ಮೆಟ್ರಿಕಿ ಗ್ರಾಮ ಪಂಚಾಯಿತಿ ಒಳಪಡುವ ಗ್ರಾಮಗಳ ಮತದಾರರು ಅತಿ ಹೆಚ್ಚಿನ ಸಂಖ್ಯೆ ಕಾಂಗ್ರೆಸ್ ಪಕ್ಷಕ್ಕೆ – ಒಲವು ಕೊಡಿಸಿದ ಶಾಸಕರು.
ಮೆಟ್ರಿಕಿ ನ.09

ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಮೆಟ್ರಿಕಿ ಗ್ರಾ.ಪಂ. ವೀಕ್ಷಕರಾದ ಸನ್ಮಾನ್ಯ ಶ್ರೀ ಎನ್.ವೈ ಗೋಪಾಲಕೃಷ್ಣರವರು ಸಂಡೂರು ಕ್ಷೇತ್ರದ ವಿಧಾನ ಸಭಾ ಉಪ ಚುನಾವಣೆ ಅಂಗವಾಗಿ ಇಂದು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಜೊತೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀಮತಿ ಅನ್ನಪೂರ್ಣ ಅವರ ಪರವಾಗಿ ಮೆಟ್ರಿಕಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮತ ಯಾಚಿಸಿದರು. ಮೆಟ್ರಿಕಿ ಗ್ರಾಮ ಪಂಚಾಯತಿ ಒಳಪಡುವ ಎಲ್ಲಾ ಗ್ರಾಮಗಳ ಮತದಾರರು ಕಾಂಗ್ರೆಸ್ ಪಕ್ಷದ ಪರವಾಗಿ 85% ಮತದಾರರು ಎನ್.ವೈ ಗೋಪಾಲಕೃಷ್ಣ ಶಾಸಕರ ಮನಸ್ಸನ್ನು ಆಲಿಸಿ ನೀವು ಧರ್ಮ ಮಾರ್ಗದಲ್ಲಿ ನಡೆಯುತ್ತಿರುವ ಶಾಸಕರು ನಿಮ್ಮ ಮಾತಿಗೆ ನಾವು ದಾರಿ ತಪ್ಪುವುದಿಲ್ಲ ಮತ್ತು ಚಿರ ಋಣಿಯಾಗಿರುತ್ತೇವೆ.

ಯಾವ ಪಕ್ಷದವರು ಬಂದು ನಮಗೆ ಹೇಳಿದರೆ. ಅಂತಹ ಮಾತನ್ನು ಕಿವಿಗೊಡದೆ ನಿಮ್ಮ ಕಾಂಗ್ರೆಸ್ ಅಭ್ಯರ್ಥಿಯಾದ ಅನ್ನಪೂರ್ಣಮ್ಮನವರಿಗೆ ಮತವನ್ನು ಕೊಡುತ್ತೇವೆ ಎಂದು ಆ ಗ್ರಾಮಗಳ ಮತದಾರರು ತಿಳಿಸಿದರು. ಸಂಡೂರು ಉಪ ಚುನಾವಣೆ ಅಭ್ಯರ್ಥಿಯಾದ ಅನ್ನಪೂರ್ಣಮ್ಮ ಇವರಿಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮ್ಮುಖದಲ್ಲಿ ಮತ್ತು ಸಂತೋಷ್ ಲಾಡ್ ಲೋಕಸಭಾ ಸದಸ್ಯರಾದ ಈ ತುಕಾರಾಂ ಇವರ ನೇತೃತ್ವದಲ್ಲಿ ಒಗ್ಗಟ್ಟಿನಿಂದ ಮತದಾರರು ಶಕ್ತಿ ತುಂಬಿದರು. ಸಚಿವರಾದ ಸಂತೋಷ್ ಲಾಡ್, ಸಂಸದರಾದ ತುಕಾರಾಂ, ಶಾಸಕರಾದ ಬಿ.ನಾಗೇಂದ್ರ, ಕೆ.ಸಿ ವೀರೇಂದ್ರ, ಪುಷ್ಪಲತಾ ಮಲ್ಲಿಕಾರ್ಜುನ್. ಮುಖಂಡರು ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು