವಾಮಿ ಈ ಸಂದರ್ಭದಲ್ಲಿ ಹೇಳಿದರು.ಯುವಕರು ಗಣೇಶ ಚತುರ್ಥಿಯನ್ನು ಶಾಂತಿಯುತವಾಗಿ ಆಚರಿಸಬೇಕು. ಗಣೇಶ ವಿಸರ್ಜನೆ ವೇಳೆ ಡಿಜೆ ಹಚ್ಚುವುದನ್ನು ನಿಷೇಧಿಸಲಾಗಿದೆ. ಸಾಂಪ್ರದಾಯಿಕ ಮಜಲುಗಳ ಮೂಲಕ ವಿಸರ್ಜನೆ ಮಾಡಬೇಕು ಎಂದರು.ಠಾಣೆಯ ಪಿ. ಎಸ್ .ಐ.ಗೀತಾಜಿಲಿ ಶಿಂದೆ ,ಮಾತನಾಡಿ, ಕಾನೂನಿಗಿಂತ ಯಾರು ದೊಡ್ಡವರಲ್ಲ. ಅಹಿತಕರ ಘಟನೆಗಳು ನಡೆಯದಂತೆ ಜಾಗೃತಿ ವಹಿಸಬೇಕು. ಎಲ್ಲರೂ ಕೆಇಬಿ, ಅಗ್ನಿಶಾಮಕ, ಪಪಂ ಹಾಗೂ ಪೊಲೀಸ್ ಇಲಾಖೆಯಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪರವಾನಿಗೆ ತರಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಭರಮಣ್ಣ. ವಕೀಲರು ಟಿ. ಹನುಮಂತಪ್ಪ.ಪ ಪಂ.ತೋಟದ ರಾಮಣ್ಣ.ಬದ್ದಿ ಮರಿಸ್ವಾಮಿ.ಬದ್ದಿ ದುರುಗೇಶ. ಶಿವಕುಮಾರ್. ಇಲಾಖೆ ಅಧಿಕಾರಿ ಎ. ಎಸ್. ಐ ಹಬ್ಬಾಸ್ . ಇನ್ನೂ ಅನೇಕರು ಸೇರಿದಂತೆ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು