ಸಾಮೂಹಿಕ ವಿವಾಹಗಳು ಬಡ ಕುಟುಂಬಗಳ ಪಾಲಿಗೆ ಅಕ್ಷಯ ಪಾತ್ರೆಗಳಾಗಿವೆ – ಬಾದವಾಡಗಿ.
ಹುನಗುಂದ ಮೇ.03

ಸಾಮೂಹಿಕ ವಿವಾಹಗಳಿಂದ ಸಾಕಷ್ಟು ಬಡ ಕುಟುಂಬಗಳಿಗೆ ಅನುಕೂಲವಾಗುವುದಲ್ಲದೆ. ಆರ್ಥಿಕ ಸಂಕಷ್ಟವನ್ನು ದೂರ ಮಾಡುತ್ತವೆ. ದೇವಸ್ಥಾನ ಸಮಿತಿ ಮತ್ತು ಟ್ರಸ್ಟ್ ನಡೆಸುವ ಸಾಮೂಹಿಕ ಮದುವೆಗಳು ಸಾಕ್ಷಾತ್ ಶಿವನ ಸಮ್ಮುಖದಲ್ಲಿ ಮದುವೆಯಾದಂತೆ ಎಂದು ಶ್ರೀ ಸಂಗಮಶ್ವರ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶೇಖರಪ್ಪ ಬಾದವಾಡಗಿ ಹೇಳಿದರು. ಪಟ್ಟಣದ ಶ್ರೀ ಶ್ರೀಶೈಲ ಪಾದಯಾತ್ರಾ ಸೇವಾ ಸಮಿತಿ ಪ್ರತಿ ವರ್ಷದಂತೆ ಬೋರಮ್ಮದೇವಿ ಮಹಾ ಪೂಜಾ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ವಿವಾಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರ್ಥಿಕ ಸುಸ್ಥತಿಯಲ್ಲಿರುವ ಕುಟುಂಬಗಳಲ್ಲಿ ಆಡಂಭರದ ಮದುವೆಗಳು ನಡೆಯುತ್ತಿವೆ. ಇಂತಹ ಆಡಂಭರದ ಮದುವೆಗಳನ್ನು ಮಾಡಲು ಸಾಧ್ಯವಾಗದೇ ಇರುವ ಅದೆಷ್ಟೇ ಬಡ ಕುಟುಂಬಗಳು ಇಂತಹ ಸಾಮೂಹಿಕ ಮದೆವೆಗಳತ್ತ ಮುಖ ಮಾಡುತ್ತಿದ್ದಾರೆ, ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ದಂಪತಿಗಳು ಚಿಕ್ಕ ಸಂಸಾರ ಚೊಕ್ಕ ಸಂಸಾರ ನಡೆಸಬೇಕು ಎಂದರು.ಸಮಿತಿ ಅಧ್ಯಕ್ಷ ವೀರೇಶ ಕುರ್ತಕೋಟಿ ಮಾತನಾಡಿ ಕಳೆದ ದಶಕದಿಂದಲೂ ಪಟ್ಟಣದ ಬಸವ ಮಂಟಪದಲ್ಲಿ ಪಟ್ಟಣದ ಎಲ್ಲರ ಸಹಕಾರದೊಂದಿಗೆ ಧಾರ್ಮಿಕ ಕಾರ್ಯಕ್ರಮ ನಡೆಸುತ್ತ ಬಂದಿದೆ. ಪ್ರತಿ ವರ್ಷವೂ ಹುನಗುಂದ ಮಾರ್ಗವಾಗಿ ಶ್ರೀಶೈಲಕ್ಕೆ ಹೋಗುವ ಪಾದಯಾತ್ರಾರ್ಥಿಗಳಿಗೆ ಅತ್ಯವಶ್ಯಕ ಮೂಲ ಸೌಕರ್ಯಗಳನ್ನು ಒದಗಿಸುವುದು ಮತ್ತು ಮದುವೆಗಳನ್ನು ನಡೆಸಲಾಗುತ್ತಿದೆ. ಸಾಮೂಹಿಕ ವಿವಾಹಗಳು ದುಂದು ವೆಚ್ಚಕ್ಕೆ ಕಡಿವಾಣ ಹಾಕುತ್ತವೆ ಎಂದರು.ಸಮಿತಿ ಕಾರ್ಯದರ್ಶಿ ಮಹಾಂತೇಶ ಹೊದ್ಲೂರ ಮಾತನಾಡಿ ಈ ವರ್ಷ ೨ ಮದುವೆಗಳನ್ನು ಮಾಡಿದ್ದು. ಮುಂದಿನ ದಿನಗಳಲ್ಲಿ ನಮ್ಮ ಸಮಿತಿಯಿಂದ ಇನ್ನು ಹೆಚ್ಚಿನ ಮದುವೆಗಳನ್ನು ಮಾಡಲು ಪ್ರಯತ್ನಿಸಲಾಗುವದು ಎಂದರು. ವೀರೇಶ ಶಾಸ್ತ್ರಿಮಠ ಕಲ್ಯಾಣ ಮಹೋತ್ಸವದ ನೇತೃತ್ವ ವಹಿಸಿದ್ದರು. ಶೇಖಯ್ಯ ಪುರದಯ್ಯನಮಠ ಬೊರಮ್ಮತಾಯಿ ಮಹಾಪೂಜೆ ನೆರವೇರಿಸಿದರು. ನಂತರ ಸಾವಿರಾರು ಭಕ್ತರು ನವ ದಂಪತಿಗಳಿಗೆ ಅಕ್ಷತೆ ಹಾಕಿ ಶುಭ ಹಾರೈಸಿ ಪ್ರಸಾದ ಸ್ವೀಕರಿಸಿದರು. ಸಮಿತಿ ಉದಾಧ್ಯಕ್ಷ ಕಿಡಿಯಪ್ಪ ಹೋಲಗೇರಿ,ಜಗಧೀಶ ಬಳ್ಳೊಳ್ಳಿ,ಮುತ್ತಣ್ಣ ಹವಾಲ್ದಾರ, ಬಸವರಾಜ ಜಮಾದಾರ,ಶರಣಯ್ಯ ತಾವರಗೇರಿಮಠ,ಪರಸಪ್ಪ ಮಜ್ಜಗಿ,ಮಲ್ಲಪ್ಪ ಪಲ್ಲೇದ,ನಾಗಪ್ಪ ತ್ಯಾಪಿ,ಮುತ್ತಪ್ಪ ಪಲ್ಲೇದ,ಮುತ್ತಣ್ಣ ಹಳಪೇಟಿ,ಶಿವಪ್ಪ ಬಾದವಾಡಗಿ,ಈರಪ್ಪ ಮೇಳಿ,ಮಲ್ಲನಗೌಡ ಪಾಟೀಲ,ಪ್ರಭು ಬೆಳ್ಳಿಹಾಳ,ಮುತ್ತು ಜವಳಗೇರಿ,ಶರಣಪ್ಪ ಹಳಪೇಟಿ,ಶಿವನಗೌಡ ಹಿರೇವೆಂಕನಗೌಡ್ರ,ವಿಜಯಕುಮಾರ ಬೆಳ್ಳಿಹಾಳ,ಶಾಂತಪ್ಪ ಹೊಸಮನಿ,ಚೇತನ ಹಳಪೇಟಿ,ನಾಗನಗೌಡ ನಾಡಗೌಡ್ರ,ಹಿರಿಯ ಪತ್ರಕರ್ತ ಮಲ್ಲು ದರಗಾದ,ಸಂಗಣ್ಣ ಕರಂಡಿ, ಶಿವಪ್ಪ ನಾಗೂರ,ಮುತ್ತಣ್ಣ ಮನ್ನಾಪೂರ,ಮಲ್ಲು ತಾರಿವಾಳ,ಸಂಗಮೇಶ ವೀರಾಪೂರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ.