ಕರುನಾಡು ರತ್ನ ಪ್ರಶಸ್ತಿಗೆ ಕೆ.ಎಸ್.ನಾಗರಾಜ್ ಗೌಡ ಆಯ್ಕೆ.
ಕೊಟ್ಟೂರು ನವೆಂಬರ್.19

ಸಮಾಜ ಮುಖಿ ಸೇವಾ ಸಂಘ (ರಿ) ಕರ್ನಾಟಕ ಹಾಗೂ ಶ್ರೀನಿಧಿ ಫೌಂಡೇಶನ್ (ರಿ) ಕರ್ನಾಟಕಇವರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿಧಾರವಾಡ ರಂಗಾಯಣದಲ್ಲಿ ಭಾನುವಾರ ಬೆಳಿಗ್ಗೆ ನಡಿಯುವ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರಿಗೆ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಕೊಟ್ಟೂರಿನ ದಿ. ಕೆ ಎಸ್ ಕೊಟ್ರು ಗೌಡರ ಮಗನಾದಕೆ ಎಸ್ ನಾಗರಾಜ್ ಗೌಡ ಇವರಿಗೆಕರುನಾಡು ರತ್ನ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದು ಶ್ರೀನಿಧಿ ಫೌಂಡೇಶನ್ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಶಿವಕನವರು ತಿಳಿಸಿದ್ದಾರೆ.

ಕೆ ಎಸ್ ನಾಗರಾಜ್ ಗೌಡ ಇವರು ಪಟ್ಟಣ ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ನಡಿಯುವಧಾರ್ಮಿಕ ಕೈಂಕರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ ,ಶಿವರಾಜ್ ಕುಮಾರ್ ಹಾಗೂ ರಮೇಶ್ ನಟಿಸಿರುವ ಭೂಮಿ ತಾಯಿ ಚೊಚ್ಛಲ ಮಗ ಚಲನ ಚಿತ್ರದಲ್ಲಿ ನಟಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ಮೊಮ್ಮಗ ಹಾಗೂ ರಾಜ್ಯ ರಸ್ತೆ ಬದಿ ವ್ಯಾಪಾರ ಮಹಾ ಮಂಡಳ ವಿಜಯನಗರ ಜಿಲ್ಲೆಯ ಸದಸ್ಯರು ಮತ್ತುಸ್ಥಳೀಯ ತಾಲೂಕಾ ಉಪಾಧ್ಯಕ್ಷರಾಗಿ ಸೇವಿ ಸಲ್ಲಿಸುತ್ತಿರುವ ಇವರು ಕನ್ನಡ ನಾಡಿನ ನೆಲ, ಜಲ, ಭಾಷೆಯ ಹಿತಕ್ಕಾಗಿ ತಮ್ಮನ್ನು ತಾವು ತೊಡಗಿಸಿ ಕೊಂಡು ಧಾರ್ಮಿಕ ಕ್ಷೇತ್ರದಲ್ಲಿ ಸಲ್ಲಿಸಿದ ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಇವರಿಗೆ “ಕರುನಾಡು ರತ್ನ ಪ್ರಶಸ್ತಿ” ಯನ್ನು ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಲಾಗುವುದು ಎಂದು ಗೌರವಾಧ್ಯಕ್ಷರು ಡಾ.ಮಂಜುನಾಥ ಎನ್. ಶಿವಕ್ಕನವರ ತಿಳಿಸಿದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು