ಅಂಬೇಡ್ಕರ್ ಕಾಲೋನಿ ಕಾಯಕಲ್ಪಕ್ಕೆ – ಎದುರು ನೋಡುತ್ತಿರುವ ಜನರು.
ಮರಿಯಮ್ಮನಹಳ್ಳಿ ನ.09

ಪಟ್ಟಣದ 1, 2 ಮತ್ತು 15 ವಾರ್ಡಗಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯದವರು 2,500 ಸಾವಿರ ಜನಸಂಖ್ಯೆ ಇದ್ದು 1, 2 ಮತ್ತು 15 ವಾರ್ಡಗಲ್ಲಿ 30 ವರ್ಷಗಳ ಹಿಂದೆ ಅಂದು ಜಿಲ್ಲಾ ಪಂಚಾಯತನಿಂದ ನಿರ್ಮಿಸಿದ್ದ ಚರಂಡಿಗಳೇ ಈಗಲೂ ಇದ್ದು. ಸುಮಾರು ವರ್ಷಗಳಿಂದ ಇವುಗಳು ಹಾಳಾಗಿದ್ದು ಕೆಲವು ಕಡೆ ಹುದುಗಿ ಹೋಗಿ ಗಿಡ ಗಂಟೆಗಳು ಬೆಳೆದಿವೆ. ಸ್ಥಳೀಯ ಸಂಸ್ಥೆಗಳು ಮತ್ತು ಜನರಿಂದ ಆಯ್ಕೆಯಾದ ಶಾಸಕರು ಪರಿಶಿಷ್ಟ ಜಾತಿಯವರ ಅಭಿವೃದ್ಧಿಗಾಗಿ ಎಸ್ಸಿಪಿ, ನಗರೋತ್ಥಾನ, 24.10, 7.25 ಮತ್ತು ಇತರೆ ಯೋಜನೆಯ ಅನುದಾನಗಳನ್ನು ಬಳಸಿ ಅಭಿವೃದ್ಧಿ ಪಡಿಸಬೇಕಿದೆ. ಇಂದಿಗೂ ಶಾಸಕರು ಸಮರ್ಪಕವಾಗಿ ನಮ್ಮ ಏರಿಯಾಗಳಲ್ಲಿ ಕೆಲಸ ಮಾಡುತ್ತಿಲ್ಲವೆಂದು ಅಂಬೇಡ್ಕರ್ ಕಾಲೋನಿಯ ಸ್ಥಳೀಯ ನಿವಾಸಿಗಳು ಹಲವು ಅಭಿವೃದ್ಧಿಯ ಕಾಯಕಲ್ಪಕ್ಕೆ ಎದುರು ನೋಡುತ್ತಿದ್ದೇವೆ ಎಂದು ಇಲ್ಲಿನ ಜನರು ಮಾಹಿತಿ ನೀಡಿ ಬೇಸರ ವ್ಯಕ್ತಪಡಿಸಿದರು. ಕಾಲಕ್ಕೆ ತಕ್ಕಂತೆ ಚರಂಡಿಗಳನ್ನು ವೈಜ್ಞಾನಿಕವಾಗಿ ನಿರ್ಮಿಸಿ ನೀರಿನ ಹರಿವಿಗೆ ಅನುಕೂಲ ಮಾಡಬೇಕು ಇದುವರೆಗೂ ಆ ಕೆಲಸವಾಗಿಲ್ಲ ಕೇವಲ ರಸ್ತೆಗಳನ್ನು ನಿರ್ಮಿಸಿದರೆ ಸಾಲದು ಚರಂಡಿಗಳನ್ನು ನಿರ್ಮಿಸಿ ನಮ್ಮ ಆರೋಗ್ಯ ಸುಸ್ಥಿತಿಯಲ್ಲಿಟ್ಟು ಕೊಳ್ಳಲು ಜನ ಪ್ರತಿನಿಧಿಗಳು ಅಧಿಕಾರಿಗಳು ಆಧ್ಯತೆ ಕೊಡಬೇಕು ಎನ್ನುವುದು ಇಲ್ಲಿನ ನಿವಾಸಿಗಳ ಅಭಿಮತವಾಗಿದೆ.
ನಿಂತ ಚರಂಡಿಗಳು:– ಬಹುತೇಕ ಚರಂಡಿಗಳು ಹೊಸದಾಗಿ ನಿರ್ಮಿಸದೆ ಇರುವುದರಿಂದ 30 ವರ್ಷಗಳ ಹಿಂದೆ ನಿರ್ಮಿಸಿದ ಹಳೇ ಚರಂಡಿಗಳು ಮಣ್ಣು ಇತರೆ ತ್ಯಾಜ್ಯ ತುಂಬಿ ನೀರು ಮುಂದಕ್ಕೆ ಹೋಗದೆ ಮನೆಗಳ ಮುಂದೆ ನಿಂತು ಕೊಳ್ಳಲಿಕ್ಕಾಗದೆ ದುರ್ನಾತ ಬೀರುತ್ತಿದೆ. ಇದರಿಂದ ಜನರಲ್ಲಿ ಅನಾರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಮೂಲದಿಂದ ಆರ್ಥಿಕವಾಗಿ ಹಿಂದುಳಿದು ಕೂಲಿ ಮಾಡಿ ಜೀವಿಸುವ ಜನಾಂಗ ದವರಾಗಿದ್ದು. ಗಂಭೀರ ಆರೋಗ್ಯ ಸಮಸ್ಯೆ ಕಂಡು ಬಂದಾಗ ಸಾವೇ ಗತಿ ಎಂದು ಕೈ ಚೆಲ್ಲಿ ಕೂರುವ ಪರಿಸ್ಥಿತಿ ಇಲ್ಲಿನ ಜನಗಳದ್ದಾಗಿದೆ. ಹಾಗಾಗಿ ಆರೋಗ್ಯದ ದೃಷ್ಟಿಯಿಂದ ರಸ್ತೆ ಮತ್ತು ಚರಂಡಿಯನ್ನು ವೈಜ್ಞಾನಿಕವಾಗಿ ನಿರ್ಮಿಸುವ ಅಗತ್ಯವಿದೆ ಎನ್ನುವುದು ಇಲ್ಲಿಯ ಜನರ ಆಶಯವಾಗಿದೆ.
ಕೊಳಚೆ ಪ್ರದೇಶಕ್ಕೆ ಯ್ಯೋಗ್ಯತೆ:- ಕೊಳಚೆ ಪ್ರದೇಶವಾಗಿರುವ ಈ ಪರಿಶಿಷ್ಟರ ಕಾಲೋನಿ ಅಧಿಕೃತವಾಗಿ ಕೊಳಚೆ ಪ್ರದೇಶಕ್ಕೆ ಸೇರುವ ಎಲ್ಲಾ ಯ್ಯೋಗ್ಯತೆ ಗಳಿದ್ದರೂ ಇಲ್ಲಿಯವರೆಗೆ ಸೇರಿಸದಿರುವುದು ವಿಪರ್ಯಾಸ. ಇಲ್ಲಿನ ಜನರು ವಾಸಿಸುವುದಕ್ಕೆ ಬೇರೆ ಸ್ಥಳಾವಕಾಶ ವಿಲ್ಲದೆ 1 ರಿಂದ 15 ಜನ ಮೂರು ನಾಲ್ಕು ಕುಟುಂಬಗಳು ಒಂದೇ ಮನೆಯಲ್ಲಿ ಸ್ಥಳಾವಕಾಶ ವಿಲ್ಲದೆ ಇಕ್ಕಟ್ಟಿನಲ್ಲಿ ವಾಸಿಸುತ್ತಿವುದು ಶೋಚನಿಯ ಸಂಗತಿ. ಅಧಿಕಾರಿಗಳು ಈ ಏರಿಯಾಗಳನ್ನು ಅಧಿಕೃತವಾಗಿ ಸರ್ಕಾರದ ಕೊಳಚೆ ಪ್ರದೇಶಾಭಿವೃದ್ಧಿ ವ್ಯಾಪ್ತಿಗೆ ಸೇರಿಸಿ ನಿವೇಶನ ಮತ್ತು ಮನೆಗಳನ್ನು ಕೊಟ್ಟು, ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅವರ ಅಭಿವೃದ್ಧಿಗಾಗಿ ಗಮನ ಕೊಡಬೇಕೆಂದು ಇಲ್ಲಿನ ಜನಗಳು ಅಗ್ರಹಿಸಿದ್ದಾರೆ.
ಬಾಕ್ಸ್:-
ನಮ್ಮ ಕ್ಷೇತ್ರದ ಶಾಸಕರು ಗೆದ್ದ ನಂತರ ಒಮ್ಮೆಯೂ ನಮ್ಮ ವಾರ್ಡ್ ಗಳಿಗೆ ಭೇಟಿ ನೀಡಿಲ್ಲ. ಇಲ್ಲಿನ ಅಭಿವೃದ್ಧಿ ಬಗ್ಗೆ ಮಾತನಾಡಿಲ್ಲ ಯಾರೇ ಶಾಸಕರಾಗಲಿ ನಮಗೂ ಶಾಸಕರೇ. ಪರಿಶಿಷ್ಟರಿಗೆಂದೇ ಮೀಸಲಿರುವ ಅನುದಾನ ವನ್ನಾದರೂ ನಮ್ಮ ಏರಿಯಾಗಳಲ್ಲಿ ಬಳಸಿ ಅಭಿವೃದ್ಧಿಪಡಿಸಲಿ. ಒಮ್ಮೆ ನಮ್ಮ ಏರಿಯಾಕ್ಕೆ ಭೇಟಿ ನಿಡಿ ಪರಿಸ್ಥಿತಿ ಕಣ್ಣಾರೆ ಕಾಣಲಿ. ಚರಂಡಿಗಳ ಅವಶ್ಯಕತೆ ಇದೆ. ಇಲ್ಲಿನ ಗರಡಿ ಮನೆ, ಸಮುದಾಯ ಭವನ, ಮತ್ತು ದೇವಸ್ಥಾನಗಳಿದ್ದು ಅವುಗಳ ಸುತ್ತಲೂ ಇದ್ದ ಕಂಪೌಂಡ್ ಕಳಪೆಯಾಗಿ ಬಿದ್ದು ಹೋಗಿದೆ ಅದನ್ನು ಹೊಸದಾಗಿ ನಿರ್ಮಿಸಬೇಕಿದೆ. ಎಲ್.ನಾಗರಾಜ, ವಾರ್ಡಿನ ಮುಖಂಡರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ