ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ 12, ಎಕರೆ ಹತ್ತಿ ಭಸ್ಮ – ಭೇಟಿ ನೀಡಿದ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ವರ್ಗ.
ನೀರಮಾನ್ವಿ ನ.08

ಮಾನವಿ ತಾಲೂಕಿನ ನೀರಮಾನ್ವಿ ತಾಂಡದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ ರೈತ ಪರಶುರಾಮ ಬೆಳೆದ 12 ಎಕರೆಯ ಹತ್ತಿ ಸರಿ ಸುಮಾರು 10 ಲಕ್ಷ ರುಪಾಯಿ ಮೌಲ್ಯದ ಬೆಳೆ ಸುಟ್ಟು ಕರಕಲಾಗಿದೆ.
ರೈತ ಪರಶುರಾಮ್ ತನ್ನ 12 ಎಕರೆಯಲ್ಲಿ ಬೆಳೆದ ಹತ್ತಿ ಬೆಳೆಯು ಸಂಪೂರ್ಣ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿಗೆ ಆಹುತಿಯಾಗಿದೆ.

ಇದರಿಂದಾಗಿ ಪರಶುರಾಮ ಎಂಬ ರೈತನು ಸಂಕಷ್ಟದಿಂದ ಮನೆ ಇಲ್ಲದೆ, ಬೆಳೆದ ಬೆಳೆಯು ಇಲ್ಲದೆ ಸಾಲಭರಿತನಾಗಿ ಚಿಂತಾ ಕ್ರಾಂತನಾಗಿದ್ದಾನೆ ರೈತರ ಸಂಕಷ್ಟವನ್ನು ಆಲಿಸುವ ಜನ ಪ್ರತಿನಿಧಿಗಳು ತಾಲೂಕ ಆಡಳಿತ ಅಧಿಕಾರಿಗಳು ಭೇಟಿ ಕೊಟ್ಟಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ