ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಪೋಷಕರ ಪಾತ್ರ ಹಿರಿದಾಗಿದೆ – ಶ್ರೀಶಾರದಾಶ್ರಮದ ಮಾತಾಜೀ ತ್ಯಾಗಮಯೀ ಹೇಳಿಕೆ.
ಚಳ್ಳಕೆರೆ ಜು.13





ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಪೋಷಕರ ಪಾತ್ರ ಬಹಳ ಮಹತ್ವದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ತಿಳಿಸಿದರು. ನಗರದ ಶ್ರೀಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಶ್ರೀಗುರು ಪೂರ್ಣಿಮೆ” ಯ ಪ್ರಯುಕ್ತ ಆಯೋಜಿಸಿದ್ದ ಗುರು ವಂದನಾ ಹಾಗೂ ಪೋಷಕರ ಸಭೆಯ ದಿವ್ಯ ಸಾನಿಧ್ಯ ವಹಿಸಿ ಅವರು ಉಪನ್ಯಾಸ ನೀಡಿದರು. ಪೋಷಕರು ತಮ್ಮ ಮಕ್ಕಳನ್ನು ಶಿವಾಜಿ, ಈಶ್ವರಚಂದ್ರ ವಿದ್ಯಾಸಾಗರ, ಸ್ವಾಮಿ ವಿವೇಕಾನಂದ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಅವರ ಜೀವನವನ್ನು ಆದರ್ಶವಾಗಿಟ್ಟು ಕೊಂಡು ಬೆಳೆಸಬೇಕು.

ತಮ್ಮ ಮಕ್ಕಳನ್ನು ಅಮೂಲ್ಯ ಆಸ್ತಿ ಎಂದು ಪರಿಗಣಿಸಿ ಅವರ ಪಾಲನೆ ಪೋಷಣೆ ಮಾಡಬೇಕು. ಅವರಿಗೆ ಸಂಸ್ಕಾರ ಮತ್ತು ಸಂಸ್ಕೃತಿಯ ಶಿಕ್ಷಣದ ಜೊತೆಗೆ ಮಾನವೀಯ ಮತ್ತು ನೈತಿಕ ಮೌಲ್ಯಗಳನ್ನು ಪೋಷಕರು ತಿಳಿಸಿ ಕೊಡಬೇಕು ಎಂದು ಕಿವಿಮಾತು ಹೇಳಿದರು. ದಾವಣಗೆರೆಯ ಶಿಕ್ಷಣ ತಜ್ಞರಾದ ಮಹಂತೇಶ್ ಕಮ್ಮರ್ ಮಾತನಾಡಿ ಪೋಷಕರು ತಮ್ಮ ಮಕ್ಕಳಲ್ಲಿ ಉತ್ತಮ ಕನಸುಗಳನ್ನು ತುಂಬಿ ಅವರಲ್ಲಿ ಉನ್ನತ ಚಿಂತನೆಗಳನ್ನು ಉದಾತ್ತ ಯೋಜನೆಗಳನ್ನು ಹಾಕಿ ಕೊಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಫೋರ್ಟ್ ಹಿಲ್ ಶಾಲೆಯ ಮುಖ್ಯಸ್ಥರಾದ ಫಣಿರಾಜ್ ಪಾಲ್ಗೊಂಡು ಮಾತನಾಡಿದರು. ಅಧ್ಯಕ್ಷತೆಯನ್ನು ಶ್ರೀಬಸವೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ವಿ.ಮಂಜುನಾಥ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವೀರಶೈವ ವಿದ್ಯಾರ್ಥಿ ನಿಲಯದ ಕಾರ್ಯದರ್ಶಿ ಎನ್.ಟಿ.ಪ್ರಕಾಶ್, ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಬಿ.ಸುಮನಾ ಕೋಟೇಶ್ವರ್, ಜಿ.ಯಶೋಧಾ ಪ್ರಕಾಶ್, ಯತೀಶ್ ಎಂ ಸಿದ್ದಾಪುರ, ಮುಖ್ಯ ಶಿಕ್ಷಕರಾದ ಬಿ.ಶ್ರೀನಿವಾಸ್, ಮಧುರ ಈಶ್ವರಪ್ಪ, ಹೆಚ್ ತಿಪ್ಪೇಸ್ವಾಮಿ, ಶಿಲ್ಪಾ ಪ್ರಕಾಶ್, ಶ್ರೀಪಾದರಾಜ್ ಸೇರಿದಂತೆ ಶಿಕ್ಷಕರು ಮತ್ತು ಪೋಷಕರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.