ಅಪಘಾತ ವಿಮೆ ಕಡ್ಡಾಯವಾಗಿ ಮಾಡಿಸಿ ಕೊಳ್ಳಿ- ರಾಜಶೇಖರ. ಕಡೆಮನಿ.
ಬೆಳಗಾವಿ ಜ.15

ಬೈಲಹೊಂಗಲ ತಾಲೂಕ ಪಂಚಾಯತ ಸಭಾಂಗಣದಲ್ಲಿ ಇಂದು ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಯ ಕಾರ್ಯಾಗಾರಕ್ಕೆ ತಾಲೂಕ ಪಂಚಾಯತ ಯೋಜನ ಅಧಿಕಾರಿಗಳು ಶ್ರೀ ರಾಜಶೇಖರ ಕಡೆಮನಿ ಯವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಪ್ರತಿಯೊಬ್ಬ ವ್ಯಕ್ತಿ ಹಾಗೂ ಕುಟುಂಬದ ಸದಸ್ಯರು ಈ ಅಫಘಾತ ವಿಮೆಗಳನ್ನು ಮಾಡಿಸಿ ಕೊಳ್ಳಬೇಕು ಹಾಗೂ ಈ ಯೋಜನೆ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ರೂ. 436/- ವಯಸ್ಸು (18-50) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ರೂ 20/- ವಯಸ್ಸು (18-70) ಸದುಪ ಯೋಗವನ್ನು ಪಡಿಸಿ ಕೊಳ್ಳಬೇಕು ಎಂದು ಲೀಡ ಬ್ಯಾಂಕ ವ್ಯವಸ್ಥಾಪಕರು ಪ್ರಶಾಂತ ಸಲಹೆ ನೀಡಿದರು. ಸಹಾಯಕ ನಿರ್ದೇಶಕ (ಪಂ.ರಾಜ್) ರವರು ಮಾತನಾಡಿ ಇದು ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ ಯಾಗಿದ್ದು ಸರ್ಕಾರಿ ಅಧಿಕಾರಿಗಳು ಹಾಗೂ ಅವರ ಕುಟುಂಬದ ಸದಸ್ಯರು, ಮತ್ತು ಎಲ್ಲಾ ನೌಕರ ವರ್ಗದವರು ಈ ವಿಮೆಯನ್ನು ಕಡ್ಡಾಯವಾಗಿ ಮಾಡಿಸಿ ಕೊಳ್ಳುವುದು, ಅದೇ ರೀತಿಯಲ್ಲಿ ಗ್ರಾಮ ಪಂಚಾಯತ ಸಿಬ್ಬಂದಿಗಳು ಮತ್ತು ನರೇಗಾ ಕೂಲಿ ಕಾರ್ಮಿಕರು ಸಹ ಈ ವಿಮೆಯನ್ನು ಮಾಡಿಸಿ ಕೊಳ್ಳುವ ಮೂಲಕ ಕುಟುಂಬಕ್ಕೆ ಆಧಾರ ವಾಗಬೇಕು ಎಂದು ತಿಳಿಸಿದರು, ಆಕಸ್ಮಿಕ ಸಾವುಗಳಿಂದ ಕಟುಂಬದ ಸದಸ್ಯರು ಮರಣ ಹೊಂದಿದರೆ ಅವರ ಕುಟುಂಬಕ್ಕೆ ಅನುಕೂಲ ಕರವಾಗಲಿ ಎಂದು ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆ ಸದುಪಯೋಗ ಪಡೆದು ಕೊಳ್ಳುವಂತೆ ಸಲಹೆ ನೀಡಿದರು. ಸಹಾಯಕ ಕೃಷಿ ನಿರ್ದೇಶಕರು ಬಸವರಾಜ್ ದಳವಾಯಿ ಮಾತನಾಡಿ ಪ್ರತಿಯೊಂದು ಗ್ರಾಮೀಣ ಪ್ರದೇಶದಲ್ಲಿರುವ ಫಲಾನುಭವಿಗಳು ಹಾಗೂ ರೈತ ಕುಟುಂಬಸ್ಥರು, ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರು, ಹೊರಗುತ್ತಿಗೆ ನೌಕರು ಎಲ್ಲಾ ಸಿಬ್ಬಂದಿಗಳು ವಿಮೆಗಳನ್ನು ಮಾಡಿಸಿ ಕೇಂದ್ರ ಸರ್ಕಾರದ ಈ ಯೋಜನೆಯ ಸದುಪ ಯೋಗವನ್ನು ಎಲ್ಲಾ ನಾಗರಿಕರು ಪಡೆದು ಕೊಳ್ಳುವಂತೆ ವಿವರಿಸಿದರು. ಇದೇ ಸಂಧರ್ಭದಲ್ಲಿ ತಾಲೂಕ ಆರೋಗ್ಯಾಧಿಕಾರಿಗಳು ಡಾ, ಎಸ್.ಎಸ್ ಸಿದ್ದಣ್ಣವರ ರವರು ಮಾತನಾಡಿ ಪ್ರತಿಯೊಂದು ಅರ್ಹ ಕುಟುಂಬಗಳು ಸರ್ಕಾರದ ಎಲ್ಲಾ ಯೋಜನೆಯ ಸದುಪ ಯೋಗವನ್ನು ಪಡೆದು ಕೊಳ್ಳುವುದು ಅದೇ ರೀತಿಯಲ್ಲಿ ಆಯುಷ್ಮಾನ ಭಾರತ ಯೋಜನೆಯನ್ನು ಸಹ ಪಡೆದು ಕೊಳ್ಳಬೇಕೆಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕ ಮಟ್ಟದ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಿ.ಎನ್ ಪ್ಯಾಟಿ. ಸಹಾಯಕ ಲೆಕ್ಕಾಧಿಕಾರಿ ಪ್ರಶಾಂತ ಹಿರೇಮಠ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ತಾ.ಪಂ ಎಲ್ಲಾ ಸಿಬ್ಬಂದಿಗಳು, ವಿವಿಧ ಬ್ಯಾಂಕ ವ್ಯವಸ್ಥಾಪಕರು, ಹಾಗೂ ಇತರ ಸಿಬ್ಬಂದಿಗಳು ಹಾಜರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ ಶರ್ಮಾ ಬೆಳಗಾವಿ