ಕಿತ್ತೂರು ರಾಣಿ ಚೆನ್ನಮ್ಮ 200 ನೇ. ವಿಜಯೋತ್ಸವ ಸಮಾವೇಶದಲ್ಲಿ – ಪಾಲ್ಗೊಂಡ ಶಾಸಕರು.
ರಾಂಪುರ ನ.06

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದ ಪತ್ನಿ ಬಸಪ್ಪ ಕಲ್ಯಾಣ ಮಂಟಪದಲ್ಲಿ ಕಿತ್ತೂರು ವೀರರಾಣಿ ಚೆನ್ನಮ್ಮನ 200 ನೇ. ವರ್ಷದ ವಿಜಯೋತ್ಸವ. ಸಮಾವೇಶವನ್ನು ಹಮ್ಮಿಕೊಂಡಿದ್ದು ಈ ಸಮಾವೇಶಕ್ಕೆ ವೀರಶೈವ ಪಂಚಮಸಾಲಿ ಲಿಂಗಾಯತ ಸಮಾಜದ ವಚನಾನಂದ ಸ್ವಾಮಿಗಳು ಭಾಗವಹಿಸಿದ್ದು ಮತ್ತು ಕ್ಷೇತ್ರದ ಎನ್.ವೈ ಗೋಪಾಲಕೃಷ್ಣ ಶಾಸಕರು ಪಾಲ್ಗೊಂಡು ಜ್ಯೋತಿ ಬೆಳಗಿಸಿ ಸಭೆಯಲ್ಲಿ ಮಾತನಾಡಿದರು. ಕಿತ್ತೂರಿನ ವೀರ ಮಹಿಳೆ ಧೈರ್ಯ ಸಾಧನೆ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಕುದುರೆಯನ್ನೇರಿ ಖಡ್ಗ ಹಿಡಿದು ದೇಶದ ಭದ್ರತೆಗಾಗಿ ಯುದ್ಧ ಮಾಡಿ ದೇಶಕ್ಕೆ ಹಿರಿಮೆ ತಂದು ಕೊಟ್ಟ ಒಬ್ಬ ವೀರರಾಣಿ ಮಹಿಳೆಗೆ ದೇಶದ ಪ್ರತಿಯೊಬ್ಬ ಪ್ರಜೆಗಳು ಗೌರವಿಸಬೇಕು. ಎಂದು ಶಾಸಕರು. ಸಭೆಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ವೀರಶೈವ ಪಂಚಮಸಾಲಿ ಲಿಂಗಾಯತ ಸಮಾಜದ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ನೆರವೇರಿಸಿದರು. ಹಾಗೂ ಸಮಾಜದ ಯುವ ಘಟಕದ ಯುವಕರಿಗೆ ಸನ್ಮಾನ ಮಾಡಲಾಯಿತು. ಹಾಗೂ ಸಮಾಜದ ವೀರಶೈವ ಪಂಚಮಸಾಲಿ ತಾಲೂಕ ಅಧ್ಯಕ್ಷತೆ ವಹಿಸಿದ ಆರ್.ಜೆ ಜಯಕುಮಾರ್ ಹಾಗೂ ತಾಲೂಕ ಅಧ್ಯಕ್ಷರು ಸೋಮನಗೌಡ. ಮಾಲಿ ಪಾಟೀಲ್. ಹಾಗೂ ಸಮಾಜದ ಯುವಕರು ಪ್ರಮುಖ ಮುಖಂಡರುಗಳು ಭಾಗವಹಿಸಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು