ಜಗತ್ಪ್ರಸಿದ್ಧ ಮಹಾ ಮಾನವತಾವಾದಿ ಡಾ, ಬಿ.ಆರ್ ಅಂಬೇಡ್ಕರ್ – ಎಂ.ವಿ ಭವಾನಿ.
ಬಾಳೆಹೊನ್ನೂರು ಡಿ. 07

ಮಹಿಳೆಯರಿಗೆ ಸಮಾನತೆಯ ಹಕ್ಕು ಕೊಟ್ಟವರು ದೇವರಲ್ಲ, ಡಾ, ಬಿ.ಆರ್ ಅಂಬೇಡ್ಕರ್ ರವರು ಎಂದು ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕಿ ಎಂ.ವಿ ಭವಾನಿ ರವರು ಹೇಳಿದರು. ಅವರು ಶುಕ್ರವಾರ ಸಂಜೆ ಪಟ್ಟಣದ ಜೆಸಿ ವೃತ್ತದಲ್ಲಿ ಏರ್ಪಡಿಸಿದ್ದ ಬಾಬಾ ಸಾಹೇಬ್ ಡಾ, ಬಿ.ಆರ್ ಅಂಬೇಡ್ಕರ್ ರವರ 68 ನೇ. ಮಹಾ ಪರಿನಿರ್ವಾಣ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು. ಈ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ ಆಗಿದ್ದರೂ ಅದನ್ನು ಜಾರಿ ಮಾಡುವವರು ದುರುಪಯೋಗ ಮಾಡಿ ಕೊಳ್ಳುತ್ತಿದ್ದಾರೆ. ದಲಿತರಿಗೆ ರಕ್ಷಣೆ ನೀಡುವವರೇ ನ್ಯಾಯ ರಕ್ಷಣೆ ನೀಡದೆ ದಲಿತರ ವಿರುದ್ಧ ಅರ್ಧ ರಾತ್ರಿಯಲ್ಲಿ ಕೇಸು ದಾಖಲಿಸುತ್ತಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಜಿಲ್ಲಾ ಮಟ್ಟದಲ್ಲಿ ಚಳುವಳಿಗಳನ್ನು ಮಾಡಿ ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಬೇಕು. ಜಿಲ್ಲಾಡಳಿತ ಕೊಪ್ಪ ತಾಲೂಕ ತುಪ್ಪೂರಿನಲ್ಲಿ ಅಂಬೇಡ್ಕರ್ ಪುತ್ತಳಿ ನಿರ್ಮಾಣಕ್ಕೆ ಸ್ಥಳಾವಕಾಶ ಮಾಡಿ ಕೊಡಬೇಕು ಎಂದು ಹೇಳಿದರು. ಜಗತ್ಪ್ರಸಿದ್ಧ ಮಹಾ ಮಾನವತಾವಾದಿ ಡಾ, ಬಿ.ಆರ್ ಅಂಬೇಡ್ಕರ್ ರವರು ಎಳೆದು ತಂದಿರುವ ವಿಮೋಚನಾ ರಥವನ್ನು ನಾವೆಲ್ಲರೂ ಮುಂದಕ್ಕೆ ಕೊಂಡೊಯ್ಯನ ಅವರ ಆದರ್ಶಗಳನ್ನ ಪಾಲಿಸೋಣ ಎಂದು ಹೇಳಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕರಾದ ಸುಬ್ರಮಣ್ಯ ರವರು ಮಾತನಾಡಿ ಬಾಬಾ ಸಾಹೇಬ್ ಡಾ, ಬಿ.ಆರ್ ಅಂಬೇಡ್ಕರ್ ರವರು ನೀಡಿದ ಸಂವಿಧಾನ ಪ್ರಪಂಚದಲ್ಲಿಯೇ ಅತಿ ಶ್ರೇಷ್ಠ ಸಂವಿಧಾನವಾಗಿದೆ. ಈ ಸಂವಿಧಾನವನ್ನು ಒಪ್ಪದವರು ದೇಶ ಬಿಟ್ಟು ಹೋಗಬೇಕು ಸಂವಿಧಾನ ವಿರೋಧಿಗಳು ದೇಶ ಬಿಟ್ಟು ತೊಲಗಿರಿ ಎಂದು ಹೇಳಿದರು. ಕ.ದ.ಸಂ.ಸ ಎನ್.ಆರ್ ಪುರ ತಾಲೂಕ ಸಂಘಟನಾ ಸಂಚಾಲಕರಾದ ಸುನಿಲ್ ರವರು ಮಹಿಳಾ ಬಂಧುತ್ವ ವೇದಿಕೆಯ ತಾಲೂಕ ಸಂಚಾಲಕಿಯಾದ ಅಂಬುಜ, ಕೊಪ್ಪ ತಾಲೂಕು ಮಹಿಳಾ ಬಂಧುತ್ವ ವೇದಿಕೆಯ ತಾಲೂಕ ಸಂಚಾಲಕಿಯಾದ ಸವಿತಾ, ಹಾಗೂ ಭೀಮ್ ಆರ್ಮಿ ತಾಲೂಕ ಅಧ್ಯಕ್ಷರಾದ ಉಮೇಶ್ ಮುಂತಾದವರು ಉಪಸ್ಥಿತರಿದ್ದರು. ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೇಣದಬತ್ತಿ ಬೆಳಗಿಸಿ ಮೆರವಣಿಗೆ ನಡೆಸಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ನಮನ ಸಲ್ಲಿಸಲಾಯಿತು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು