ನಿಧನ ವಾರ್ತೆ: ಶ್ರೀ ಮತಿ ಶಾರದಮ್ಮ ಹೊಸಕೆರೆ.
ಹೊಸಕೆರೆ ಏಪ್ರಿಲ್.20

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹೊಸಕೆರೆ ಗ್ರಾಮದ ನಿವಾಸಿ ಹಾಗೂ ಮಾದಿಗ ಸಮುದಾಯದ ಶ್ರೀಮತಿ ಮಲಿಯಮ್ಮರ ಶಾರದಮ್ಮ (63) ಗಂಡ ಮಲಿಯಮ್ಮರ ದುರುಗಪ್ಪ ಎಪ್ರಿಲ್ 19 ಶುಕ್ರವಾರ ಸಂಜೆ ಸಮಯದಲ್ಲಿ 7:15 ಗಂಟೆಗೆ, ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದರು. ಮೃತಳು ಶಾರದಮ್ಮ ಇವರು ಹೊಸಕೆರೆ ಮಾದಿಗ ಸಮುದಾಯದ ಯುವ ಮುಖಂಡರಾದ, ಎಚ್ ಎಂ ಚಾರೇಪ್ಪ ತಾಯಿಯಾಗಿದ್ದು ಇವರಿಗೇ ಇಬ್ಬರು ಗಂಡು ಮಕ್ಕಳು ಮತ್ತು ಸೊಸೆಯಂದಿರು ಮೊಮ್ಮಕ್ಕಳನ್ನು, ಅಪಾರ ಬಂಧು ಬಳಗವನ್ನು ಹೊಂದಿದ್ದರು. *ಅಂತ್ಯಕ್ರಿಯೆ*- ಮೃತರ ಅಂತ್ಯಕ್ರಿಯೆ ಎ 20 ಶನಿವಾರ ಬೆಳಿಗ್ಗೆ 11 ಗಂಟೆಗೆ,ಹೊಸಕೆರೆ ಗ್ರಾಮದ ಶಾಂತಿವನದಲ್ಲಿ ಜರುಗಲಿದೆ. *ಸಂತಾಪ*- ನಿಧನರಾಗಿರುವ ಶ್ರೀಮತಿ ಮಲಿಯಮ್ಮರ ಶಾರದಮ್ಮ ರವರ ಅಗಲಿಕೆಗೆ, ಮಕ್ಕಳು ಮೊಮ್ಮಕ್ಕಳು ಬಂಧುಗಳು ಗ್ರಾಮ ಸೇರಿದಂತೆ ತಾಲೂಕಿನ ಸಮಸ್ತ ಮಾದಿಗ ಸಮಾಜದವರು ಮತ್ತು ವಿವಿಧ ಸಮಾಜದವರು. ಶಾಸಕರಾದ ನೇಮಿರಾಜನಾಯ್ಕ ಸೇರಿದಂತೆ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಹಾಗೂ ಅಧಿಕಾರಿಗಳು ಮತ್ತು ದಲಿತ ಪರ ಸಂಘಟನೆಯ ಪದಾಧಿಕಾರಿಗಳು ವಿವಿಧ ಜನ ಪ್ರತಿನಿಧಿಗಳು, ವಿವಿಧ ಪಕ್ಷಗಳ ಪ್ರಮುಖರು. ಮಹಿಳಾ ಸಂಘ, ಕಾರ್ಮಿಕ ಸಂಘ, ರೈತ ಸಂಘ, ಹಾಗೂ ವಿವಿಧ ಸಂಘಟನೆಗಳು. ಪತ್ರಕರ್ತರು ಹಾಗೂ ಹಿರಿಯ ನಾಗರಿಕರು, ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ. ಸಾಲುಮನೆ ಕೂಡ್ಲಿಗಿ.