ಗ್ರಂಥಾಲಯ ಸಪ್ತಾಹ ಆಚರಣೆ.

ಹೂಡೇಂ ನವೆಂಬರ್.20

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುಡೇಂ ಅರಿವು ಕೇಂದ್ರ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಹಾಗೂ ಮಾಹಿತಿ ಕೇಂದ್ರ ದಲ್ಲಿ ಗ್ರಂಥಾಲಯ ಸಪ್ತಾಹ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಯುತ ರಾಮಚಂದ್ರಪ್ಪನವರು ಹಾಗೂ ಸದಸ್ಯರು ಶಶಿಕಾಲ ಜಯಣ್ಣ, ಪುಟ್ಟಮ್ಮ ಮಲ್ಲಿಕಾರ್ಜುನ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಕೆ ಲಕ್ಷ್ಮೀಬಾಯಿ ಕಾರ್ಯದರ್ಶಿ ತಿಪ್ಪೆರುದ್ರಪ್ಪ ಕಂಪ್ಯೂಟರ್ ಆಪರೇಟರ್ ತಿಪ್ಪೇಸ್ವಾಮಿ ಹಾಗೂ ಸಿಬ್ಬಂದಿ ವರ್ಗದವರ ಹಿರಿಯ ಮುಖಂಡರಾದ ಜರುಗು ಬೋರೆಯ್ಯನವರು ಹಾಗೂ ಜಿಬಿ ಬೋಸಯ್ಯನವರು ಹಾಗೂ ಓಬಣ್ಣನವರು. ಹಿರಿಯ ಓದುಗರಾದ ಶ್ರೀ ಬಿ ಪಾಪನಾಯಕನವರು, ಶ್ರೀ ಪೂಜಾರಿ ಪಾಲಯ್ಯ ಶ್ರೀ ಕಂಪಳ ರಂಗ ಪ್ರೌಢಶಾಲೆಯ ಲಲಿತ.ಹಾಗೂ ಮಧುಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಚ್ಚೆಂದ್ರಪ್ಪ ಹಾಗೂ ಪ್ರೌಢಶಾಲೆಯ ಮಕ್ಕಳು ಪ್ರಾಥಮಿಕ ಶಾಲೆ ಮಕ್ಕಳು, ಶ್ರೀ ಗುರು ಕನಕ ವಿದ್ಯಾ ಕೇಂದ್ರದ ಮಕ್ಕಳು, ಶ್ರೀ ಗುರು ಕನಕ ವಿದ್ಯಾ ಕೇಂದ್ರದ ಮುಖ್ಯ ಗುರುಗಳಾದ ಸುನಿತಾ. ಸರೋಜಾ. ಸಹ ಶಿಕ್ಷಕರ ವೃಂದದವರು ಹಾಗೂ ಪುಟಾಣಿ ಮಕ್ಕಳು ಊರಿನ ಗಣ್ಯ ವ್ಯಕ್ತಿಗಳು ಗ್ರಂಥಾಲಯದ ಓದುಗರು ಈ ಸುಂದರ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು .ಈ ಕಾರ್ಯಕ್ರಮದಲ್ಲಿ ಗ್ರಂಥ ಪಾಲಕರಾದ ಶ್ರೀ ತುಡುಮ ಗುರುರಾಜ್ ಮಾತನಾಡಿ ಗ್ರಂಥಾಲಯ ಅದರ ಬಗ್ಗೆ ಮಾಹಿತಿ ನೀಡಿ ಗ್ರಂಥಾಲಯದ ಸದ್ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು ಮಕ್ಕಳ ಬಾಲ್ಯವನ್ನು ಆನಂದಿಸಿ ಬೆಳೆಯುತ್ತಾ ಸಾಗಿ ಎಂಬ ನುಡಿ ಮುತ್ತುಗಳನ್ನು ಹೇಳಿ ಈ ಗ್ರಂಥಾಲಯದ 6 ರಿಂದ 18 ವರ್ಷದ ಮಕ್ಕಳಿಗೆ ಉಚಿತವಾಗಿ ಸದಸ್ಯತ್ವವನ್ನು ಪಡೆಯಲು ತಿಳಿಸಿದರು. ಗ್ರಂಥಾಲಯದ ಸದ್ಬಳಕೆಯ ಬಗ್ಗೆ ತಿಳಿಸಿದರು ಅಧ್ಯಕ್ಷರಾದ ರಾಮಚಂದ್ರಪ್ಪನವರು ಗ್ರಂಥಾಲಯದ ಸದುಪಯೋಗ ಮಾಡಿಕೊಳ್ಳಲು ತಿಳಿಸಿದರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಲಕ್ಷ್ಮೀಬಾಯಿ ಅವರು ಮಾತನಾಡಿ ಗ್ರಂಥಾಲಯದ ಸದ್ಬಳಕೆಯ ಬಗ್ಗೆ ಅರಿವು ಮೂಡಿಸಿದರು ಹಾಗೂ ಪಂಡಿತ್ ಲಾಲ್ ಜವಹರಲಾಲ್ ನೆಹರು ಅವರ ಬಗ್ಗೆ ಮಕ್ಕಳಿಗೆ ತಿಳಿಸಿದರು .ಗುರು ಕನಕ ಮುಖ್ಯ ಶಿಕ್ಷಕರು ಸುನಿತಾ ಮಾತನಾಡಿ ದಿನಾಲು ದಿನಪತ್ರಿಕೆ ಓದುವ ಹವ್ಯಾಸ ಮಾಡಿಕೊಳ್ಳಿ ಎಂದು ತಿಳಿಸಿದರು. ಗ್ರಂಥಾಲಯದ ಪಿತಾಮಹರಾದ ಎಸ್ ಆರ್ ರಂಗನಾಥನ್ ಅವರ ಬಗ್ಗೆ ಒಂದೆರಡು ವಿಷಯವನ್ನು ಮಕ್ಕಳಿಗೆ ತಿಳಿಸಿದರು. ಈ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಯಿತು ಮಕ್ಕಳಿಗೆ ಕೊನೆಯಲ್ಲಿ ಸಿಹಿ ಹಂಚುವ ಮೂಲಕ ವಿಜೃಂಭಣೆಯಿಂದ ಕಾರ್ಯಕ್ರಮವನ್ನು ಮುಕ್ತಾಯ ಗೊಳಿಸಲಾಯಿತು.

ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button