ವಕ್ಫ್ ಬೋರ್ಡ್ ಎಂಬ ಕಾನೂನು ಸಂವಿಧಾನದ ಕ್ಕಿಂತ ದೊಡ್ಡದಾ – ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಅಲ್ಲವಾ….?
ಕಂಪ್ಲಿ ನ.10
ಭಾರತ ದೇಶಕ್ಕೆ ಸ್ವಾತಂತ್ರ ಬಂದು ಅದಕ್ಕೆ ಇಂಥದೇ ಕಾನೂನು ಕಟ್ಟಳೆ ಎಂಬ ಸಂವಿಧಾನವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು 1949 ರಂದು ಸರ್ಕಾರದ ಸರ್ವ ಸದಸ್ಯರ ಹೀಗೆ ಮೇರೆಗೆ ಕಾನೂನು ಸುವ್ಯವಸ್ಥೆ ಮತ್ತು ಆಡಳಿತ ನಡೆಸುತ್ತಿದ್ದು ಪ್ರತಿಯೊಬ್ಬ ಚುನಾಯಿತ ಗ್ರಾಮ ಪಂಚಾಯಿತಿ ಸದಸ್ಯರಿಂದ ಹಿಡಿದು ಪ್ರಧಾನಮಂತ್ರಿ ಯವರೆಗೂ ಭಾರತದ ಪ್ರಥಮ ಪ್ರಜೆ ಮತ್ತು ಆಯಾ ರಾಜ್ಯದ ಪ್ರಥಮ ಪ್ರಜೆಗಳಾದ ಘನತೆವೆತ್ತ ರಾಷ್ಟ್ರಪತಿಗಳು ಹಾಗೂ ಘನತೆವೆತ್ತ ರಾಜ್ಯಪಾಲರು ವಚನ ಬೋಧಿಸಿದ ಸಾರಾಂಶ ವೇನೆಂದರೆ ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ ಸರ್ವಧರ್ಮ ನಮ್ಮ ಭಾವದ ಪ್ರಜಾಸತ್ತಾತ್ಮಕ ರಾಜ್ಯವಾಗಿ ರಚಿಸಲು ಮತ್ತು ಸಮಸ್ತ ನಾಗರಿಕರಿಗೆ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ನ್ಯಾಯ ವಿಚಾರ ಅಭಿವ್ಯಕ್ತಿ ವಿಶ್ವಾಸ ಧರ್ಮ ಶ್ರದ್ಧೆ ಮತ್ತು ಉಪಾಸನಾ ಸ್ವಾತಂತ್ರ್ಯ ಸ್ಥಾನಮಾನ ಹಾಗೂ ಅವಕಾಶ ಸಮಾನತೆ ದೊರೆಯುವಂತೆ ಮಾಡಲು ಮತ್ತು ವ್ಯಕ್ತಿ ಗೌರವವನ್ನು ರಾಷ್ಟ್ರದ ಏಕತೆಯನ್ನು ಹಾಗೂ ಅಖಂಡತೆಯನ್ನು ಸುನಿಶ್ಚಿತ ಅದರಲ್ಲಿ ಬ್ರಾತೃ ಭಾವನೆಯನ್ನು ವೃದ್ಧಿ ಗೊಳಿಸಲು ಶ್ರದ್ಧಾ ಪೂರ್ವಕ ಸಂಕಲ್ಪ ಮಾಡಿದವರಿಗಾಗಿ ಜಾತಿ ಮತ ಭೇದ ಭಾರತ ದೇಶದ ಮತ್ತು ಆಯಾ ರಾಜ್ಯದ ಪ್ರಜೆಗಳ ಹಿತ ಕಾಪಾಡುತ್ತೇನೆ.
ಎಂದು ಪ್ರಮಾಣ ಮಾಡಿದ ಈ ನಾಯಕರು ತಮ್ಮ ತಮ್ಮ ಜಾತಿಯ ಪರವಾಗಿ ಕೆಲಸ ಮಾಡುತ್ತಿರುವುದು ವಿಪರ್ಯಾಸ ಅದರಲ್ಲೂ ಕರ್ನಾಟಕದಲ್ಲಿ ಹಿಂದೆಂದೂ ಕಾಣದ ಕೇಳದ ಹಾಗೆ ಸರ್ಕಾರವು ಜಾತಿ ಕೋಮುಗಲಭೆ ವೈಷ್ಯಮ್ಯ ಬಿತ್ತುತ್ತಿರುವುದರ ಜೊತೆಗೆ ವೂಕ್ಫ ಕಾಯ್ದೆ ಇದನ್ನೇನು ಸಂವಿಧಾನ ಮಾಡಿದೆಯೇ ಸದನದಲ್ಲಿ ತಾವುಗಳೇ ಗಲಾಟೆ ಗದ್ದಲದಲ್ಲಿ ಮಂಡನೆ ಮಾಡುವುದು ಮತ್ತು ಅದಕ್ಕೆ ಒಪ್ಪಿಗೆ ಸೂಚಿಸುವುದು ನಂತರ ಈ ಒಂದು ಕಾಯ್ದೆಯನ್ನು ಆ ರೀತಿ ಬಲಿಷ್ಠವಾಗಿದೆ, ಈ ರೀತಿ ಬಲಿಷ್ಠವಾಗಿದೆ ಎಂದು ದೃಶ್ಯ ಮಾಧ್ಯಮ ಮತ್ತು ಮುದ್ರಣ ಮಾಧ್ಯಮದಲ್ಲಿ ಬಿಂಬಿಸುವುದು ಈ ಕಾಯ್ದೆಯನ್ನು ಉಲ್ಲಂಘಿಸುವುದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳುವುದು ಸಾಮಾನ್ಯವಾಗಿದೆ.
ಸರ್ಕಾರ ಎಂದರೆ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಪ್ರಜೆಗಳಿಂದ ಎಂಬುದನ್ನು ಮರೆತಂತಿದೆ. ಇದು ಸತ್ಯವೋ ಅಸತ್ಯವೋ ಗೊತ್ತಿಲ್ಲ ಡಾಕ್ಟರ್, ಶಾಲಿನಿ ರಜನೀಶ್ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರು ದಿನಾಂಕ 16/4/2024 ರಂದು ಕಡತ ಸಂಖ್ಯೆ ಅ.ಸ.ಪ. ಸಂಖ್ಯೆ ಅ.ಮು.ಕಾ.ಅ 2004 ರಾಜೇಂದ್ರ ಕುಮಾರ್ ಕಟೇರಿಯ ಅವರಿಗೆ ಪತ್ರ ಬರೆಯುತ್ತಾರೆ ಸಾರಾಂಶ ವೇನೆಂದರೆ ದಿನಾಂಕ 15.04.2024 ರಂದು ನಡೆದ ರಾಜ್ಯ ಮಟ್ಟದ ವಕ್ಫ್ ಆಸ್ತಿಗಳ ಕಾರ್ಯಪಡೆಯ ಪ್ರಕಾರಗಳಲ್ಲಿ ಸಾಧಿಸಿದ ಪ್ರಗತಿ ಪರಿಶೀಲನ ಸಭೆಯಲ್ಲಿ ತಮ್ಮ ಇಲಾಖೆ ಅಡಿ ವಕ್ಫ್ ಆಸ್ತಿಗಳನ್ನು ನೋಂದಾಯಿಸುವುದಕ್ಕೆ ಸಂಬಂಧಿಸಿದಂತೆ ನಾಲ್ಕು ಅಂಶಗಳ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿದೆ ಎಂದು ಆದೇಶ ಮಾಡುತ್ತಾರೆ ಅದರಂತೆ ರಾಜ್ಯದ ಎಲ್ಲಾ ಅಧಿಕಾರಿಗಳು ತಮ್ಮ ಕೆಳಹಂತದ ಅಧಿಕಾರಿಗಳಿಗೆ ಸೂಚಿಸಿ ತಮಗೆ ತಿಳಿದ ಹಾಗೆ ವಕ್ಫ್ ಎಂಬ ಅನಬಿಶಕ್ತ ಭೂತದ ಭಯ ತೋರಿಸಿ ಪಹಣಿಗಳನ್ನು ಬದಲಾವಣೆ ಮಾಡಿ ಈಗ ನೋಟಿಸ್ ಸಹ ಕೊಡುತ್ತಿದ್ದಾರೆ.
ಆದ್ದರಿಂದ ತಾವುಗಳು ತಮ್ಮ ಆಧೀನದಲ್ಲಿರುವ ಕಾನೂನು ಪಂಡಿತರೊಂದಿಗೆ ಚರ್ಚಿಸಿ ಈ ಹಿಂದೆ ಸರ್ಕಾರದ ವಿರೋಧ ವಿದ್ದರೂ ಸಹ ತಾವುಗಳು ಸ್ನೇಹ ಮಹಿ ಕೃಷ್ಣ ಎಂಬ ಸಾಮಾಜಿಕ ಕಾರ್ಯಕರ್ತನ ದೂರಿಗೆ ಸ್ಪಂದಿಸಿ ಮುಖ್ಯಮಂತ್ರಿಗಳ ವಿರುದ್ಧವೇ ತನಿಖೆಗೆ ಆದೇಶ ಮಾಡಿದ ಹಾಗೆ ಈ ಸಮಾಜದ ಕೋಮು ಗಲಭೆ ಶಾಂತಿ ಸುವ್ಯವಸ್ಥೆ ಹದಗೆಡಿಸುವ ಇದುವರೆಗೂ ಕರ್ನಾಟಕದಲ್ಲಿ ಹಿಂದೂ ಮುಸ್ಲಿಂ ಅಣ್ಣತಮ್ಮ ಎಂಬ ಭಾವನಿಗೆ ದಕ್ಕೆ ತರುವ ಈ ವಕ್ಫ್ ಕಾಯ್ದೆಯನ್ನು ರದ್ದುಗೊಳಿಸಿ ಮಠಮಾನ್ಯಗಳ ಮತ್ತು ಸ್ಮಶಾನಗಳ ಹಾಗೂ ರೈತರ ಪಹಣಿಗಳಲ್ಲಿ ಇತ್ತೀಚಿಗೆ ಸೇರಿಸಿದ ವಕ್ಫ ಎಂಬ ಪದವನ್ನು ತೆಗಿಸಲು ಆದೇಶಿಸ ಬೇಕೆಂದು ಮತ್ತು ಇಂತಹ ಕೋಮುಗ ಲಭೆಗೆ ಸೃಷ್ಟಿ ಮಾಡುತ್ತಿರುವ ಅಧಿಕಾರಿ ಶಾಸಕರು ಸಚಿವರು ಯಾರಾಗಲಿ ಅವರಿಗೆ ಕಾನೂನು ಕ್ರಮ ಜರಗಿಸಲು ಆದೇಶಿಸ ಬೇಕೆಂದು ಸಮಗ್ರ ಕರ್ನಾಟಕದ ಪ್ರಜೆಗಳ ಪರವಾಗಿ ಮನವಿಯನ್ನು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕ (ರಿ) ಮತ್ತು.ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯ ಸೇವಾ ಟ್ರಸ್ಟ್ (ರಿ) ಕರ್ನಾಟಕ-ಬಳ್ಳಾರಿ. ಹಾಗೂ ಕಿಸಾನ್ ಜಾಗೃತಿ ವಿಕಾಸ ಸಂಘ(ರಿ). ವಿಜಯ ಕರುನಾಡ ರಕ್ಷಣಾ ವೇದಿಕ(ರಿ). ಕರ್ನಾಟಕ ಪ್ರೆಸ್ ಕೌನ್ಸಿಲ್ (ರಿ) ಸಂಯುಕ್ತ ಆಶ್ರಯದಲ್ಲಿ ಮನವಿ ಸಲ್ಲಿಸುತ್ತಿದ್ದಾರೆ ಇದಕ್ಕೆ ಕಂಪ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪೊಲೀಸ್ ಠಾಣೆ ಕಂಪ್ಲಿ ಇವರು ಸಹ ಸೂಕ್ತ ಪೊಲೀಸ್ ಬಂದೋಬಸ್ತು ನೀಡುತ್ತೇವೆಂದು ಭರವಸೆ ನೀಡಿರುತ್ತಾರೆ . ಈ ಮನವಿ ಪತ್ರಕ್ಕೆ ಮುಖ್ಯ ಕಾರಣ ವೇನೆಂದರೆ ಮೊದಲನೆಯದಾಗಿ 1)ಅಪರ ಮುಖ್ಯ ಕಾರ್ಯದರ್ಶಿಗಳು ಬರೆದ ಪತ್ರ 2) ಕಲಬುರಗಿ ಜಿಲ್ಲೆ ಅಳಂದ ತಾಲೂಕಿನ ವಕ್ಫ ಎಂದು ಪಹಣಿ ಬದಲಾವಣೆಯಾದ ಪ್ರತಿ 3) ವಿಜಯಪುರ ಜಿಲ್ಲೆ, ಸಿಂದಗಿ ತಾಲೂಕಿನ ವಕ್ಫ್ ಎಂದು ಸೇರಿಸಿದ ಪ್ರತಿ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನಪತ್ರಿಕೆ ಹಾಗೂ ಎಸ್ ಕೆ ಚಾನೆಲ್ ನ್ಯೂಸ್ ಕನ್ನಡ ಚಾನೆಲ್:ಟಿ. ಹೆಚ್.ಎಂ. ರಾಜಕುಮಾರ್ ಕಂಪ್ಲಿ ಬಳ್ಳಾರಿ