ಕನ್ನಡ ಭಾಷೆ ಉಳಿಸಿ ಬೆಳೆಸಿ – ಶಾಸಕ ಜಿ.ಎಚ್ ಶ್ರೀ ನಿವಾಸ್.
ತರೀಕೆರೆ ನ.01
ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಇದೆ, ಎಂಟು ಜನರಿಗೆ ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ ಎಂದು ಶಾಸಕರಾದ ಜಿಎಚ್ ಶ್ರೀನಿವಾಸ್ ಹೇಳಿದರು. ಅವರು ಇಂದು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ, ಬಯಲು ರಂಗ ಮಂದಿರದಲ್ಲಿ ಏರ್ಪಡಿಸಿದ್ದ 69 ನೇ. ಕನ್ನಡ ರಾಜ್ಯೋತ್ಸವ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರ್ನಾಟಕ ಸಂಭ್ರಮದ ಸರ್ಕಾರವು 7.5 ಕೋಟಿ ಅನುದಾನದಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಮಂಜೂರಾತಿ ಮಾಡಿದೆ, ಪುರಸಭೆಯ ಕಟ್ಟಡ ನಿರ್ಮಾಣಕ್ಕೆ 7.5 ಕೋಟಿ ಅನುದಾನ ಮತ್ತು ಕುಡಿಯುವ ನೀರು ನಿರಂತರವಾಗಿ ಸಿಗುವಂತೆ ಮಾಡಲಾಗಿದೆ, ತರೀಕೆರೆ ಪಟ್ಟಣದಲ್ಲಿ ಯುಜಿಡಿ ಕಾಮಗಾರಿಗೆ 34 ಕೋಟಿ ರೂ ಮಂಜೂರಾತಿಯಾಗಿದೆ,
ಆಟದ ಮೈದಾನಕ್ಕೆ ಒಂದುವರೆ ಕೋಟಿ, ಅಜ್ಜಂಪುರದಲ್ಲಿ ಬಸ್ ನಿಲ್ದಾಣ, ಇಂದಿರಾ ಕ್ಯಾಂಟೀನ್, ಮಿನಿ ವಿಧಾನ ಸೌಧ ನಿರ್ಮಾಣ ಮಾಡಲಾಗುವುದು ಈ ಎಲ್ಲಾ ಕಾಮಗಾರಿಗಳ ಉದ್ಘಾಟನೆಯನ್ನು ಮಾನ್ಯ ಮುಖ್ಯ ಮಂತ್ರಿಗಳಿಂದ ಶಂಕುಸ್ಥಾಪನೆ ಉದ್ಘಾಟನೆ ನೆರವೇರುವುದು. 15000 ಮನೆಗಳಿಗೆ ಖಾತೆ ದಾಖಲಾತಿ ಇಲ್ಲದೆ ಮನೆಗಳನ್ನು ಖಾತೆ ಮಾಡುವ ಬಗ್ಗೆ ಎರಡು ಬಾರಿ ವಿಧಾನ ಸಭೆಯಲ್ಲಿ ಚರ್ಚಿಸಿದ್ದೇನೆ. ಮತ್ತು ಮನೆ ನಿವೇಶನ ರಹಿತರಿಗೆ ಮನೆ ನಿವೇಶನಗಳನ್ನು ಕೊಡಲು ಕ್ರಮ ವಹಿಸಿರುತ್ತೇನೆ ಎಂದು ಹೇಳಿದರು. ಧ್ವಜಾರೋಹಣ ನೆರವೇರಿಸಿದ ಉಪ ವಿಭಾಗ ಅಧಿಕಾರಿ ಡಾ, ಕೆ.ಜೆ ಕಾಂತರಾಜ್, ರಾಜ್ಯೋತ್ಸವ ಸಂದೇಶವನ್ನು ನೀಡುತ್ತಾ ಮಾತನಾಡಿ ಕನ್ನಡ ನಾಡು ನುಡಿಯ ಬಗ್ಗೆ ದಾಸ ಸಾಹಿತ್ಯ,ವಚನ ಸಾಹಿತ್ಯ,ಕೀರ್ತನಗಳು ಮತ್ತು ಜಾನಪದ ಸಾಹಿತ್ಯ ಈ ಮಣ್ಣಿನ,ನಾಡಿನ ಸೊಬಗನ್ನು ಸಾರಿವೆ. ಕನ್ನಡ ನಾಡನ್ನು ಗಂಗರು, ಕದಂಬರು, ರಾಷ್ಟ್ರಕೂಟರು, ಪಾಳೇಗಾರರು ಆಳ್ವಿಕೆ ಮಾಡಿದ ಇತಿಹಾಸವಿದೆ.
ಅತಿ ದೊಡ್ಡ ಜನಸಂಖ್ಯೆ ಹೊಂದಿದ ರಾಜ್ಯ ನಮ್ಮದು. ಚಿಕ್ಕಮಗಳೂರು ಜಿಲ್ಲೆ ಸುಂದರ ಪ್ರಕೃತಿಯನ್ನು ಹೊಂದಿದೆ ಜಿಲ್ಲೆಯ ಮುಗಳಿ ಲಕ್ಷ್ಮಿದೇವಮ್ಮ ಕಡೂರಿನ ತಂಗಲಿ ತಾಂಡದ ಬಿ.ಟಿ ಲಲಿತಾ ನಾಯಕ್ ರವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ನಾಡಿಗೆ 8 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ, ರಾಷ್ಟ್ರ ಕವಿ ಕುವೆಂಪುರವರು ಉದಯವಾಗಲಿ ಚೆಲುವ ಕನ್ನಡ ನಾಡು ಎಂದು ಹಾಡಿದ್ದಾರೆ, ನಿರಂತರವಾಗಿ ಎಲ್ಲರೂ ಕನ್ನಡ ಭಾಷೆಯನ್ನು ಆಡಬೇಕು ಕನ್ನಡವನ್ನು ಉಳಿಸಿ, ಬಳಸಿ, ಬೆಳೆಸಬೇಕು ಎಂದು ಕರೆ ಕೊಟ್ಟರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪುರಸಭಾ ಅಧ್ಯಕ್ಷರಾದ ವಸಂತ್ ಕುಮಾರ್ ಕವಾಲಿ, ಉಪಾಧ್ಯಕ್ಷರಾದ ಗಿರಿಜಾ ಪ್ರಕಾಶ್ ವರ್ಮಾ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರವಿ ದಳವಾಯಿ, ಮಾತನಾಡಿದರು. ವೇದಿಕೆಯಲ್ಲಿ ಪೊಲೀಸ್ ಉಪ ಅಧೀಕ್ಷಕರಾದ ಹಾಲಮೂರ್ತಿ ರಾವ್ ವಿ ಎಸ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಯದ ಡಾ, ಆರ್ ದೇವೇಂದ್ರಪ್ಪ, ಪುರಸಭಾ ಮುಖ್ಯ ಅಧಿಕಾರಿ ಪ್ರಶಾಂತ್, ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ, ವಲಯ ಅರಣ್ಯ ಅಧಿಕಾರಿ ಉಮ್ಮರ್ ಪಾಷಾ, ಪೊಲೀಸ ನಿರೀಕ್ಷೆಕರಾದ ರಾಮಚಂದ್ರ ನಾಯಕ್, ತಹಸಿಲ್ದಾರ್ ಗ್ರೇಡ್ 2 ರುಕ್ಸಾನ ಹುದಾ, ಆರ್‌ಎಫ್ಒ ಆಸಿಫ್ ಅಹಮದ್ ಉಪಸ್ಥಿತರಿದ್ದು, ಸಾಧಕರಿಗೆ ಸನ್ಮಾನ ಮಾಡಲಾಯಿತು. ವಿವಿಧ ಶಾಲಾ ಮಕ್ಕಳಿಂದ ನೃತ್ಯ ರೂಪಕಗಳನ್ನ ನಡೆಸಲಾಯಿತು, ಶಿಕ್ಷಕರಾದ ಶಿಲ್ಪ ಹಾಗೂ ಕವಿತಾ ಮತ್ತು ದೈಹಿಕ ಶಿಕ್ಷಣ ಪರೀ ವೀಕ್ಷಕರಾದ ವೇದಮೂರ್ತಿ ನಿರೂಪಿಸಿದರು. ತಹಸಿಲ್ದಾರ್ ವಿಶ್ವಜಿತ್ ಮೆಹತಾ ರವರು ಸ್ವಾಗತಿಸಿ ವಂದಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು