ಕರ್ತವ್ಯ ನಿರತ ತಹಶೀಲ್ದಾರರಿಗೆ ಮಾಜಿ ಶಾಸಕ ಏಕವಚನದಲ್ಲಿ ನಿಂದನೆ – ಕಂದಾಯ ಇಲಾಖೆ ನೌಕರರ ಮನವಿ.
ರೋಣ ನ.06

ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಗಜೇಂದ್ರಗಡ ಪಟ್ಟಣದಲ್ಲಿ ರಾಜ್ಯದ ರೈತರ, ದೇವಾಲಯ, ಮಠ ಮಾನ್ಯಗಳ ಆಸ್ತಿಗಳ ಮೇಲೆ ವಕ್ಫ್ ಬೋರ್ಡ್ ಹೆಸರು ದಾಖಲಿಸುತ್ತಿರುವ ರಾಜ್ಯ ಸರ್ಕಾರ ನಡೆ ಖಂಡಿಸಿ ಮಾಜಿ ಶಾಸಕ ಕಳಕಪ್ಪ ಬಂಡಿ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸುವ ವೇಳೆ ತಹಶೀಲ್ದಾರ ಕಿರಣಕುಮಾರ ಕುಲಕರ್ಣಿ ಸಾರ್ವಜನಿಕರ ಎದುರುಗಿ ಏಕವಚನದಲ್ಲಿ ನಿಂದಿಸಿ ಸರ್ಕಾರಿ ನೌಕರರಿಗೆ ಬೆದರಿಕೆ ನೀಡಿ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಲು ಅಡ್ಡಿಯುಂಟಾಗುತ್ತಿದೆ. ಆದ್ದರಿಂದ ಸರ್ಕಾರಿ ನೌಕರರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ಸರ್ಕಾರಿ ಕಂದಾಯ ನೌಕರರ ಸಂಘದ ವತಿಯಿಂದ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಕೆ.ಎಸ್. ಬೆಟಿಗೇರಿ ಉಪ ತಹಸಿಲ್ದಾರ ಎಸ್.ಎಸ್ ಗಿರಿಯಪ್ಪಗೌಡರ,ಎಂ.ಡಿ ಚಕಾರಿ. ಜಿ.ಎಂ ಹವಾಲ್ದಾರ. ಸುವರ್ಣ ಜುಮ್ಮನಕಟ್ಟಿ, ಎಲ್.ಎಮ್ ಅರಹುಣಸಿ, ಪಿ.ಡಿ ಪಾಟೀಲ, ಶೋಭಾ ಬಿಳಗಿ. ಉಮಾ ಜಾಲಿಹಾಳ, ರೇಖಾ ತರಿವಾಳ, ದಾಸಪ್ಪನವರ, ವೆಂಕಟೇಶ ರಜಪೂತ. ಅಬ್ದುಲ್ ಪಾಪಣ್ಣನವರ, ಹನುಮಂತ ಮ್ಯಾಗೇರಿ. ಜಗದೀಶ್ ಮಡಿವಾಳರ, ಮಲ್ಲಿಕಾರ್ಜುನ ಹನಿಸಿ. ಕಂದಾಯ ನೌಕರರ ಸಂಘದ ಸದಸ್ಯರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಸ್.ವಿ.ಸಂಕನಗೌಡ್ರ.ರೋಣ