ನ್ಯಾಯಾಲಯದ ಆದೇಶ ಉಲ್ಲಂಘನೆ – ವಿಶ್ವೇಶ್ವರಯ್ಯ ಜಲ ನಿಗಮ ಜಪ್ತಿ.
ತರೀಕೆರೆ ಅಕ್ಟೋಬರ್.3

ತರೀಕೆರೆ ತಾಲೂಕು ಬೆಟ್ಟ ತಾವರೆಕೆರೆ ಗ್ರಾಮದ ವಾಸಿಯಾದ ಸಿದ್ದಪ್ಪ ಬಿನ್ ಬಸಪ್ಪ ರವರಿಗೆ ಅಮೃತಪುರ ಹೋಬಳಿ ಬೆಟ್ಟ ತಾವರೆಕೆರೆ ಗ್ರಾಮದ ಸರ್ವೆ ನಂಬರ್ 21 ರಲ್ಲಿ 2 ಎಕರೆ 30ಗುಂಟೆ ಜಮೀನಿನಲ್ಲಿ ಅಡಿಕೆ ಬೆಳೆದಿದ್ದು ಭದ್ರಾ ಮೇಲ್ದಂಡೆ ಯೋಜನೆಗೆ ಸದರಿ ಅಡಿಕೆ ತೋಟದ ಜಾಗ ಸ್ವಾಧೀನ ಪಡಿಸಿಕೊಂಡು ಕಾಮಗಾರಿಯೂ ಮುಗಿದಿದ್ದು ಈಗ ನೀರು ಹರಿಯುತ್ತಿರುತ್ತದೆ. ಆದರೆ ಸ್ವಾಧೀನ ಪಡಿಸಿಕೊಂಡಿದ್ದ ಜಮೀನಿಗೆ ಭದ್ರಾ ಮೇಲ್ದಂಡೆ ಯೋಜನೆಯಿಂದ 2013 ರಲ್ಲಿ ಮೊದಲನೇ ಕಂತು 46 ಲಕ್ಷ ರೂಗಳು ಪರಿಹಾರ ನೀಡಿದ್ದು ಇದು ತಾರತಮ್ಯ ವಾಗಿರುತ್ತದೆ. ಈ ಕುರಿತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ ತರೀಕೆರೆ ಇಲ್ಲಿ ಕೇಸು ನಂ, ಎಲ್ ಎ ಸಿ. 31 /2014 ರಲ್ಲಿ ದಾವೆ ಹಾಕಿದ್ದು. ನ್ಯಾಯಾಲಯವು ನಂತರ 68 ಲಕ್ಷ ಪರಿಹಾರವನ್ನು ರೈತರಿಗೆ ವಿಶ್ವೇಶ್ವರಯ್ಯ ಜಲ ನಿಗಮದಿಂದ ನೀಡಲು ಆದೇಶ ಮಾಡಿದ್ದರು ಕಳೆದ ಹತ್ತು ತಿಂಗಳಿನಿಂದ ಪರಿಹಾರದ ಹಣ ಕೊಟ್ಟಿರುವುದಿಲ್ಲವೆಂದು E x 33/2023 ರ ನ್ಯಾಯಾಲಯದ ಆದೇಶದಂತೆ ವಿಶ್ವೇಶ್ವರಯ್ಯ ಜಲ ನಿಗಮದ ಭದ್ರಾ ಮೇಲ್ದಂಡೆ ಯೋಜನೆಯ ಕಚೇರಿಯನ್ನು ದಿನಾಂಕ 3.-10.-2023 ರಂದು ಜಪ್ತಿ ಮಾಡಿ ಕಚೇರಿಯಲ್ಲಿದ್ದ ಕಂಪ್ಯೂಟರ್ ಗಳು, ಟೇಬಲ್ಲುಗಳು, ಇತರೆ ಉಪಕರಣಗಳನ್ನು ವಸ್ತುಗಳನ್ನು ಅಮಾನತ್ತು ಮಾಡಿ ನ್ಯಾಯಾಲಯಕ್ಕೆ ತಂದಿರುವುದಾಗಿ ವಾರಸುದಾರರಾದ ಉಮಾಪತಿ ಪತ್ರಿಕೆಗೆ ತಿಳಿಸಿರುತ್ತಾರೆ.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ