ಮುಖ್ಯ ಶಿಕ್ಷಕರಾದ ಶ್ರೀ ರೇವಣ ಸಿದ್ದಪ್ಪರವರಿಗೆ – ಆತ್ಮೀಯ ಬೀಳ್ಕೊಡುಗೆ ಸಮಾರಂಭ.
ದಾವಣಗೇರಿ ಜ.02

ದಾವಣಗೆರೆ ಜಿಲ್ಲೆಯ ದಾವಣಗೆರೆ ತಾಲ್ಲೂಕಿನ ಕಸಬಾ ಹೋಬಳಿಯ ಕಡ್ಲೆಬಾಳು ಕ್ಲಸ್ಟರ್ ವ್ಯಾಪ್ತಿಯ ಹಿರಿಯೂರು ಕ್ಯಾಂಪ್ ಅಮೃತ ನಗರದ ಬಿ.ಸಿ.ಯು ನಾಗಮ್ಮ ಮೂಕಪ್ಪ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬಿ.ಸಿ.ಯು ಗಂಗಮ್ಮ ಹನುಮಪ್ಪ ಪ್ರೌಢ ಶಾಲೆಯಲ್ಲಿ 37 ವರ್ಷ ಏಳು ತಿಂಗಳ ಕಾಲ ಸಹ ಶಿಕ್ಷಕರಾಗಿ ಹಾಗೂ ಮುಖ್ಯ ಶಿಕ್ಷಕರಾಗಿ ಶ್ರೀ ಬಿ.ರೇವಣಸಿದ್ದಪ್ಪ ನವರು ಸುದೀರ್ಘ ಸೇವೆಯನ್ನು ಸಲ್ಲಿಸಿರುತ್ತಾರೆ. 1984 ಜೂನ್ 4 ರಲ್ಲಿ ಈ ಶಾಲೆ ಪ್ರಾರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೂ ವಿದ್ಯಾರ್ಥಿಗಳು ತಮ್ಮ ಸಾಧನೆಗಳ ಮೂಲಕ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಇಲಾಖೆಯ ಜೊತೆಗೆ ಉತ್ತಮ ಬಾಂಧವ್ಯ ಸಂಬಧವನ್ನು ಎಲ್ಲ ಶಾಲಾ ಸಿಬ್ಬಂದಿ ಸಹ ಶಿಕ್ಷಕರು ಹೊಂದಬೇಕು ಎಲ್ಲರೂ ಶಾಲೆಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಕಡೆ ಗಮನ ಹರಿಸಬೇಕು.

ಜನನಿ ಜನ್ಮಭೂಮಿ ಇಂತಹ ಈ ಶಾಲೆಯ ಮಣ್ಣಿನ ಋಣವನ್ನು ನಾನು ನನ್ನ ಕೊನೆಯ ಉಸಿರು ಇರುವವರೆಗೂ ಮರೆಯಲು ಸಾಧ್ಯವಿಲ್ಲ ಎಂದು ಭಾವುಕರಾದರು. ಈ ಶಾಲೆಯ ಮಕ್ಕಳು ನಿಮ್ಮ ತಂದೆ ತಾಯಿಗಳಿಗೆ ಹುಲ್ಲನ್ನು ತರದೇ ಹೂಮಾಲೆಯನ್ನು ತನ್ನಿ ಹಾಗೂ ನಿಮ್ಮ ಪೋಷಕರಿಗೆ ಒಳ್ಳೆಯ ಹೆಸರನ್ನು ತನ್ನಿ ಎಂದು ಶುಭ ಹಾರೈಸಿದರು. ಹಿರಿಯ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಅಂಜನೆಯ ನಾಯ್ಕರವರು ಮಾತನಾಡಿ ಈ ಶಾಲೆಗೆ ಆರಂಭ ದಿಂದ ಎಲ್ಲರ ಸಹಕಾರ ದೊಂದಿಗೆ ಶಾಲೆಯ ಸರ್ವೊತೋಮುಖ ಅಭಿವೃದ್ದಿಗೆ ಶ್ರಮಿಸಿದ್ದೇನೆ ಅದರ ಪ್ರತಿಫಲ ಇಂದು ದಾವಣಗೆರೆ ಜಿಲ್ಲೆಯಲ್ಲಿ ತನ್ನದೇ ಆದ ವಿಶಿಷ್ಟ ರೀತಿಯ ಹೆಸರು ಮಾಡಿ ತನ್ನ ಛಾಪನ್ನು ಮೂಡಿಸಿದೆ. ಅಲ್ಲದೆ ಹಳೆಯ ವಿದ್ಯಾರ್ಥಿಗಳು ನಮ್ಮ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆದು ಶಾಲೆಗೆ ಒಳ್ಳೆಯ ಕೀರ್ತಿ ತಂದಿದ್ದಾರೆ. ಅಲ್ಲದೆ ಬೆಳೆದ ಅನೇಕ ಯುವಕರು ಹಳೆಯ ವಿದ್ಯಾರ್ಥಿಗಳು ಸರ್ಕಾರಿ ಹುದ್ದೆಗಳನ್ನು ಪಡೆದು ಕೃಷಿ, ತಾಂತ್ರಿಕ, ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ದೇಶ ವಿದೇಶಗಳಲ್ಲಿ ವೃತ್ತಿಗಳನ್ನು ಮಾಡುತ್ತಿದ್ದಾರೆ ಅದೇ ನಮ್ಮ ಜೀವನದ ಸಾರ್ಥಕ ಬದುಕು ಎಂದರೆ ತಪ್ಪಾಗಲಾರದು ಎಂದು ಹರ್ಷ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯು.ಎಸ್ ಬಸಣ್ಣ ವಹಿಸಿ ಮಾತನಾಡಿ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಇಂತಹ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹಾಗೂ ಈ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ ಮುಖ್ಯ ಶಿಕ್ಷಕರಿಗೆ ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರಿಗೆ, ಗ್ರಾಮ ಪಂಚಾಯಿತಿ ಸದಸ್ಯರಿಗೆ, ಸಹ ಶಿಕ್ಷಕರಿಗೆ ಎಂದಿಗೂ ನಮ್ಮ ಗ್ರಾಮದ ಜನತೆ ಚಿರ ಋಣಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಈ ದಿನದ ಭೋಜನ ವ್ಯವಸ್ಥೆಯನ್ನು ಶ್ರೀಮತಿ ಲಕ್ಷ್ಮಮ್ಮ ಶ್ರೀ ಕೊಲ್ಲಪ್ಪ ಮತ್ತು ಮಕ್ಕಳು, ಮನೋಹರ್.ಕೆ ಲೆಕ್ಕ ಪರಿಶೋಧಕರು, ನೀರಾವರಿ ಇಲಾಖೆ ಇವರು ವಹಿಸಿ ಕೊಂಡಿದ್ದರು 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡಿದ್ದರು, ಈ ಕಾರ್ಯಕ್ರಮದಲ್ಲಿ ಹಿರಿಯ ನಿವೃತ್ತ ಶಿಕ್ಷಕರಾದ ಆಂಜನೇಯ ನಾಯ್ಕ, ಜಿ.ಎಸ್ ಪ್ರಭುಲಿಂಗಪ್ಪ, ಜಿ.ಸಿ ಬಸವರಾಜ್, ಶಿಕ್ಷಕರಾದ ಬಾವಿ ಕಟ್ಟೆ ಕೊಟ್ರಪ್ಪ, ಜಿ.ಏಚ್ ತಿಪ್ಪೇಸ್ವಾಮಿ, ಎನ್.ಕೆ ವಿಜಯ್ ಕುಮಾರ್, ಹನುಮಂತ ನಾಯ್ಕ, ಯು.ಎಸ್ ಬಸವರಾಜ್, ಗ್ರಾಮ ಪಂಚಾಯಿತಿ ಹಾಲಿ ಸದಸ್ಯರಾದ ಶ್ರೀ ನಾಗರಾಜ್, ಮಣಿ, ಹಳೆಯ ವಿದ್ಯಾರ್ಥಿಗಳಾದ ಹನುಮಂತಪ್ಪ, ಕಾಂತರಾಜು, ಸೈನ್ಸ್ ಗುರು ಕೋಚಿಂಗ್ ಸೆಂಟರ್ ನ ಮಂಜುನಾಥ್, ಮೋಗನಹಳ್ಳಿ ರಮೇಶ್, ಬಸವರಾಜ್, ಪಳನಿ ಸ್ವಾಮಿ, ದೇವರಾಜ್, ನಾಗರಾಜ್,ಕೆ. ರಮೇಶ್, ಟಿ. ದಯಾನಂದ್, ದಾವಣಗೆರೆ ಜಿಲ್ಲಾ ಪತ್ರಿಕಾ ವಿತರಕರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಟಿ.ಕುಮಾರ ಸ್ವಾಮಿ, ಚಿತ್ರದುರ್ಗ ಜಿಲ್ಲೆಯ ದ.ಸಾ.ಪ ಜಿಲ್ಲಾಧ್ಯಕ್ಷ ಕೋಡಿಹಳ್ಳಿ ಟಿ. ಶಿವಮೂರ್ತಿ, ಕಛೇರಿ ಸಿಬ್ಬಂದಿಗಳಾದ ಪ್ರಕಾಶ್,ಯು.ಏಚ್ ಷಡಾಕ್ಷರಿ, ಎ.ಕೆ ಬಸಮ್ಮ ಆಂಜಿನಪ್ಪ ಬಿಸಿಯೂಟ ತಯಾರಕ ಸಿಬ್ಬಂದಿಗಳಾದ ಶ್ರೀಮತಿ ಕಾವ್ಯ, ಗಂಗಮ್ಮ, ರೇಣುಕಮ್ಮ,ಲಕ್ಷ್ಮಿ, ಇತರೆ ಸಿಬ್ಬಂದಿ ವರ್ಗದವರು, ಗ್ರಾಮಸ್ಥರು ಉಪಸ್ಥಿತರಿದ್ದರು. ಚಿನ್ನಸಮುದ್ರ ಜನಪದ ಗಾಯಕ ಉಮೇಶ್ ನಾಯ್ಕ ಪ್ರಾರ್ಥಿಸಿದರು, ಜಿ.ಎಸ್ ಪ್ರಭುಲಿಂಗಪ್ಪ ಸ್ವಾಗತಿಸಿದರು, ಜಿ.ಸಿ ಬಸವರಾಜ್ ನಿರೂಪಿಸಿದರು,ಹಳೆಯ ವಿದ್ಯಾರ್ಥಿ ಹನುಮಂತಪ್ಪ ವಂದಿಸಿದರು,ಅಮೃತ ನಗರದ ಹಿರಿಯ ಮುಖಂಡರು, ಗ್ರಾಮಸ್ಥರು, ಯುವಕರು, ಮಹಿಳೆಯರು ಅಮೃತ ಯುವಕ ಗೆಳೆಯರ ಬಳಗದ ಎಲ್ಲ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಎಲ್ಲ ಹಳೆಯ ವಿದ್ಯಾರ್ಥಿ ವಿದ್ಯಾರ್ಥಿನಿಯ ವೃಂದದವರು ಹಾಜರಿದ್ದರು,ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ವರದಿ : ಕೋಡಿಹಳ್ಳಿ.ಟಿ. ಶಿವಮೂರ್ತಿ.ಚಿತ್ರದುರ್ಗ