ಕರ್ನಾಟಕ ಪತ್ರಕರ್ತರ ಸಂಘ ಹಾಗೂ ಭಜಂತ್ರಿ ಸಮಾಜದಿಂದ – ಅಭಿನಂದನಾ ಸಮಾರಂಭ.
ಗೂಡುರು ನ.04
ಪ್ರಶಸ್ತಿಗಳನ್ನು ಪಡೆಯುವುದರಿಂದ ನಿಮ್ಮ ಸಾಮಾಜಿಕ ಜವಾಬ್ದಾರಿ ಇನ್ಮುಂದೆ ತುಂಬಾ ಹೆಚ್ಚಾಗಿದೆ, ಸಾಮಾಜಿಕ ರಂಗದಲ್ಲಿ ನೀವು ಇತರರಿಗೆ ಮಾದರಿಯಾಗಿದ್ದೀರಿ, ತಾಲೂಕು ಪ್ರಶಸ್ತಿ ಪಡೆದ ನೀವು ಮುಂದಿನ ನಿಮ್ಮ ಪ್ರಾಮಾಣಿಕ ಸೇವೆಯ ಮೂಲಕ ರಾಜ್ಯ ಮಟ್ಟದ ಪ್ರಶಸ್ತಿಗಳು ದೊರೆಯುವಂತಾಗಲಿ ಎಂದು ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಡಿ.ಬಿ ವಿಜಯಶಂಕರ್ ಗ್ರಾಮದ ಪ್ರವಾಸಿ ಮಂದಿರದಲ್ಲಿ ತಾಲೂಕ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಪುರಸ್ಕೃತರಿಗೆ ಸನ್ಮಾನ ಮಾಡಿ ಮಾತನಾಡಿದ ಅಮೀನಗಡ ಠಾಣಾ ಅಧಿಕಾರಿ ಪಿ.ಎಸ್.ಐ ಜ್ಯೋತಿ ವಾಲಿಕಾರ ಅವರು ನಮ್ಮ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ತರಹದ ಸಾಧಕರು ಇದ್ದಾರೆ. ಎಂಬುದು ನಮಗೆ ಹೆಮ್ಮೆ ಎನಿಸಿದೆ. ಇಂದು ತಾಲೂಕು ಮಟ್ಟದ ಪ್ರಶಸ್ತಿ ಪಡೆದ ನೀವು ಮುಂದಿನ ದಿನ ಮಾನದಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪಡೆದು ಗ್ರಾಮದ ಕೀರ್ತಿಯನ್ನು ಹೆಚ್ಚಿಸಿ
ಇಡಿ ಸಮಾಜಕ್ಕೆ ಮಾದರಿಯಾಗಿ ಎಂದು ಶುಭ ಕೋರಿದರು. ನಂತರ ಸಂಗಣ್ಣ ಹಂಡಿ, ಮಲ್ಲಯ್ಯ ವಸ್ತ್ರದ, ತೋಟ್ಲಪ್ಪ ತೋಟ್ಲಪ್ಪನವರ ,ಶಶಿಕಾಂತ ಭಜಂತ್ರಿ ಸಾಧಕರಿಗೆ ಅಭಿನಂದನೆ ಸಲ್ಲಿಸಿ ಇವರ ಕಾರ್ಯಕ್ಷಮತೆ ಬಗ್ಗೆ ಕೊಂಡಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಮುಂದಿನ ಸಾಧನೆಗೆ ಹೆಜ್ಜೆ ಇಟ್ಟು ರಾಜ್ಯ ಮಟ್ಟದಲ್ಲಿ ಸೇವೆ ಗುರುತಿಸುವಂತಾಗಲಿ ಎಂದು ಶುಭ ಹಾರೈಸಿದರು. ಗ್ರಾಮದ ಶಹನಾಯಿ ವಾದಕರಾದ ರಾಮಣ್ಣ ಭೀಮಪ್ಪ ಭಜಂತ್ರಿ,
ಪಶು ವೈದ್ಯಕೀಯ ಪರೀವಿಕ್ಷಕರಾದ ಗುರುಸ್ವಾಮಿ ಜಿ ಬಿಲ್ಲೂರ, ಪತ್ರಕರ್ತ ಮಾರುತಿ ಭಜಂತ್ರಿ, ಶಿಕ್ಷಕರಾದ ಅಬೂಬಕರ ವಾಲಿಕಾರ, ಇವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ ಕಾರಣ ಬಾಗಲಕೋಟೆಯ ಕರ್ನಾಟಕ ಪತ್ರಕರ್ತರ ಸಂಘ ಹಾಗೂ ಸೂಳೇಭಾವಿಯ ಭಜಂತ್ರಿ ಸಮಾಜದ ಆಶ್ರಯದಲ್ಲಿ ಸರಳ ಅಭಿನಂದನಾ ಕಾರ್ಯಕ್ರಮದಲ್ಲಿ ಇವರನ್ನು ಗ್ರಾಮದ ಪ್ರಮುಖರಾದ ಮಲ್ಲಯ್ಯ ವಸ್ತ್ರದ ಮಾಜಿ KMF ಹಾಲು ಒಕ್ಕೂಟದ ಅಧ್ಯಕ್ಷರಾದ ಸಂಗಣ್ಣ ಹಂಡಿ, ಹಾಗೂ ತೋಟ್ಲಪ್ಪನವರ, ಶ್ರೀಶೈಲಪ್ಪ ಭಜಂತ್ರಿ, ಶಶಿಕಾಂತ ಭಜಂತ್ರಿ, ಯಮನಪ್ಪ ಫ ಭಜಂತ್ರಿ, ಹನಮಂತ ಹಿರೇಮನಿ, ಶರಣಪ್ಪ ಭಜಂತ್ರಿ, ರಫೀಕ ಇಟಗಿ, ದುರಗಪ್ಪ ಭಜಂತ್ರಿ, ಬೊಮ್ಮಣ್ಣ ಭಜಂತ್ರಿ, ಯಮನೂರ ನಿ. ಭಜಂತ್ರಿ, ಅನೇಕ ಪ್ರಮುಖರು ಉಪಸ್ಥಿತರಿದ್ದರು.