ವೀರರಾಣಿ ಒನಕೆ ಓಬವ್ವ ಅವರ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಿ – ದೊಡ್ಡಮನಿ.
ರೋಣ ನ.12
ಸ್ವಾತಂತ್ರ್ಯ ಹೋರಾಟದ ಅನೇಕ ಮಹಿಳೆಯರಲ್ಲಿ ವೀರರಾಣಿ ಎಂದು ಹೆಸರು ಪಡೆದಿರುವ ಒನಕೆಯ ಒಬ್ಬವ ಒಬ್ಬರಾಗಿದ್ದಾರೆ. ಒನಕೆ ಒಬ್ಬವ ಅವರ ಧೈರ್ಯ ಮತ್ತು ಸಾಹಸವನ್ನು ಸಮಾಜ ಮೆಚ್ಚುವಂತ ಅಪಾರವಾದ ಕೊಡುಗೆಯನ್ನು ವೀರರಾಣಿ ಒನಕೆ ಒಬ್ಬವ ಅವರು ಕೊಟ್ಟು ಹೋಗಿದ್ದಾರೆ. ಇಂದಿನ ಮಹಿಳೆಯರು ಸಮಾಜದಲ್ಲಿ ವೀರರಾಣಿ ಒನಕೆ ಒಬ್ಬವ್ವ ಅವರ ಆದರ್ಶ ಗುಣಗಳನ್ನು ಅಳವಡಿಸಿ ಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡುವುದರಲ್ಲಿ ಸಮಾಜದ ಮುಖ್ಯವಾಹಿನಿಗೆ ಬರುವಲ್ಲಿ ಮಹಿಳೆಯ ಪಾತ್ರ ಮುಖ್ಯವಾಗಿದೆ ಎಂದು ಚಲವಾದಿ ಸಮುದಾಯದ ರೋಣ ಗಜೇಂದ್ರಗಡ ತಾಲೂಕ ಅಧ್ಯಕ್ಷ ಸಂಜೆಯ ದೊಡ್ಡಮನಿ ಅವರು ರೋಣ ನಗರದ ತಹಶೀಲ್ದಾರ ಕಚೇರಿಯಲ್ಲಿ ವೀರರಾಣಿ ಒನಕೆ ಒಬ್ಬವ್ವ ಅವರ ಆದರ್ಶ ಗುಣಗಳನ್ನು ಅಳವಡಿಸಿ ಕೊಳ್ಳಲು ಮಾತನಾಡಿದರು.
ಪ್ರಾಸ್ತಾವಿಕವಾಗಿ ಈ ಸಂದರ್ಭದಲ್ಲಿ ಉಪ ತಹಸೀಲ್ದಾರ ಗಣೇಶ ಕೊಪ್ಪದ. ಶಿರಸ್ತೇದಾರ ನಿಲೂಗಲ್ಸ್ ಪಿ.ಡಿ ಪಾಟೀಲ. ಶೋಭ ಬೀಳಗಿ, ನೀಲಮ್ಮ. ಹಿರಿಯಪ್ಪ ಮಾದರ. ಬಸವರಾಜ ಚಲವಾದಿ. ಆನಂದ ಅರಹುನಸಿ. ಬಸವರಾಜ ಪೂಜಾರ. ಭರಮಪ್ಪ ಕೊಳಪ್ಪನ್ನವರ. ಯಚ್ಚರಪ್ಪ ಚಲವಾದಿ, ಸುದೀಪ ತಲಗಾರ, ಗಣೇಶ ಚಲವಾದಿ. ಮಂಜುನಾಥ ಹೆಬ್ಬಸೂರ. ನಿಂಗಬಸಪ್ಪ ಕಡಿಯವರ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಸ್.ವಿ.ಸಂಕನಗೌಡ್ರ ರೋಣ