ಶಿಕ್ಷಣವು ವಿದ್ಯಾರ್ಥಿಯೊಳಗೆ ಈಗಾಗಲೇ ಏನಿದೆ ಎಂಬುದನ್ನು ಹೊರ ತೆಗೆಯುತ್ತದೆ – ಮಹಾಂತೇಶ ಕವಟಗಿಮಠ.
ನರೇಗಲ್ಲ ಫೆ.14

ವಿದ್ಯಾರ್ಥಿ ಜೀವನವು ಒಂದು ನಿರ್ಣಾಯಕ ಅಂಶವಾಗಿದೆ ಏಕೆಂದರೆ ಅದು ನಾವು ವ್ಯಕ್ತಿಗಳಾಗಿ ಹೇಗೆ ಬೆಳೆಯುತ್ತೇವೆ ಎಂಬುದನ್ನು ನಿರ್ಧರಿಸುತ್ತದೆ. ವಿದ್ಯಾರ್ಥಿ ಜೀವನದ ಕುರಿತಾದ ಈ ಪ್ರಬಂಧವು ಅದರ ಅನೇಕ ಪ್ರಯೋಜನಗಳನ್ನು ಅರ್ಥ ಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಶಿಕ್ಷಣ ಅಥವಾ ವಿದ್ಯಾರ್ಥಿ ಜೀವನ ಎಂದರೇನು ಎಂದು ಅನೇಕರಿಗೆ ತಿಳಿದಿಲ್ಲ ವಾದ್ದರಿಂದ, ಶಿಕ್ಷಣವನ್ನು ಪಡೆಯಲು ನಾವು ನಮ್ಮನ್ನು ಅದೃಷ್ಟವಂತರು ಎಂದು ಪರಿಗಣಿಸಬೇಕು. ಎಂದು ಮಾಜಿ ಶಾಸಕ ಮಹಾಂತೇಶ ಕವಟಗಿಮಠ ಹೇಳಿದರು.ಪಟ್ಟಣದ ಅನ್ನದಾನೇಶ್ವರ ಪದ ವಿಪೂರ್ವ ಮಹಾ ವಿದ್ಯಾಲಯದಲ್ಲಿ ನಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಒಬ್ಬ ವ್ಯಕ್ತಿಯು ಒಂದು ಕಲ್ಪನೆ ಅಥವಾ ಅನುಭವ ದೊಂದಿಗೆ ಸಂವಹನ ನಡೆಸಿದಾಗ ಜ್ಞಾನವು ಅವನ ಮನಸ್ಸಿನಲ್ಲಿ ಹುಟ್ಟುತ್ತದೆ. ಶಿಕ್ಷಣವು ವಿದ್ಯಾರ್ಥಿ ಯೊಳಗೆ ಈಗಾಗಲೇ ಏನಿದೆ ಎಂಬುದನ್ನು ಹೊರ ತೆಗೆಯುವುದು. ಅಲ್ಲದೆ, ಶಿಕ್ಷಕರು ವಿದ್ಯಾರ್ಥಿಗಳಿಗೆ ತಮ್ಮ ಜೀವನದಲ್ಲಿ ಅತ್ಯುತ್ತಮ ಸ್ಥಾನಗಳನ್ನು ಪಡೆಯಲು ಮತ್ತು ಅವರ ವೃತ್ತಿ ಜೀವನದಲ್ಲಿಯೂ ಸಹ ಅತ್ಯುತ್ತಮವಾದ ಸ್ಥಾನಗಳನ್ನು ಪಡೆಯಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ನೀಡಬೇಕು ಎಂಬುದು ಶಿಕ್ಷಕರ ಕರ್ತವ್ಯ ಮತ್ತು ಕೇವಲ ಜವಾಬ್ದಾರಿ ಯಾಗಿದೆ ಎಂದು ಉಪ ನಿರ್ದೇಶಕ ಸಿದ್ದಲಿಂಗ ಬಂಡು ಮಾತನಾಡಿದರು. ಪ್ರಾಚಾರ್ಯ ಎಂ.ಸಿ. ಕಟ್ಟಿಮನಿ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಯನ್ನು ಮನೋ ಸ್ಥೆರ್ಯದಿಂದ ಎದುರಿಸಿ, ಹೆಚ್ಚಿನ ಅಂಕಗಳನ್ನು ಗಳಿಸಿಕೊಳ್ಳ ಬೇಕೆಂಬುದರ ಕುರಿತು ಹೇಳಿದರು. ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ನಮ್ಮ ಪರಿಸರ ಸ್ನೇಹ ಹೇಗಿರುತ್ತದೆಯೋ ಹಾಗೆ ನಾವಿರುತ್ತೇವೆ. ನಮ್ಮ ವ್ಯಕ್ತಿತ್ವಕ್ಕೆ ನಮ್ಮ ಗೆಳೆಯರ ಬಳಗವೂ ಕಾರಣವಾಗುತ್ತದೆ. ಭವಿಷ್ಯದಲ್ಲಿ ಉತ್ತಮ ನಾಗರಿಕರಾಗ ಬೇಕೆನ್ನುವವರು ಉತ್ತಮ ಗೆಳೆಯರ ಸ್ನೇಹ ಮಾಡಬೇಕು ಎಂದು ಹೇಳಿದರು.ಸಮಾರಂಭದಲ್ಲಿ ಅಧ್ಯಕ್ಷ ಎಂ.ಜಿ. ಸೋಮನಕಟ್ಟಿ, ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಆಡಳಿತಾಧಿಕಾರಿ ಎನ್.ಆರ್. ಗೌಡರ, ಶೈಕ್ಷಣಿಕ ಮೇಲ್ವಿಚಾರಕ ಬಿ.ಎಸ್. ಗೌಡರ, ಸದಸ್ಯರಾದ ಬಸವರಾಜ ಕಳಕಣ್ಣವರ, ಎಂ.ಪಿ. ಪಾಟೀಲ, ವಿ.ಎಸ್. ಧೋತ್ರದ, ಪ್ರಾಚಾರ್ಯ ವೈ.ಸಿ. ಪಾಟೀಲ ಸೇರಿದಂತೆ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್. ವಿ ಸಂಕನಗೌಡ್ರ. ರೋಣ.ಗದಗ