ಆನೇಕಲ್ ಡಾ, ಬಿ.ಆರ್ ಅಂಬೇಡ್ಕರ್ ಯುವಕ ಸಂಘದ ಗ್ರಾಮ ಶಾಖೆ ಉದ್ಘಾಟನೆ.
ರೋಣ ನ.09

ಡಾ, ಬಿ.ಆರ್.ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿ ಕೊಳ್ಳಬೇಕು. ಇಂದಿನ ಮಕ್ಕಳಿಗೆ ಶಿಕ್ಷಣವನ್ನು ನೀಡಲು ಹಗಲಿರುಳು ಶ್ರಮಿಸಬೇಕು ಎಂದು ಆನೇಕಲ್ ಡಾ, ಬಿ.ಆರ್. ಅಂಬೇಡ್ಕರ್ ಸಂಘದ ರಾಜ್ಯಾಧ್ಯಕ್ಷ ಡಾ, ಮರಸೂರು ಕೃಷ್ಣಪ್ಪ ಅವರು ಹೇಳಿದರು. ತಾಲೂಕಿನ ಹುನಗುಂಡಿ ಗ್ರಾಮದಲ್ಲಿ ಆನೇಕಲ್ ಡಾ, ಬಿ.ಆರ್. ಅಂಬೇಡ್ಕರ್ ಸಂಘದ ಗ್ರಾಮ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ ದಲಿತರು ಹಾಗೂ ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಅನ್ಯಾಯವಾದಾಗ ಸಂಘಟನೆಯ ಮೂಲಕ ಹೋರಾಟ, ಪ್ರತಿಭಟನೆ ನಡೆಸಿ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಪ್ರಾಮಾಣಿಕವಾಗಿ ಸ್ಪಂದಿಸುವೆ ಎಂದರು.
ಕನ್ನಡಾಂಬೆ ರಕ್ಷಣಾ ವೇದಿಕೆ ಸಿಂಹಘರ್ಜನೆ ರಾಜ್ಯಾಧ್ಯಕ್ಷ ಮಂಜುನಾಥ ಮಾತನಾಡಿ ಡಾ, ಬಿ.ಆರ್.ಅಂಬೇಡ್ಕರ್ ಅವರು ಹಾದಿಯಲ್ಲಿ ಪ್ರತಿಯೊಬ್ಬರೂ ಸಾಗಬೇಕು. ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆದಾಗ ಮಾತ್ರ ಸಮಾಜದ ಸುಧಾರಣೆ ತರಲು ಸಾಧ್ಯ. ಗ್ರಾಮೀಣರಿಗೆ ಸರಕಾರ ನೀಡುವ ಯೋಜನೆಗಳನ್ನು ತಲುಪಿಸಿದಾಗ ಮಾತ್ರ ಸಂವಿಧಾನ ಶಿಲ್ಪಿ ಡಾ, ಬಿ.ಆರ್.ಅಂಬೇಡ್ಕರ್ ಅವರ ಆಶಯಗಳು ಈಡೇರಿ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಮಾತನಾಡಿದರು.
ಇದೇ ಸಂದರ್ಭದಲ್ಲಿ ಆನೇಕಲ್ ಡಾ, ಬಿ.ಆರ್.ಅಂಬೇಡ್ಕರ್ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಕೋಲಾರ ಜೈ ಭೀಮ್ ಗಣೇಶ, ರಾಜ್ಯ ಕಾರ್ಯದರ್ಶಿ ದೊಡ್ಡಪುರ ಚಂದ್ರಶೇಖರ, ವಿನೋದ ಕುಮಾರ, ರಾಜ್ಯ ಖಜಾಂಚಿ ಮೈಲಾರಪ್ಪ, ಬಸಪ್ಪ ಕಡಿಯವರ,ಯಲ್ಲಪ್ಪ ಕಡಿಯವರ, ಮುದಿಯಪ್ಪ ದೊಡ್ಡಮನಿ, ಯಲ್ಲಪ್ಪ ದೊಡ್ಡಮನಿ, ರಾಮಪ್ಪ ದೊಡ್ಡಮನಿ, ಶಿವಪ್ಪ ಕಡಿಯವರ, ಮಲ್ಲಪ್ಪ ಕಡಿಯವರ, ಹನಮಪ್ಪ ಕಡಿಯವರ, ಪ್ರಕಾಶ ಕಡಿಯವರ ಸೇರಿದಂತೆ ಸಮಾಜದ ಮುಖಂಡರು ಹಾಗೂ ಯುವಕರು ಹಾಜರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಸ್.ವಿ.ಸಂಕನಗೌಡ್ರ.ರೋಣ