ಬಣ್ಣದ ಬದುಕಿನ ಬಯಲಾಟವನ್ನ ಸದಾ – ಜೀವಂತ ವಾಗಿರಿಸಿದ ಹಳ್ಳಿಯ ಜನ.
ಸಿರಿವಾರ ನ. 08

07/11/2024 ಗುರುವಾರ ದಿನ ದಂದು ಅಕ್ಷಯ ಕಲಾ ಟ್ರಸ್ಟ್ (ರಿ) ಹೊಸ ಯರಗುಡಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ವಿಶೇಷ ಘಟಕ ಧನ ಸಹಾಯ ಯೋಜನೆಯಡಿ ಬಳ್ಳಾರಿ ತಾಲೂಕು ಸಿರಿವಾರ ಗ್ರಾಮದಲ್ಲಿ. ಜಾನಪದ ಗ್ರಾಮೀಣ ರಂಗೋತ್ಸವ. 2024 ರ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಉದ್ಘಾಟನೆಶ್ರೀಯುತ ಜಿ.ತಿಮ್ಮಾರಡ್ಡಿ ಕರ್ನಾಟಕ ಯುಕ್ಷಗಾನ ಬಯಲಾಟ ಅಕಾಡೆಮಿಯ ಪಾರ್ಥಿಸುಬ್ಬ ಪ್ರಶಸ್ತಿ ಪುರಸ್ಕೃತರು ಇವರು ಮದ್ದಲೆ ನುಡಿಸುವದರ ಮೂಲಕ ಉದ್ಘಾಟಿಸಿ ಕಲಾವಿದನಿಗೆ ಮಾತೃ ಹೃದಯವಿದ್ದಾಗ ಮಾತ್ರ ಯಶಸ್ಸು ಸಾಧ್ಯ ನಿಂದನೆ ಅಪಪ್ರಚಾರ ವೈರತ್ವ ಗುಣ ಇವು ಕಲಾವಿದನ ಕಲಾ ಶ್ರೀಮಂತಿಕೆಯನ್ನ ಅವನತಿಗೆ ತಳ್ಳುತ್ತದೆ ಮೊದಲು ಇದನ್ನು ಕಲಾವಿದ ತ್ಯಜಿಸಬೇಕು ಎಂದು ನುಡಿದರು.

ಅದ್ಯಕ್ಷತೆವಹಿಸಿದ್ದ ಪಂಪಯ್ಯ ಸ್ವಾಮಿ ವಂದವಾಗಲಿ ಇವರು ಮಾತನಾಡಿ ಕಲಾವಿದರಲ್ಲಿ ಅಪಪ್ರಚಾರಕ್ಕೆ ಯಾರು ಕಿವಿಗೊಡ ಬಾರದು ಬಯಲಾಟದ ಎಲ್ಲಾ ಕಲಾವಿದರು ಭ್ರಾತೃತ್ವ ಗುಣ ಹೊಂದಿದವರು ನಮ್ಮತನ ವನ್ನು ನಾವು ಕಾಯ್ದು ಕೊಂಡಾಗಲೆ ಪ್ರೊತ್ಸಾಹ ತಾನಾಗೇ ಸಿಗುತ್ತದೆ ಇದಕ್ಕೆ ನೆರದ ಅಪಾರ ಜನಸ್ಥೋಮವೇಸಾಕ್ಷಿ ಎಂದರು. ಅತಿಥಿಗಳ ನುಡಿಯನ್ನು ಶ್ರೀಯುತ ಯಲ್ಲನ ಗೌಡ ಶಂಕರ ಬಂಡೆ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷರು ಮಾತನಾಡಿ ಕಠಿಣವಾದ ಕಲ್ಲನ್ನು ಮೂರ್ತಿ ಯಾಗಿಸುವ ಶಕ್ತಿ ಕಲೆಗೆ ಇದೆ ತನು ಮನ ಶುದ್ಧಿ ಇದ್ದರೆ ಮಾತ್ರ ಸಿದ್ಧಿಸುವುದು ಆದರೆ ಶಿಲೆಯಂತಿರುವ ಬಯಲಾಟ ಕಲೆಯನ್ನ ಬಯಲಾಟ ಕಲಾವಿದ ರಿಂದಲೇ ಚೂರು ಚೂರು ಗೊಳಿಸುವ ಹುನ್ನಾರ ನಡೆಯುತ್ತಿದೆ. ಅಂತಹ ವ್ಯಕ್ತಿಗಳ ಮಾತಿಗೆ ಕಲಾವಿದರು ಕಿವಿಗೊಡ ಬಾರದೆಂದು ಹೇಳಿದರು. ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಸಹ ಕಾಯದರ್ಶಿ ಗಳಾದ ಸುಬ್ಬಣ್ಣ ತೊಗಲು ಗೊಂಬೆ ಕಲಾವಿದರು ಮತ್ತುವೀರೇಶ್ ದಳವಾಯಿ ಹಿಂದುಸ್ಥಾನಿ ಸಂಗೀತ ಕಲಾವಿದರು ಉಪಸ್ಥಿತರಿದರು. ಹೆಚ್ .ತಿಪ್ಪೇಸ್ವಾಮಿ ಕಾರ್ಯದರ್ಶಿ ಭಾಗವಹಿಸಿ ಸಹನೆ ಬೇಕು ಸಾಧಕನಿಗೆ ತನ್ನ ಮನದೊಳ ಕಿಚ್ಚು ತನ್ನ ಮನ ಸುಟ್ಟಲ್ಲದೆ ನೆರಮನ ಬೇವುದೇ ಕಲಾವಿದನ ಮೊದಲ ಶತ್ರು ಎಂದರೆ ದ್ವೇಷ ಅಸೂಯ ಗುಣ ಇವುಗಳನ್ನು ತ್ಯಜಿಸಿದಾಗಲೆ ಜೀವನ ಸಾರ್ಥಕ ವೆಂದರು. ಕಾರ್ಯಕ್ರಮದಲ್ಲಿ ಹನುಮಯ್ಯ ಜಾನಪದ ಗಾಯಕ ಡಿ. ಹೇಮಂತ್ ಸಿ.ಮಾರಣ್ಣ ಉಪಸ್ಥಿತರಿದ್ದರು. ಗ್ರಾ.ಪಂ ಅಧ್ಯಕ್ಷರು ಸರ್ವ ಸದಸ್ಯರು ಊರಿನ ಪ್ರಮುಖರು ಅತಿಥಿಗಳಾಗಿ ಭಾಗವಹಿಸಿದ್ದರು. ಕಮಲರಾಜ ಶೇಖರಪ್ಪ ನಾರದ ರಾಮಾಂಜಿನಿ, ಕೌಂಡ್ಲಿಕ ದೇವರಾಜ, ರತಿ ಕಮಲಗಂಧಿ ಉಮಾ ಕೂಡ್ಲಿಗಿ, ತಬಲ ನಾಗಲಿಂಗ ಕೊರ್ಲಗುಂದಿ ಭಾಗವಹಿಸಿದ್ದರು. ಜಾನಪದ ಗಾಯನ. ಬಿ.ಆನಂದ್ ತಂಡದಿಂದ ವಚನ ಗಾಯನ. ತಾಯಪ್ಪ ಎಮ್ಮಿಗನೂರು ತಂಡ ರಂಗಗೀತೆ. ಸುಬ್ಬಣ್ಣ ಬಳ್ಳಾರಿ ಸುಗಮ ಸಂಗೀತ. SM ಹುಲುಗಪ್ಪ ತಂಡ ರತಿಕಲ್ಯಾಣ ಬಯಲಾಟ ಪ್ರದರ್ಶನ. ಹೊನ್ನೂರು ವಲಿ ತಂದೆ ಚಂದಾವಲಿ. ತಂಡದಿಂದ ಪ್ರದರ್ಶನ ಗೊಂಡಿತು.ಅಕ್ಷಯ ಕಲಾ ಟ್ರಸ್ಟ್ ಅಧ್ಯಕ್ಷ HG ಸುಂಕಪ್ಪ ಇವರು ವಂದಿಸಿದರು. ರತಿಕಲ್ಯಾಣ ಬಯಲಾಟ ಪ್ರದರ್ಶನ ಸಾವಿರಾರು ಜನರ ಮನಸ್ಸನ್ನ ತಣಿಸಿ ಯಶಸ್ವಿ ಗೊಳಿಸಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ