ಶರೀಯತ್ ಮತ್ತು ವಕ್ಫ್ ಗಳ ಸಂರಕ್ಷಣೆ ಕುರಿತು ಜಾಗೃತಿ ನ,13 ರಂದು ಸಂಜೆ 7:15 ಕ್ಕೆ ಕಾರ್ಯಕ್ರಮ ನಡೆಯಲಿದೆ.
ಮಾನ್ವಿ ನ.12
ಶರೀಯತ್ ಮತ್ತು ವಕ್ಫ್ ಸಂರಕ್ಷಣೆಯ ಕುರಿತು ಪ್ರತಿಯೊಬ್ಬ ನಾಗರೀಕರಿಗೆ ತಿಳಿಯುವ ಸಲುವಾಗಿ ನವೆಂಬರ್ 13 ರಂದು ಸಂಜೆ 6 ಗಂಟೆಗೆ ಖಾದ್ರಿ ಫಂಕ್ಷನ್ ಹಾಲ್ ನಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮುಸ್ಲಿಂ ಧರ್ಮದ ಗುರು ಸೈಯದ್ ಹಸನ್ ಜೀಶಾನ್ ಖಾದ್ರಿ ತಿಳಿಸಿದರು. ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಖಾದ್ರಿ ಫಂಕ್ಷನ್ ಹಾಲ್ ನಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಶರಿಯತ್ ಸಂರಕ್ಷಣೆಯ ಜೊತೆಗೆ ಧಾರ್ಮಿಕ ಆಸ್ತಿಗಳ ಉಪಯೋಗ ಮತ್ತು ಕಾನೂನಾತ್ಮಕ ವಿಷಯಗಳನ್ನು ಬುದ್ಧಿ ಜೀವಿಗಳು ಆಗಮಿಸಲಿದ್ದಾರೆ ಎಂದರು.
ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾನೂನಿನ ವಿಷಯ ತಿಳಿದುಕೊಂಡು ಅದರಂತೆ ನಡೆಯಬೇಕು. ಹಾಗೆಯೇ ಏನಾದರು ಗೊಂದಲ ಮತ್ತು ಪ್ರಶ್ನೆಗಳಿದ್ದರೆ ಕೇಳುವುದಕ್ಕೆ ಅವಕಾಶ ಇದೆ ಎಂದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ