ಕೊಟ್ಟೂರಿನಲ್ಲಿ ತಾಲೂಕ ಮಟ್ಟದ ದಸರಾ ಕ್ರೀಡಾಕೂಟ.
ಕೊಟ್ಟೂರು ಸಪ್ಟೆಂಬರ್.21
2023/24ನೇ ಸಾಲಿನ ನೂತನವಾಗಿ ಕೊಟ್ಟೂರು ತಾಲೂಕು ಪ್ರಥಮ ಬಾರಿಗೆ ದಸರಾ ಕ್ರೀಡಾಕೂಟದ ಸ್ಪರ್ಧೆಗಳನ್ನು ಪುರುಷ ಮತ್ತು ಮಹಿಳೆಯರಿಗಾಗಿ ಏರ್ಪಡಿಸಲಾಗಿತ್ತು.
ಕರ್ನಾಟಕ ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆವತಿಯಿಂದ ಮೈಸೂರಿನಲ್ಲಿ 15-10-2023ರಿಂದ 19-10-2023ರ ವರೆಗೆ ನಡೆಯಲಿರುವ ಕ್ರೀಡಾಕೂಟ ಅದ್ದೂರಿಯಾಗಿ ನಡೆಸಲು ಬಿ ನಾಗೇಂದ್ರ ಯುವಜನ ಸೇವಾ ಕ್ರೀಡಾ ಇಲಾಖೆ ಸಚಿವರು ಅತ್ಯಂತ ಅಚ್ಚುಕಟ್ಟಾಗಿ ನಡೆಸಬೇಕೆಂಬ ಆಶಯ ತೊಟ್ಟಿದ್ದಾರೆ ಹಾಗೂ ಹಳ್ಳಿಗಳಲ್ಲಿ ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ಮತ್ತು ಕ್ರೀಡಾ ಬಗ್ಗೆ ಹೆಚ್ಚು ಒತ್ತು ಕೊಡುವುದರಿಂದ ಮಾನವನ ಆಯಸ್ಸು ಹೆಚ್ಚಿಗೆ ಆಗುತ್ತದೆ ಗಟ್ಟಿಯಾಗಿರುತ್ತಾರೆ ಎಂದು ಈ ಕ್ರೀಡೆಗೆ ಹೆಚ್ಚು ಮಹತ್ವ ಕೊಡಲಾಗಿದೆ.
ಹಾಗೂ ಈ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಜ್ಯಮಟ್ಟದಲ್ಲಿ ವಿಜೇತ ಆದಂತಹ ಕ್ರೀಡಾಪಟುವಿಗೆ ಮಾಸಿಕ ವೇತನ ನೀಡಲಾಗುತ್ತದೆ ಮತ್ತು ಇಂತಹ ಪ್ರತಿಭೆಗಳಿಗೆ ಉದ್ಯೋಗದಲ್ಲಿ ಪ್ರತ್ಯೇಕ ಮೀಸಲಾತಿ ಮೂಲಕ ಉದ್ಯೋಗವನ್ನು ಸಹ ನೀಡಲಾಗುತ್ತದೆ ಎಂದು ಜಿ ಜಗದೀಶ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯನಗರ ಜಿಲ್ಲೆ ತಿಳಿಸಿದರು.ಕೊಟ್ಟೂರು ತಾಲೂಕಿನ ಸುತ್ತಮುತ್ತಲಿನ ಅನೇಕ ಗ್ರಾಮಗಳನ್ನು ಹೊಂದಿದ್ದು ತಾಲೂಕಿನ ಪ್ರತಿಯೊಂದು ಹಳ್ಳಿಗಳಿಗೆ ತಿಳಿಸಿ ಕ್ರೀಡಾಪಟುಗಳನ್ನು ಕರೆತಂದು ಪ್ರಥಮ ಬಾರಿಗೆ ಗುಂಪು ಆಟಗಳು ಮತ್ತು ಅಥ್ಲೆಟಿಕ್ ಸ್ಪರ್ಧೆಗಳನ್ನು ಯಶಸ್ವಿಯಾಗಿ ನಡೆಸಲಾಯಿತು ಹಾಗೂ ಹಳ್ಳಿಯ ದಸರಾ ಕ್ರೀಡಾ ಕೂಟ ಕೊಟ್ಟೂರಿನಲ್ಲಿ ಹೊಸದಾಗಿ ನಡೆಯುವುದು ನಮಗೆ ಸಂತೋಷದ ವಿಚಾರ ಎಂದು ಈಸಿಯು ನಿಂಗಪ್ಪ ತಿಳಿಸಿದರು.ಈ ಸಂದರ್ಭದಲ್ಲಿ ಮೈದುರು ಶಶಿಧರ್ ತಾಲೂಕು ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರು ವೇದಮೂರ್ತಿ ದೈಹಿಕ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷರು ಕರಿಬಸಪ್ಪ ಮಹೇಂದ್ರ ಮಲ್ಲಿಕಾರ್ಜುನ್ ದೇವಪ್ಪ ಎಚ್ ಟಿ ಮಂಜುನಾಥ್ ಅನಿಲ್ ನಾಯ್ಕ ಶಿವಕುಮಾರ್ ಪಾರ್ವತಿ ಕಲೀಲ್ ಮತ್ತು ತಾಲೂಕಿನ ಎಲ್ಲಾ ದೈಹಿಕ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆ ತಾಲೂಕಿನ ಎಲ್ಲಾ ಕ್ರೀಡಾಪಟುಗಳು ಸೇರಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು