ಬಣಕಾರ್ ಮೂಗಪ್ಪ ಹಿರೇ ಹೆಗ್ಡಾಳ್ ಇವರಿಗೆ ಜಿಲ್ಲಾ ಮಟ್ಟದ – ರಾಜ್ಯೋತ್ಸವ ಪ್ರಶಸ್ತಿ ಗರಿ.
ಹಿರೇ ಹೆಗ್ಡಾಳ್ ನ.04
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹಿರೇ ಹೆಗ್ಡಾಳ್ ಗ್ರಾಮದ ಬಣಕಾರ್ ಮೂಗಪ್ಪಗೆ ರಂಗಭೂಮಿ ಕಲಾವಿದರು ಇವರಿಗೆ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯನಗರ ಜಿಲ್ಲೆ ಹಾಗೂ ನಗರ ಸಭೆ ಹೊಸಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ 2024, 69 ನೇ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ ಬಣಕಾರ್ ಮೂಗಪ್ಪನವರು ರಂಗಭೂಮಿ ಕಲಾವಿದರು ಹಾಗೂ ಕಲಾ ಭಾರತಿ ಕಲಾ ಸಂಘವನ್ನು ಸ್ಥಾಪಿಸಿ ರಂಗ ಕಲೆಯಲ್ಲಿ ಹಲವಾರು ವೈವಿಧ್ಯಮಯ ನಾಟಕಗಳನ್ನು ವಿಭಿನ್ನ ಪಾತ್ರದಗಳಲ್ಲಿ ಮನೋಜ್ಞವಾಗಿ ಅಭಿನಯಿಸಿ ಲೀಲಾ ಜಾಲವಾಗಿ ನಟನೆ ಮಾಡಿ ವಿವಿಧ ಪಾತ್ರಗಳಿಗೆ ಜೀವ ತುಂಬಿ ರಂಗ ಕಲೆಯನ್ನು ಪೋಷಿಸುತ್ತಿರುವ ಅಪ್ರತಿಮ ನೈಜ ಕಲಾ ಪ್ರತಿಭೆಗೆ ಇಂದು 69 ನೇ. ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ವಿಜಯನಗರ ಜಿಲ್ಲಾ ಆಡಳಿತ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಬಿ.ಜೆಡ್ ಜಮೀರ್ ಅಹ್ಮದ್ ಖಾನ್. ಮಾನ್ಯ ವಸತಿ ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರು ಕರ್ನಾಟಕ ಸರಕಾರ ಹಾಗೂ ವಿಜಯನಗರ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮದ ಅಧ್ಯಕ್ಷತೆ ಮಾನ್ಯ ಶಾಸಕರು ಎಚ್.ಆರ್ ಗವಿಯಪ್ಪ ವಿಜಯನಗರ ಕ್ಷೇತ್ರ ಎಂ.ಎಸ್ ದಿವಾಕರ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವಿಜಯನಗರ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಸಿದ್ದಲಿಂಗಪ್ಪ ರಂಗಣ್ಣನವರ ಹಾಗೂ ಎಲ್ಲಾ ವರ್ಗದ ಅಧಿಕಾರಿಗಳು ಇತರರು ಇದ್ದರು. ಈ ಸಂದರ್ಭದಲ್ಲಿ ಬಣಕಾರ್ ಮೂಗಪ್ಪ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಭಾಜನ ರಾಗಿರುವ ಇವರಿಗೆ ಜನಪ್ರಿಯ ಶಾಸಕರಾದ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರ ಎನ್.ಟಿ ಶ್ರೀನಿವಾಸ್ ರವರು ಹಾಗೂ ಕೂಡ್ಲಿಗಿ ತಾಲೂಕು ಕಲಾಭಿಮಾನಿಗಳು ಪ್ರೋತ್ಸಾಹಕರು ರೈತಾಪಿ ವರ್ಗದವರು ಕನ್ನಡಪರ ಹೋರಾಟಗಾರರು ಅಭಿನಂದನೆ ತಿಳಿಸಿದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ