ಬ್ರಾಹ್ಮಣ ಸಮಾಜದಿಂದ ಭಗವದ್ಗೀತಾ – ಅಭಿಯಾನ ಮಹಾ ಮಂಗಲ.
ಇಲಕಲ್ಲ ನ.25

“ಶ್ರದ್ಧೆಯು ಭಕ್ತಿಗೆ ಮೂಲಾಧಾರವಾಗಿದೆ, ಭಕ್ತಿಯಿಂದ ಭಗವಂತನಿಗೆ ನಮ್ಮ ಮನಸ್ಸನ್ನು ಸಮರ್ಪಣೆ ಮಾಡಿದಾಗ ಸಮಾನತೆಯ ಸಂಸ್ಕಾರವು ದೊರೆತು ಧಾರ್ಮಿಕ ಜಾಗೃತಿ ಉಂಟಾಗುತ್ತದೆ. ಸದಾಚಾರ ಹಾಗೂ ಸದ್ಧರ್ಮಗಳು ಉತ್ತಮ ಸಮಾಜದ ನಿರ್ಮಾಣಕ್ಕೆ ಬುನಾದಿಯಾಗಿವೆ” ಎಂದು ಪಂಡಿತ ಶ್ರೀನಿಧಿ ಆಚಾರ್ಯ ಬಲ್ಲರವಾಡ ಅವರು ಭಗವದ್ಗೀತೆಯ ಸಂದೇಶವನ್ನು ಹೇಳಿದರು. ಇಳಕಲ್ ಶ್ರೀ ವೆಂಕಟೇಶ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಭಗವದ್ಗೀತಾ ಅಭಿಯಾನದ ಮಂಗಲ ಮಹೋತ್ಸವದಲ್ಲಿ ಅವರು ಪ್ರವಚನವನ್ನು ನೀಡುತ್ತಿದ್ದರು.

ಉತ್ತರಾದಿ ಮಠಾಧೀಶ ಶ್ರೀಸತ್ಯಾತ್ಮ ತೀರ್ಥ ಗುರುಗಳ ಸುವರ್ಣ ಮಹೋತ್ಸವದ ಅಂಗವಾಗಿ ಕಳೆದ ಹತ್ತು ತಿಂಗಳುಗಳಿಂದ ಶ್ರೀಮದ್ ಭಗವದ್ಗೀತಾ ಅಭಿಯಾನವನ್ನು ದೇಶಾದ್ಯಂತ 108 ಸ್ಥಳಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಇಳಕಲ್ ಬ್ರಾಹ್ಮಣ ಸಮಾಜದ ಶ್ರೀ ಲಕ್ಷ್ಮೀ ವೆಂಕಟೇಶ ಸೇವಾ ಸಂಸ್ಥೆಯು ಉತ್ತರಾದಿ ಮಠ ಜ್ಞಾನ ವಾಹಿನಿ ಹಾಗೂ ಬಾಗಲಕೋಟೆಯ ವಿಶ್ವಮಾಧ್ವ ಪರಿಷತ್ತುಗಳು ಸಂಯುಕ್ತವಾಗಿ ಈ ಅಭಿಯಾನದಲ್ಲಿ ಭಾಗಿಯಾಗಿವೆ. ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಪಾಂಡುರಂಗ ಕುಲಕರ್ಣಿ ಅವರು ಅಭಿಯಾನದ ನೇತೃತ್ವವನ್ನು ವಹಿಸಿದ್ದರು.

ಹಿರಿಯರಾದ ಬಂಡು ಕಟ್ಟಿಯವರು ಕಾರ್ಯಕ್ರಮಗಳನ್ನು ಸಂಯೋಜಿಸಿದ್ದರು. ಅವರು ತಯಾರಿಸಿದ ‘ಇಳಕಲ್ ಭಗವದ್ಗೀತಾ ಅಭಿಯಾನ ಕಿರಿಯರಿಕೆ’ ಎಂಬ ಬುಲೆಟಿನ್ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಶ್ರೀಹರಿ ಪೂಜಾರ ಹಾಗೂ ರಾಮಚಂದ್ರ ಹುನಕುಂಟಿ ಅವರು ಸುಶ್ರಾವ್ಯವಾಗಿ ವೇದಘೋಷ ಮಾಡಿದರು. ಟಿ.ಎಚ್ ಕುಲಕರ್ಣಿ ಹಾಗೂ ಶ್ರೀಮತಿ ಛಾಯಾ ಪುರಂದರೆಯವರು ಅಭಿಯಾನದ ಬಗ್ಗೆ ಅನಿಸಿಕೆಗಳನ್ನು ತಿಳಿಸಿ ಭಗವದ್ಗೀತೆಯು ಜನರನ್ನು ಉತ್ತಮ ಜೀವನಕ್ಕಾಗಿ ಪ್ರೇರೇಪಿಸಿದೆ ಎಂದು ಹೇಳಿದರು.

ಬ್ರಾಹ್ಮಣ ಸಮಾಜದ ಪರವಾಗಿ ಪಂ. ಶ್ರೀನಿಧಿ ಆಚಾರ್ಯರನ್ನು ಸನ್ಮಾನಿಸಲಾಯಿತು. ಮಂಗಲ ಮಹೋತ್ಸವದ ತೀರ್ಥ ಪ್ರಸಾದ ವ್ಯವಸ್ಥೆಯನ್ನು ನೇತ್ರತಜ್ಞರಾದ ಡಾ, ಸುಶೀಲ ಕಾಖಂಡಕಿ ಪರಿವಾರವು ವ್ಯವಸ್ಥೆ ಗೊಳಿಸಿತ್ತು. ಸಮಾಜದ ಪರವಾಗಿ ಅವರ ಕುಟುಂಬಕ್ಕೆ ಕೃತಜ್ಞತೆಗಳನ್ನು ತಿಳಿಸಲಾಯಿತು. ಭಗವದ್ಗೀತಾ ಗ್ರಂಥವನ್ನು ಪಲ್ಲಕ್ಕಿಯಲ್ಲಿಟ್ಟು ನಗರದ ಮುಖ್ಯ ರಸ್ತೆಗಳಲ್ಲಿ ಮಂಗಳ ವಾದ್ಯಗಳೊಂದಿಗೆ ಸಂಭ್ರಮದಿಂದ ಮೆರವಣಿಗೆ ಮಾಡಲಾಯಿತು.

ಬ್ರಾಹ್ಮಣ ಯುವಕ ಸಂಘ ಹಾಗೂ ಶ್ರೀಲಕ್ಷ್ಮೀ ಮಹಿಳಾ ಮಂಡಳಿಗಳು ಮೆರವಣಿಗೆಯ ನೇತೃತ್ವವನ್ನು ವಹಿಸಿದ್ದವು. ಅಭಿಯಾನದ ಯಶಸ್ಸಿಗಾಗಿ ಸೇವೆ ಸಲ್ಲಿಸಿದ ಶ್ರೀಮತಿ ಸುದೀಪ್ತಾ ಕಾಖಂಡಕಿ, ವಿದ್ವತ್ ಕಾಖಂಡಕಿ, ರಮೇಶ ಕುಲಕರ್ಣಿ ದಂಪತಿಗಳು, ಬಂಡು ಕಟ್ಟಿ, ಪಾಂಡುರಂಗ ಕುಲಕರ್ಣಿ, ಗಿರಿಧರ ದೇಸಾಯಿ, ನಳಪಾಕ ಪ್ರವೀಣ ಕೃಷ್ಣ ದೇಸಾಯಿ ಮುಂತಾದವರನ್ನು ಸನ್ಮಾನಿಸಲಾಯಿತು.

ಹಿರಿಯರಾದ ಡಾ, ಆರ್.ಎಮ್ ಕುಲಕರ್ಣಿ, ಪ್ರೊ. ಎಸ್.ಕೆ ಕುಲಕರ್ಣಿ, ಪ್ರೊ. ಕೆ.ವಿ ಸಂಗಮ, ಪ್ರೊ. ರಮೇಶ ಕುಲಕರ್ಣಿ, ನಾರಾಯಣಾಚಾರ್ಯ ಪೂಜಾರ, ವಿಜಯ ಕಾರ್ಕಳ, ಭಾಸ್ಕರ ಪಾಟೀಲ, ವೆಂಕಣ್ಣ ಕುಲಕರ್ಣಿ, ಜಗದೀಶ ಮರೋಳ, ಸತ್ಯನಾರಾಯಣ ಕರವಾ ಮುಂತಾದವರು ಅಭಿಯಾನದಲ್ಲಿ ಉಪಸ್ಥಿತರಿದ್ದರು. ಚಿದಂಬರ ದೇಶಪಾಂಡೆ ಹಾಗೂ ಸುರೇಶ ಪೂಜಾರ ಅವರು ಭೋಜನಕಾಲ ಸೀತಾಕಾಂತ ಸ್ಮರಣೆಯನ್ನು ಮಾಡಿದರು. ಬ್ರಾಹ್ಮಣ ಸಮಾಜದ ಕೋಶಾಧ್ಯಕ್ಷರಾದ ಕಾಶಿನಾಥ ದೇಶಪಾಂಡೆ ಅವರು ವಂದನಾರ್ಪಣೆ ಸಲ್ಲಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ