ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಆಗುವುದು ನಿಶ್ಚಿತ – ಬಿ.ಎಸ್. ಯಡಿಯೂರಪ್ಪ.
ಕೂಡ್ಲಿಗಿ ಏಪ್ರಿಲ್.17

ಜನ ಮೋದಿ ಅವರ ಆಡಳಿತ ಮೆಚ್ಚಿ ಕೊಂಡಿದ್ದಾರೆ. ಈ ಬಾರಿ ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದು ಖಚಿತ, ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಆಗುವುದು ನಿಶ್ಚಿತ ಎಂದರು. ತಾಲೂಕಿನ ಕಾನ ಹೊಸ ಹಳ್ಳಿಯಲ್ಲಿ ನಡೆದ ಬಳ್ಳಾರಿ ಲೋಕಸಭಾ ಚುನಾವಣೆ ಭಾರತೀಯ ಜನತಾ ಪಾರ್ಟಿಯ ಕೂಡ್ಲಿಗಿ ಮಂಡಲ ವಿಜಯನಗರ ಜಿಲ್ಲೆ ಲೋಕಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾತನಾಡಿದ ಅವರು, ಬಳ್ಳಾರಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರು ಭಾರಿ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾನು 82 ವರ್ಷವಾದರೂ ರಾಜ್ಯದ ಉದ್ದಗಲಕ್ಕೂ ಓಡಾಡುತ್ತಿದ್ದೇನೆ. ದೇವರು ಶಕ್ತಿ ಕೊಟ್ಟರೆ ಇನ್ನೂ ಒಂದು ಲೋಕಸಭೆ ಚುನಾವಣೆ, ವಿಧಾನಸಭೆ ಚುನಾವಣೆ ನಡೆಸುತ್ತೇನೆ ಎಂದು ತಿಳಿಸಿದರು. ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ 4ಸಾವಿರ ರೂ. ನಾನು ಕೊಡುತ್ತಿದ್ದೆ, ಕೊಡುವುದನ್ನು ಸಿದ್ಧರಾಮಯ್ಯ ಸರ್ಕಾರ ನಿಲ್ಲಿಸಿದೆ. ಇದಷ್ಟೇ ಅಲ್ಲ, ದುಡ್ಡಿಲ್ಲದೆ ಕಾಂಗ್ರೆಸ್ ಸರ್ಕಾರ ಭಾಗ್ಯ ಲಕ್ಷ್ಮಿ ಯೋಜನೆ, ಹಾಲು ಉತ್ಪಾದನೆ ಪ್ರೋತ್ಸಾಹ ಧನ ಸೇರಿದಂತೆ ಹಲವು ಯೋಜನೆಗಳನ್ನು ನಿಲ್ಲಿಸಿದೆ. ಕಾಂಗ್ರೆಸ್ ರೈತ ವಿರೋಧಿಯಾಗಿದೆ ಎಂದು ಕಿಡಿಕಾರಿದರು. ಈ ಸಂದರ್ಭದಲ್ಲಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಮಾತನಾಡಿ ಕೂಡ್ಲಿಗಿ ಕ್ಷೇತ್ರದಲ್ಲಿ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ನಿರ್ಮಾಣದ ಪ್ರಯತ್ನ ನಮ್ಮ ಸರ್ಕಾರದ ಅವಧಿಯಲ್ಲಿ ಆಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ 10 ತಿಂಗಳಾದರೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಕಿಡಿಗಾಡಿದರು. ನಾನು ಕಳೆದ ಬಾರಿ ಸೋಲಿಸಿದ್ದಕ್ಕೆ ಜನ ತುಂಬಾ ನೋವು ಪಟ್ಟಿದ್ದಾರೆ. ಶ್ರೀರಾಮುಲು ರಾಜಕಾರಣದಿಂದ ಕಳೆದು ಹೋಗಬಾರದು, ಶ್ರೀರಾಮುಲು ಜನರ ಮಧ್ಯೆ ಇರಬೇಕು. ಕಳೆದ ಮೂವತ್ತು ವರ್ಷಗಳಿಂದ ಶ್ರೀರಾಮುಲು ರಾಜಕಾರಣದಲ್ಲಿದ್ದು, ಜನ ಸೇವೆ ಮಾಡಿದ್ದಾರೆ. ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂಬುದು ಜನತೆಯ ಅಭಿಪ್ರಾಯ. ಹಾಗಾಗಿ ಈ ಸಾರಿ ಜನ ಸಂಕಲ್ಪ ಮಾಡಿ ನನ್ನನ್ನು ಗೆಲ್ಲಿಸಲಿದ್ದಾರೆ, ಕೈ ಬಿಡುವ ಪ್ರಶ್ನೇಯೇ ಇಲ್ಲ ಎಂದರು, ಎಲ್ಲೆಡೆ ಪ್ರಧಾನಿ ನರೇಂದ್ರ ಮೋದಿ ಪರ ಗಾಳಿ ದಿನ ದಿನಕ್ಕೂ ಬಿರುಗಾಳಿಯಾಗಿ ಬೀಸುತ್ತಿದೆ.

ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗುವುದು ನಿಶ್ಚಿತ. ಅವರಿಗೆ ಶಕ್ತಿ ತುಂಬಲು ಚುನಾವಣೆಯಲ್ಲಿ ನನ್ನನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದರು. ಈ ವೇಳೆ ಅರುಣಾ ಲಕ್ಷ್ಮೀ ಜನಾರ್ದನ ರೆಡ್ಡಿ ಮಾತನಾಡಿ ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ ಮೋದಿ ಪ್ರಧಾನಿ ಆಗೋದು ಸತ್ಯ ಎಂದರು. ನನ್ನ ಸೋದರ ಅಣ್ಣನಾದ ಶ್ರೀರಾಮುಲು ಅವರು ಸಚಿವರ ಆರೋಗ್ಯ ಸಚಿವರ ಆದಾಗ ಇಡೀ ರಾಜ್ಯಕ್ಕೆ 108 ಆಂಬುಲೆನ್ಸ್ ಗಳನ್ನು ಕೊಡುಗೆ ಕೊಟ್ಟಿದ್ದರು, ಅವಳಿ ಜಿಲ್ಲೆಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪರವಾಗಿದೆ. ಹಾಗಾಗಿ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕಾಗಿ ಮತದಾರರಲ್ಲಿ ಮನವಿ ಮಾಡಿದರು.ರಾಜ್ಯಕ್ಕೆ ಪ್ರಥಮ ರಾಂಕ್ ಪಡೆದ ವಿದ್ಯಾರ್ಥಿ ಚೌಡಾಪುರ ಗ್ರಾಮದ ಕವಿತಾ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಲಾ ವಿಭಾಗದಲ್ಲಿ 600ಕ್ಕೆ 596 ಅಂಕ ಗಳಿಸುವ ಮೂಲಕ ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಬಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಅಭಿನಂದಿಸಿ ವಿದ್ಯಾರ್ಥಿಗೆ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರು, ಬಿಜೆಪಿ ಲೋಕಸಭೆ ಅಭ್ಯರ್ಥಿ ಶ್ರೀರಾಮುಲು, ಬಂಗಾರು ಹನುಮಂತು, ಲಕ್ಷ್ಮೀ ಅರುಣಾ ಜನಾರ್ದನ ರೆಡ್ಡಿ, ಬಿಜೆಪಿ ಜಿಲ್ಲಾ ಉಸ್ತುವಾರಿ ಎಂ ಎಲ್ ಸಿ ರವಿಕುಮಾರ್ . ಚಂದ್ರಶೇಖರ್ ಅಲಗೇರಿ.ಬಿಜೆಪಿ ಜಿಲ್ಲಾಧ್ಯಕ್ಷ ಚೆನ್ನಬಸವನ ಗೌಡ್ರು. ಮಂಡಲದ ಬಿಜೆಪಿ ಉಸ್ತುವಾರಿ ಸೂರ್ಯ ಪಾಪಣ್ಣ. ಮಂಡಲ ಅಧ್ಯಕ್ಷ ಬಣವಿಕಲ್ ನಾಗರಾಜು. ನಿಕಟ ಪೂರ್ವ ಅಧ್ಯಕ್ಷ ಕೆ ಚನ್ನಪ್ಪ. ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಹೊಂಬಾಳೆ ರೇವಣ್ಣ. ಮಾರಬದ ಶಿವಣ್ಣ. ಎಸ್ ಪಿ ಪ್ರಕಾಶ್. ಯುವ ಮುಖಂಡ ಗುಳಿಗೆ ವೀರೇಂದ್ರ .ಕೆ ಸುಭಾಷ್ ಚಂದ್ರ. ಎರಿಸ್ವಾಮಿ ರೆಡ್ಡಿ. ಕುಲುಮೆಹಟ್ಟಿ ವೆಂಕಟೇಶ್. ಚಂದ್ರ ಮೌಳಿ. ಜರ್ಮಲಿ ಶಶಿಧರ. ಕೋಡಿಹಳ್ಳಿ ಭೀಮಣ್ಣ. ಕೆಟಿ ಮಲ್ಲೇಶ್. ಕೆ ಜಿ ನಾಗರಾಜ ಗೌಡ.ಹನುಮಜ್ಜ ನಾಗೇಶ್. ಮಹಿಳಾ ಮೋರ್ಚಾ ಅಧ್ಯಕ್ಷ ಶಾರದ ಕುಂಬಾರ್. ರೇಖಾ ಮಲ್ಲಿಕಾರ್ಜುನ. ಗ್ರಾಮ ಪಂಚಾಯತಿ ಉಪಾಧ್ಯಕ್ಷ ನೇತ್ರಾವತಿ ಮಂಜುನಾಥ್. ಮಂಜುನಾಥ್. ಎಲ್ ಪವಿತ್ರ. ನೇತ್ರಾವತಿ. ಲಕ್ಷ್ಮಿಬಾಯಿ. ಮಂಡಲದ ಪ್ರಧಾನ ಕಾರ್ಯದರ್ಶಿ ಮಂಜುನಾಥ. ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆಎಚ್ ಎಂ ಸಚಿನ್ ಕುಮಾರ್. ಕರಿ ವೀರಪ್ಪ. ಆಲೂರು ಕೆ. ಟಿ. ಮಲ್ಲಿಕಾರ್ಜುನ. ಯಂಬಳಿ ಗಂಗಣ್ಣ. ಭೀಮೇಶ್. ದುರ್ಗೇಶ್. ನಿರಂಜನ್ ಕುಮಾರ್ ಎ.ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಕಾರ್ಯಕರ್ತರು ಯುವಕರು ಉಪಸ್ಥಿತರಿದ್ದರು. ಶ್ರೀರಾಮುಲು ಅಭಿಮಾನಿಗಳು. ನಾನಾ ಪಕ್ಷದ ಕಾರ್ಯಕರ್ತರು ಬಿ ಶ್ರೀರಾಮುಲು ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ ಗೊಂಡರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.