ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗೈರು ಹಾಜರಿಂದ – ಗ್ರಾಮ ಸಭೆ ರದ್ದು.
ಜಕ್ಕಲಿ ನ.08

ರೋಣ ತಾಲೂಕಿನ ಜಕ್ಕಲಿ ಗ್ರಾಮ ಪಂಚಾಯಿತಿಯಲ್ಲಿ ಬುಧುವಾರ ನಡೆಯಬೇಕಿದ್ದ ಗ್ರಾಮ ಸಭೆಗೆ ಜನ ಪ್ರತಿನಿದಿಗಳು ಮತ್ತು ಅಧಿಕಾರಿಗಳು ಪಾಲ್ಗೊಳ್ಳದ ಕಾರಣ ಗ್ರಾಮಸ್ಥರ ಅಪ್ಪಣೆ ಮೇರೆಗೆ ಸಭೆ ರದ್ದು ಮಾಡಲಾಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ. ಎಸ್.ಎಸ್ ರಿತ್ತಿ ಗ್ರಾಮ ಸಭೆಯಲ್ಲಿ ಸ್ವೀಕಾರವಾದ ಮನವಿ ಓದಲು ಮುಂದಾದಾಗ ಗ್ರಾಮಸ್ಥರು ಎಲ್ಲಾ 32 ಇಲಾಖೆಯ ಮುಖ್ಯಸ್ಥರು ಸಭೆಗೆ ಹಾಜರಾಗಬೇಕು ನಂತರವೇ ಗ್ರಾಮ ಸಭೆ ನಡೆಯಬೇಕು ಎಂದು ಸಾರ್ವಜನಿಕರು ಪಟ್ಟು ಹಿಡಿದರು.

ಸಭೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದರಿಂದ ಸಾರ್ವಜನಿಕರು ಗ್ರಾ.ಪಂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿಗೆ ಎಡೆ ಮಾಡಿಕೊಟ್ಟು, ಗ್ರಾಮ ಸಭೆ ಮುಂದೂಡುವಂತೆ ಸ್ಥಳೀಯರು ಒತ್ತಾಯಿಸಿದರು. ಸರ್ಕಾರದ ಯೋಜನೆಗಳಿಗೆ ಫಲಾನುಭವಿಗಳನ್ನು ಗುರುತಿಸುವಂತಹ ಕೆಲಸ ಗ್ರಾಮ ಸಭೆಯಲ್ಲಿ ಆಗಬೇಕಿದೆ. ಇಂತಹ ಮಹತ್ವದ ಸಭೆಗೆ 13 ಜನ ಸದಸ್ಯರಲ್ಲಿ ಕೇವಲ 5 ಜನ ಸದಸ್ಯರು ಪಾಲ್ಗೊಂಡಿದ್ದು ಇನ್ನುಳಿದ 8 ಜನ ಸದಸ್ಯರೇ ಬಾರದಿದ್ದರೆ ಹೇಗೆ ಎಂದು ಗ್ರಾಮಸ್ಥರು ಗೈರಾದ ಸದಸ್ಯರಿಗೆ ಛೀಮಾರಿ ಹಾಕಿದರು.
ಮತ್ತು ಗ್ರಾಮ ಸಭೆಗೆ ವಿವಿಧ ಇಲಾಖೆಯ ಅಧಿಕಾರಿಗಳು ಗೈರಾಗಿದ್ದ ರಿಂದ ಗ್ರಾಮ ಸಭೆ ನಡೆಸಬಾರದು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಗ್ರಾಮ ಸಭೆಯನ್ನು ಮುಂದುಡಿ ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಗ್ರಾಮ ಸಭೆ ಎಂಬುದು ಸ್ಥಳೀಯ ಮಟ್ಟದ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿದೆ.
ಜನರ ಸಮಸ್ಯೆ ಬಗೆಹರಿಸಲು ಯಾವೊಬ್ಬ ಅಧಿಕಾರಿಯೂ ಬಂದಿಲ್ಲ, ಈ ಸಭೆಗೆ ಗೈರಾಗಿ ಅಸಡ್ಡೆ ತೋರುವ ಆಡಳಿತ ವರ್ಗಕ್ಕೆ ಧಿಕ್ಕಾರವಿರಲಿ ಅದಲ್ಲದೆ ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ 6 ತಿಂಗಳಿಗೊಮ್ಮೆ ಗ್ರಾಮ ಸಭೆ ಮಾಡಿ ದಾಖಲೆ ಸೃಷ್ಟಿಸುವ ಉದ್ದೇಶದಿಂದ ಗ್ರಾಮ ಸಭೆ ಆಗಬೇಕು ನಮ್ಮ ಜಕ್ಕಲಿ ಗ್ರಾಮದಲ್ಲಿ 3 ವರ್ಷವಾದರೂ ಇದುವರೆಗೂ ಒಂದು ಗ್ರಾಮ ಸಭೆ ನಡೆದಿಲ್ಲ ಎಂದು ಸ್ಥಳೀಯ ನಿವಾಸಿ ಮುತ್ತಪ್ಪ ತಳವಾರ ಪಿಡಿಓ ತರಾಟೆಗೆ ತೆಗೆದುಕೊಳ್ಳುವುದರ ಜೊತೆಗೆ ಆಕ್ರೋಶ ಹೊರ ಹಾಕಿದರು.
ಗ್ರಾಮಸ್ಥರ ಒತ್ತಾಯದ ಮೇರೆಗೆ ಗ್ರಾಮ ಸಭೆ ರದ್ದು ಗೊಳಿಸಲಾಯಿತು. ಮುಂದಿನ ಸಭೆಯ ದಿನಾಂಕ ನವಂಬರ್ 16 ತಾರೀಕಿನಂದು ನಿಗದಿಪಡಿಸ ಲಾಗುವುದೆಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಎಸ್ ರಿತ್ತಿ ಮಾತನಾಡಿದರು. 6 ನೇ ತಾರೀಕಿಗೆ ನಡೆಯಬೇಕಿದ್ದ ಗ್ರಾಮ ಸಭೆ ಅಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಳದ ಕಾರಣ ಗ್ರಾಮ ಸಭೆಯನ್ನು ಮುಂದೂಡಲಾಗಿದೆ ಎಂದು 32 ಇಲಾಖೆ ಮತ್ತು 13 ಜನ ಸದಸ್ಯರಿಗೆ ಮರು ನೋಟಿಸ್ ಮಾಡಿ 16 ತಾರೀಕಿನಂದು ಸಭೆಗೆ ಆ ಹಾಜರಾಗಬೇಕು ಎಂದು ಮರು ನೋಟಿಸ್ ಮಾಡಬೇಕು ಎಂದು ಅಭಿವೃದ್ಧಿ ಅಧಿಕಾರಿ ಎಸ್.ಎಸ್ ರಿತ್ತಿ ರವರಿಗೆ ನಮ್ಮ ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಮೂಲಕ ಒತ್ತಾಯವಾಗಿದೆ.
ಈ ಜಕ್ಕಲಿ ಗ್ರಾಮದಲ್ಲಿ 16 ತಾರೀಕಿನ ಗ್ರಾಮಸಭೆಗೆ 32 ಇಲಾಖೆಯವರು ಮತ್ತು ಗ್ರಾಮದ ಎಲ್ಲಾ ಸದಸ್ಯರು ಪಾಲ್ಗೊಂಡು ಅಂದಿನ ಗ್ರಾಮ ಸಭೆಯನ್ನು ಯಶಸ್ವಿ ಮಾಡುವರೋ ಇಲ್ಲವೋ ಎಂದು ಕಾದು ನೋಡೋಣಾ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಸ್.ವಿ.ಸಂಕನಗೌಡ್ರ.ರೋಣ