ಪೌರ ಕಾರ್ಮಿಕರಿಗೆ ಇ.ಎಸ್.ಐ ಕಾರ್ಡ್ ವಿತರಿಸಿ-ಡಾ. ಕಾಂತರಾಜ್.
ತರೀಕೆರೆ ಸಪ್ಟೆಂಬರ್:20





ಗೃಹ ಭಾಗ್ಯ ಯೋಜನೆಯಡಿ ಪೌರಕಾರ್ಮಿಕರಿಗೆ ಮನೆ ಗಳನ್ನು ಕಟ್ಟಿಸಿ ಕೊಡಬೇಕು ಎಂದು ತರೀಕೆರೆ ಉಪ ವಿಭಾಗಾಧಿಕಾರಿ ಡಾ. ಕಾಂತರಾಜ್ ರವರು ತರೀಕೆರೆ,ಬೀರೂರು,ಕಡೂರು ಪುರಸಭೆ ಮತ್ತು ಅಜ್ಜಂಪುರ, ಎನ್ ಆರ್ ಪುರ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಗಳಿಗೆ ತಿಳಿಸಿದರು. ಅವರು ಇಂದು ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಉಪ ವಿಭಾಗ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಉಪವಿಭಾಗೀಯ ಮಟ್ಟದ ಸಪಾಯಿ ಕರ್ಮಚಾರಿ ಮತ್ತು ಅವರ ಪುನರ್ವಸತಿ ಕಾಯ್ದೆಯ ವಿಜಿಲೆನ್ಸಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಿತಿ ಸದಸ್ಯರಾದ ತರೀಕೆರೆ ಎನ್ ವೆಂಕಟೇಶ್ ರವರು ಪೌರಕಾರ್ಮಿಕರಿಗೆ ಇಎಸ್ಐ ಕಾರ್ಡ್ ನ್ನು ಪುರಸಭೆ ಮತ್ತು ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಗಳು ವಿತರಿಸಬೇಕು ಎಂದು ತಿಳಿಸಿದ ಮೇರೆಗೆ ಇ ಎಸ್ ಐ ಕಾರ್ಡು ವಿತರಿಸಲು ಡಾ. ಕಾಂತರಾಜ್ ರವರು ತಿಳಿಸಿರುತ್ತಾರೆ. ಪೌರ ಕಾರ್ಮಿಕರಿಗೆ ವಿಶ್ರಾಂತಿ ಗೃಹಗಳನ್ನು ನಿರ್ಮಾಣ ಮಾಡಬೇಕು ಮತ್ತು ತರೀಕೆರೆ ಉಪ ವಿಭಾಗ ಮಟ್ಟದಲ್ಲಿ ಬರುವ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಅನೈರ್ಮಲ್ಯ ವೃತ್ತಿ ಮಾಡುತ್ತಿರುವವರಿಗೆ ಸಫಾಯಿ ಕರ್ಮಚಾರಿ ಗುರುತಿನ ಚೀಟಿ ಕೊಡಬೇಕೆಂದು ಮನವಿ ಮಾಡಿದ ಮೇರೆಗೆ ಉಪವಿಭಾಗಾಧಿಕಾರಿ ಈ ಕುರಿತು ಕ್ರಮ ವಹಿಸಲು ತಿಳಿಸಿದರು. ಸಮಿತಿ ಸದಸ್ಯರಾದ ಕೆ ನಾಗರಾಜ್, ತರೀಕೆರೆ ತಹಸಿಲ್ದಾರ್ ರಾಜೀವ, ಎನ್ ಆರ್ ಪುರ ತಹಶೀಲ್ದಾರ್ ತನುಜಾ, ಪುರಸಭಾ ಮುಖ್ಯ ಅಧಿಕಾರಿ ಹೆಚ್ ಪ್ರಶಾಂತ್, ಕಡೂರು ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ರೇವಣ್ಣ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ತಾಲೂಕು ವಿಸ್ತರಣಾಧಿಕಾರಿಯದ ಸುನಿಲ್ ಕುಮಾರ್ ಉಪಸ್ಥಿತರಿದ್ದು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಎಸ್ ಮಂಜುನಾಥ ಸ್ವಾಗತಿಸಿ ವಂದಿಸಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ