ಭಾವೈಕ್ಯತೆ ಮೂಡಿಸಲು ಎನ್.ಎಸ್.ಎಸ್ ಶಿಬಿರ ಸಹಕಾರಿ – ವೈ.ಸಿ ಪಾಟೀಲ.
ನರೇಗಲ್ ಅ.28
ಕಾಲೇಜು ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳು ಸಹಕಾರಿಯಾಗುತ್ತದೆ ಎಂದು ಶ್ರೀ ಅನ್ನದಾನೇಶ್ವರ ಪಪೂ ಮಹಾವಿದ್ಯಾಲಯದ ಪ್ರಾಂಶುಪಾಲ ವೈ.ಸಿ. ಪಾಟೀಲ ಹೇಳಿದರು.ಅವರು ಸಮೀಪದ ನಿಡಗುಂದಿ ಕೊಪ್ಪ ಶಾಖಾ ಶಿವಯೋಗ ಮಂದಿರ ಶ್ರೀಮಠದಲ್ಲಿ ನರೇಗಲ್ಲ ಎಸ್.ಎ. ಪ.ಪೂ ಮಹಾವಿದ್ಯಾಲಯವು ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ 2024-25 ನೇ. ಸಾಲಿನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಅಖಂಡತೆಯಲ್ಲಿ ಏಕತೆ ಸಾಧಿಸಲು ವಾರ್ಷಿಕ ವಿಶೇಷ ಶಿಬಿರಗಳು ಸಹಕಾರಿಯಾಗಿವೆ ಎಂದರು.ಶಿಬಿರಗಳನ್ನು ಗ್ರಾಮಗಳಲ್ಲಿ ಆಯೋಜಿಸುವುದ ರಿಂದ ಗ್ರಾಮದ ಜನರ ಬದುಕನ್ನು ಸುಧಾರಿಸುವುದು. ಪರಿಸರ ಪ್ರಜ್ಞೆ, ನಾಗರಿಕ ಪ್ರಜ್ಞೆ, ಸ್ವಚ್ಛತೆ, ಶಿಕ್ಷಣ, ಆರೋಗ್ಯ, ರಾಷ್ಟ್ರೀಯ ಏಕತೆ, ವಿಭಿನ್ನ ಸಂಸ್ಕೃತಿಯ ಪರಿಚಯ, ಎಲ್ಲರನ್ನು ಪ್ರೀತಿ ಗೌರವದಿಂದ ಕಾಣುವುದು, ಮುಂತಾದ ವಿಷಯಗಳ ಕುರಿತು ಮಾಹಿತಿ ಮೂಡಿಸುವುದು, ಜಾಗೃತ ಗೊಳಿಸುವುದು. ವಿದ್ಯಾರ್ಥಿಗಳಿಗೆ ಗ್ರಾಮದ ಬದುಕನ್ನು ಪರಿಚಯಿಸುವುದು. ಅವರ ಸಂಸ್ಕೃತಿ, ಶ್ರಮದ ಮಹತ್ವ ಆಚಾರ ವಿಚಾರಗಳನ್ನು ತಿಳಿಸುವುದು. ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನ ಗೊಳ್ಳುವುದು ಈ ಶಿಬಿರ ದಿಂದ ಇವೆಲ್ಲವನ್ನು ಕಲಿತು ಕೊಂಡಿದ್ದು ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದರು.ಈ ವೇಳೆ ಇನ್ನೋರ್ವ ಅತಿಥಿ ಉಪನ್ಯಾಸಕ ಎಫ್.ಎನ್. ಹುಡೇದ ಮಾತನಾಡಿ ಮಹತ್ಮಾ ಗಾಂಧೀಜಿಯವರ ಕಲ್ಪನೆಯಿಂದ ಹುಟ್ಟಿಕೊಂಡ ಎನ್.ಎಸ್.ಎಸ್ ಶಿಬಿರಗಳು ಮನಸ್ಸುಗಳನ್ನು ಪರಿವರ್ತಿಸುತ್ತವೆ. ನಿಸ್ವಾರ್ಥ ಸೇವೆ ಸಮಾಜಕ್ಕೆ ವಿದ್ಯಾರ್ಥಿಗಳು ಸಲ್ಲಿಸಬೇಕು. ರಾಷ್ಟ್ರೀಯ ಸೇವಾ ಯೋಜನೆ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವುದರ ಜೊತೆಗೆ ಬದುಕು ಯಾವ ರೀತಿ ಇರಬೇಕೆಂದು ತಿಳಿಸಿ ಕೊಡುತ್ತದೆ. ಶಿಬಿರ ದಿಂದ ಪಡೆದ ಅನುಭವ ಜ್ಞಾನ ಸಾಧನೆಯೆಡಗೆ ಸ್ಫೂರ್ತಿಯಾಗಬೇಕು ಎಂದು ಸಲಹೆ ನೀಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮಾಧಿಕಾರಿ ಡಿ.ಎಂ. ನಾಗರೇಶಿ ಈ ಶಿಬಿರ 7 ದಿನಗಳವರೆಗೆ ಯಶಸ್ವಿಯಾಗಿ ನೆರವೇರಿದೆ. ಇದಕ್ಕೆ ಸಹರಿಸಿದ ಎಲ್ಲರಿಗೂ ಕೃತಜ್ಞೆತೆ ಸಲ್ಲಿಸುವೆ ಎಂದರು.ಈ ವೇಳೆಯಲ್ಲಿ ಎನ್‌ಎಸ್‌ಎಸ್ ಶಿಬಿರದ ಅನುಭವವನ್ನು ವಿದ್ಯಾರ್ಥಿಗಳು ಹಂಚಿಕೊಂಡರು.ಎಸ್.ಎ.ವ್ಹಿ.ವ್ಹಿ.ಪಿ ಸಮಿತಿಯ ಆಡಳಿತಾಧಿಕಾರಿ ಎನ್.ಆರ್. ಗೌಡರ ಅಧ್ಯಕ್ಷತೆಯನ್ನು ವಹಿಸಿದ್ದರು. ಸುರೇಶ ಸರ್ವಿ, ಭರಮಗೌಡ್ರ ಮಾಸ್ತಿ, ಬಸವರಾಜ ಬನ್ನಿಗೋಳ ಉಪಸ್ಥಿತರಿದ್ದರು. ಪ್ರಾರ್ಥನೆ, ಸ್ವಾಗತ, ನಿರೂಪಣೆ, ವಂದನೆಗಳನ್ನು ಶಿಬಿರಾರ್ಥಿಗಳು ನಡೆಸಿ ಕೊಟ್ಟರು.
ಬಾಕ್ಸ್:-
ಸಮೀಪದ ನಿಡಗುಂದಿ ಕೊಪ್ಪ ಶಾಖಾ ಶಿವಯೋಗ ಮಂದಿರ ಶ್ರೀಮಠದಲ್ಲಿ ನರೇಗಲ್ಲ ಎಸ್.ಎ. ಪ.ಪೂ ಮಹಾವಿದ್ಯಾಲಯವು ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ 2024-25 ನೇ. ಸಾಲಿನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಉಪನ್ಯಾಸಕ ಎಫ್.ಎನ್. ಹುಡೇದ ಮಾತನಾಡಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಾನಂದ.ಎಫ್. ಗೋಗೇರಿ.ತೋಟಗುಂಟಿ.ಗದಗ.