ಸಾರ್ವಜನಿಕ ಪ್ರಕಟಣೆ ನೀರನ್ನು ಮಿತವಾಗಿ ಬಳಸಿ – ಎ ನಸುರುಲ್ಲಾ ಪ.ಪಂ ಮುಖ್ಯಾಧಿಕಾರಿಗಳು.
ಕೊಟ್ಟೂರು ನ.02

ಕೊಟ್ಟೂರು ಪಟ್ಟಣದ ಸಾರ್ವಜನಿಕರಿಗೆ ತಿಳಿಯಪಡಿಸುವು ದೇನೆಂದರೆ ಪಟ್ಟಣಕ್ಕೆ ಹಗರಿ, ಅಯ್ಯನಹಳ್ಳಿ ಪಂಪ್ ಹೌಸ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಲೈನ್ ದುರಸ್ಥಿಯಲ್ಲಿ ರುವುದರಿಂದ ಹಾಗೂ ಕೆರೆ ಕೋಡಿ ಬಿದ್ದು, ಕೆರೆ ಅಂಗಳದ ಬೋರ್ ಗಳು ಜಲಾವೃತವಾಗಿ ಮೋಟಾರ್ ಗಳು ಸುಟ್ಟಿದ್ದು, ದುರಸ್ಥಿ ಮಾಡಲು ವಿಳಂಬ ವಾಗಿರುವುದರಿಂದ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುತ್ತದೆ, ಇದರಿಂದಾಗಿ ಸಾರ್ವಜನಿಕರಿಗೆ ಸರದಿ ಪ್ರಕಾರ ಕಡಿಮೆ ಪ್ರಮಾಣದಲ್ಲಿ ನೀರು ಪೂರೈಕೆ ಮಾಡಲಾಗುತ್ತಿದ್ದು, ಕಾರಣ ಸಾರ್ವಜನಿಕರು ಕುಡಿಯುವ ನೀರನ್ನು ಫೋಲ್ ಮಾಡದೇ ಮಿತವಾಗಿ ಬಳಸಲು ಹಾಗೂ ಮಿನಿ ಸಿಸ್ಟೀನ್ ಗಳು ಮೂಲಕ ಪೂರೈಕೆ ಮಾಡುವ ನೀರನ್ನು ಬಳಕೆಗೆ ಉಪಯೋಗಿಸುವ ಮೂಲಕ ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು