ನಿಯಮ ಪಾಲಿಸದ ಪವನ ವಿದ್ಯುತ್ ಕಂಪನಿಗಳು.
ರೋಣ ನ.07

ಇತ್ತೀಚಿನ ದಿನಗಳಲ್ಲಿ ತಾಲ್ಲೂಕಿನಾದ್ಯಂತ ಪವನ ವಿದ್ಯುತ್ ಕಂಪನಿಗಳ ಹಾವಳಿ ಹೆಚ್ಚಾಗಿದ್ದು ಘಟಕ ಅಳವಡಿಕೆ ಸಂದರ್ಭದಲ್ಲಿ ನಿಯಮ ಪಾಲಿಸದ ಮತ್ತು ರೈತರಿಗೆ ಸರಿಯಾದ ಮಾಹಿತಿ ನೀಡದ ಕಂಪನಿಗಳ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೋಣ ಪುರಸಭೆ ವ್ಯಾಪ್ತಿಯಮಜರೆ ಗ್ರಾಮ ಕೃಷ್ಣಾಪುರದ ರಿ.7 ಸ.ನಂ.18 ರ ಜಮೀನಿನಲ್ಲಿ ಖಾಸಗಿ ಪವನ ವಿದ್ಯುತ್ ಕಂಪನಿಯು ಕೃಷಿ ಭೂಮಿಯನ್ನು ಪರಿವರ್ತನೆ ಗೊಳಿಸದೆಲ್ಲದೆ ಮತ್ತು ಅಕ್ಕ ಪಕ್ಕದ ಜಮೀನುಗಳ ರೈತರ ಪೂರ್ವಾನುಮತಿ ಪಡೆಯದೆ ವಿದ್ಯುತ್ ಘಟಕ ಅಳವಡಿಕೆಗೆ ಮುಂದಾಗಿದೆ.

ವಿದ್ಯುತ್ ಘಟಕದ ವ್ಯಾಪ್ತಿ ಪಕ್ಕದ ರಿ.ಸ.ನಂ 22 ಮತ್ತು 23 ಜಮೀನಿನ ವರೆಗೆ ವ್ಯಾಪಿಸುತ್ತಿದ್ದು ಇದನ್ನು ಪ್ರಶ್ನಿಸಿದ ಜಮೀನಿನ ಮಾಲೀಕರಾದ ರಾಮಣ್ಣ ಮಹದೇವಪ ನವಲಗುಂದ, ಗಾಜಿ ಎಂಬ ರೈತರಿಗೆ, ರೋಣ ಠಾಣೆಯ ಪೊಲೀಸ್ ಸಿಬ್ಬಂದಿ ತಕರಾರು ಮಾಡದಂತೆ ಮತ್ತು ಆ ಕಂಪನಿ ಖರೀದಿಸಿದ ಜಮೀನಿನಿಂದ ಹೊರ ಹೋಗುವಂತೆ ಗದರಿಸಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ.’ಪವನ ವಿದ್ಯುತ್ ಘಟಕಗಳು ಅಷ್ಟೇ ಅಲ್ಲದೆ ಅವುಗಳ ನಿರ್ಮಾಣ ಕಾರ್ಯದಲ್ಲಿ ಬಳಕೆಯಾಗುವ ಕಾಂಕ್ರೀಟ್ ಮಿಕ್ಸರ್‌ಗೂ ರೈತರ ಜಮೀನು ಖರೀದಿ ಮಾಡಿದ್ದು ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗೆ ಪ್ರಮುಖವಾಗಿ ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡದೇ ಬಳಕೆ ಮಾಡುತ್ತಿದ್ದಾರೆ. ಆದರೆ, ಸಂಬಂಧಿಸಿದ ಅಧಿಕಾರಿಗಳು ಮಾತ್ರ ಅದನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ. ಇದರಿಂದಾಗಿ ಸರ್ಕಾರಕ್ಕೆ ಸಂದಾಯ ವಾಗಬೇಕಿದ್ದ ಆದಾಯಕ್ಕೂ ಅಧಿಕಾರಿಗಳೇ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ದೂರಿದ್ದಾರೆ.

ನಮ್ಮ ಪಕ್ಕದ ಜಮೀನಿನಲ್ಲಿ ಪವನ ವಿದ್ಯುತ್ ಯಂತ್ರ ಅಳವಡಿಸುತಿದ್ದು ಇದರಿಂದ ನಮ್ಮ ಜಮೀನಿಗೆ ತೊಂದರೆಯಾಗುತ್ತಿದೆ ಎಂದು ಪ್ರಶ್ನಿಸಲು ಹೋದ ನಮ್ಮ ತಾಯಿಗೆ ಕಂಪನಿಯವರು ದೂರು ಸಲ್ಲಿಸಿದರು.ನಿಂದಿಸಿ ಹೊರ ಹೋಗುವಂತೆ ಗದರಿಸಿದ್ದಾರೆ. ಜತೆಗೆ ಸ್ಥಳದಲ್ಲಿದ್ದ ಪೊಲೀಸರು ಸಹ ನಮ್ಮ ಸಹಾಯಕ್ಕೆ ಬರದೇ ಕಂಪನಿಯವರ ಪರ ಮಾತನಾಡಿದರು ಎಂದು ಕೃಷ್ಣಾಪುರದ ಯುವ ರೈತ ಮಹದೇವಪ್ಪ ಗಾಜಿ ಆರೋಪ ಮಾಡಿದ್ದಾರೆ.ಪವನ ವಿದ್ಯುತ್ ಕಂಪನಿಯವರು ನಮಗೆ ಸರಿಯಾದ ಮಾಹಿತಿ ನೀಡದ ಕಾರಣ ಕೆಲಸ ಸ್ಥಗಿತ ಗೊಳಿಸುವಂತೆ ಮನವಿ ಮಾಡಿದಾಗ ಪೊಲೀಸರನ್ನು ಕರೆಸಿ ಕೆಲಸ ಸ್ಥಗಿತ ಗೊಳಿಸಿದರೆ ಅ ದಿನದ ಕಾರ್ಮಿಕರ ವೇತನ ಮತ್ತು ಕಂಪನಿಗಾಗುವ ಹಾನಿಯನ್ನು ನೀವೇ ಭರಿಸಬೇಕು ಎಂದು ಗದರಿದ್ದಾರೆ ಎಂದು ರೈತ ರಾಮಣ್ಣ ನವಲಗುಂದ ದೂರಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ ರೋಣ