ಬೋರ್ಡ್ ವಕ್ರ ದೃಷ್ಟಿಯ ಹಗರಣ, ರೈತ ಮನನೊಂದು ಆತ್ಮಹತ್ಯೆ, ತಾಲೂಕ ದಂಡಾಧಿಕಾರಿ ನಾಗರಾಜ್.ಕೆ ಅವರಿಗೆ – ರೈತರಿಂದ ಮನವಿ.
ರೋಣ ನ.13
ರಾಜ್ಯದಲ್ಲಿ ವಕ್ಸ್ ಬೋರ್ಡ್ ವಕ್ರ ದೃಷ್ಟಿಯ ಹಗರಣ ದಿಂದ ಹಾವೇರಿ ಜಿಲ್ಲೆಯಲ್ಲಿ ರೈತ ಈ ಹಗರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿ ಕೊಂಡಿರುವುದು ವಿಷಾದನೀಯ ಭಾರತೀಯ ಕಿಸಾನ್ ಸಂಘ ರೋಣ ತಾಲೂಕು ಘಟಕದ ಅಧ್ಯಕ್ಷರಾದ ಬಿ.ಜಿ ಪಾಟೀಲ್ ಅವರ ನೇತೃತ್ವದಲ್ಲಿ ತಾಲೂಕ ದಂಡಾಧಿಕಾರಿ ನಾಗರಾಜ್ ಕೆ ಅವರಿಗೆ ಮನವಿ ಸಲ್ಲಿಸಲಾಯಿತು. ಇಡೀ ಜಗತ್ತಿಗೆ ಅನ್ನ ನೀಡುವ ರೈತ ಇಂದು ಕರ್ನಾಟಕ ರಾಜ್ಯದಲ್ಲಿ ವಕ್ಸ್ ಬೋರ್ಡ್ ವಕ್ರದೃಷ್ಟಿಗೆ ಕಂಗಲಾಗಿ ನಲುಗಿ ಹೋಗಿದ್ದಾನೆ. ಅದಕ್ಕೆ ಕಾರಣ ವಕ್ಸ್ ಬೋರ್ಡ್ ಮಾಡುತ್ತಿರುವ ಲ್ಯಾಂಡ್ ಜಿಹಾದ್ ರೈತರು ಸಾಲ ಮಾಡಿ ಬೆಳೆ ಬೆಳೆದು ಬೆಳೆ ಕೈ ಕೊಟ್ಟಾಗ ಸಾಲದ ಬಾಧೆ ಅದರ ಬೆನ್ನಲ್ಲೇ ವಕ್ಸ್ ಹಗರಣ ರೈತನ ಖಾತೆಯಲ್ಲಿ ಮುಸಲ್ಮಾನ ಸಮಾಜದ ವಕ್ಸ್ ಹೆಸರು ಕುಳಿತಿರುವುದು. ನಿನ್ನೆ ನಡೆದ ಹಾವೇರಿ- ಜಿಲ್ಲೆಯಲ್ಲಿ ರೈತನ ಆತ್ಮಹತ್ಯೆ ರೈತ ಸಮುದಾಯ ತಲೆ ತಗ್ಗಿಸುವಂತಹ ವಿಷಾದನೀಯ ಸಂಗತಿ- ಈ ಲ್ಯಾಂಡ್ ಮಾಫಿಯಾಕ್ಕೆ ಬರೀ ರೈತನ ಜಮೀನು ಅಲ್ಲದೆ ಮಠ ಮಾನ್ಯಗಳ ಆಸ್ತಿ ಕಬಳಿಕೆ ಸರಕಾರದ ಸ್ವಾಮ್ಯಕ್ಕೆ ಸೇರಿದ ಆಸ್ತಿಯು ಕೂಡ ಇಂದು ಲ್ಯಾಂಡ್ ಜಿಹಾದಿಗೆ ಬಲಿಯಾಗಿದ್ದು ದೊಡ್ಡ ದುರಂತಕ್ಕೆ ಸಾಕ್ಷಿಯಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ಜಮೀನು ನರೇಗಲ್ಲಿನ ಅನ್ನದಾನೇಶ್ವರ ಮಠ ಗ್ರಾಮ ಸೇರಿದಂತೆ ರೈತರ ಹಾಗೂ ಮಠ ಮಾನ್ಯಗಳ ಆಸ್ತಿ ವಕ್ಸ್ ಬೋರ್ಡ್ ಹೆಸರು ದಾಖಲಿಸಿರುವುದು ದೊಡ್ಡ ದುರಂತವಾಗಿದೆ. ವಕ್ಸ್ ಬೋರ್ಡ್ ಲ್ಯಾಂಡ್ ಜಿಹಾದ್ ಮಾಡಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲಾ ದುರಂತ- ಕೈ ಸರ್ಕಾರವೇ ಕಾರಣವಾಗಿದ್ದು, ರೈತರ ಆಸ್ತಿ ಪಾಸ್ತಿಗಳು ವಕ್ಸ್ ಹಗರಣಕ್ಕೆ ಬಲಿಯಾಗಿದ್ದು, ಜಿಲ್ಲಾಧಿಕಾರಿಗಳು ಶಾಮೀಲಾಗಿದ್ದು ಕಂಡುಬರುತ್ತದೆ.ಶೀಘ್ರದಲ್ಲಿ ವಕ್ಫ್ ಬೋರ್ಡ್ ಕಾನೂನು ಕಿತ್ತು ಹಾಕಿ ರೈತರ ಜಮೀನು ಮರಳಿ ಅವರ ಹೆಸರನ್ನು ನೊಂದಾಯಿಸಿ ಕೊಡಬೇಕು ಇಲ್ಲದಿದ್ದರೆ ಭಾರತೀಯ ಕಿಸಾನ್ ಸಂಘ ತಾಲೂಕು ಮತ್ತು ಜಿಲ್ಲೆಯಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಬಿ.ಜಿ. ಪಾಟೀಲ ಸರಕಾರಕ್ಕೆ ಆಗ್ರಹಿಸಿದ್ದಾರೆ. ಭಾರತೀಯ ಕಿಸಾನ್ ಸಂಘದ ಅಧ್ಯಕ್ಷಈ ಸಂದರ್ಭದಲ್ಲಿ ಭಾರತೀಯ ಪದಾಧಿಕಾರಿಗಳು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಭಾರತೀಯ್ ಸರ್ವ ಸಂಘದ ಅಧಿಕಾರಿಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ