ಯುವಕರು ದುಶ್ಚಟಗಳಿಗೆ ಬಲಿಯಾಗದಿರಿ ಮಹಿಬೂಬ್ ಮದ್ಲಾಪುರ.
ಮಾನ್ವಿ ನ.13
ಇತ್ತೀಚಿನ ದಿನ ಮಾನದಲ್ಲಿ ಯುವಕರು ದೂಮಪಾನ, ಮದ್ಯಪಾನ, ತಂಬಾಕು ಮತ್ತು ಮೊಬೈಲ್ ಅಡಿಕ್ಷನ್ ಗೆ ಬಲಿಯಾಗಿ ಅಮೂಲ್ಯವಾದ ಜೀವನ ಹಾಳು ಮಾಡಿ ಕೊಳ್ಳುತ್ತಿದ್ದಾರೆ ವಿದ್ಯಾರ್ಥಿಗಳಿಗೆ ಗುರಿ ಮತ್ತು ಉತ್ತಮ ವ್ಯಕ್ತಿತ್ವ ದೊಂದಿಗೆ ಸಾಧನೆ ಮಾಡಿ ದೇಶದ ಕೀರ್ತಿಯನ್ನು ಹೆಚ್ಚುವ ಕೆಲಸ ಮಾಡಬೇಕು. ಮೊಬೈಲ್ ಅಡಿಕ್ಷನ್ ಒಂದು ಮಾನಸಿಕ ರೋಗ ಎಂದು ನಿಮ್ಹಾನ್ಸ್ ವೈದ್ಯರು ಸರ್ವೇ ಅಭಿಪ್ರಾಯ ತಿಳಿಸಿದೆ. ಚಟದಿಂದ ಚಟ್ಟಕ್ಕೆ, ಆರ್ಥಿಕವಾಗಿ ದಿವಾಳಿ ಯಾಗುವುದರ ಜೊತೆಗೆ ಮಾನಸಿಕ ಅಸ್ವಸ್ಥ ರಾಗುತ್ತಾರೆ, ನಶದ ಹಿಡಿತಕ್ಕೆ ಹೊಗುತ್ತಾರೆ. ಇದು ಹದಿ ಹರೆಯದ ವಯಸ್ಸು ಹುಚ್ಚು ಕೋಡಿ ಮನಸ್ಸು ಈ ವಿದ್ಯಾಭ್ಯಾಸದ ಸಮಯ ಸೂಕ್ಷ್ಮ ಅತೀಸೂಕ್ಷ್ಮ ಇಲ್ಲಿ ತಮ್ಮ ಮನಸ್ಸು ಹತೋಟಿಯಲ್ಲಿ ಇದ್ದರೆ ಈ ಜಗತ್ತು ಗೆದ್ದಂತೆ ಇಲ್ಲಿ ದುಶ್ಚಟಗಳಿ ಬಲಿಯಾದರೆ ಜೀವ ಕಳೆದು ಕೊಂಡಂತೆ ಸಾಧನೆಯ ಹಾದಿಯಲ್ಲಿ ಸಾಗಿ ಅರ್ಥ ಪೂರ್ಣ ಜೀವನ ಸಾಗಿಸಿ ಪೋಷಕರಿಗೆ ಉತ್ತಮ ಮಕ್ಕಳಾಗಿ ದೇಶಕ್ಕೆ ಸತ್ಪ್ರಜೆಯಾಗಿ ಎಂದು ಸಂಪನ್ಮೂಲ ವ್ಯಕ್ತಿ ಮಹಿಬೂಬ್ ಮದ್ಲಾಪುರ ವಿಶೇಷ ಉಪನ್ಯಾಸದಲ್ಲಿ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಪಟ್ಟಣದ ಶಾರದ ವಿದ್ಯಾನಿಕೆತನ ಕಾಲೇಜಿನಲ್ಲಿ ಜರುಗಿತು.ಕಾರ್ಯಕ್ರಮದಲ್ಲಿ ಮುಖ್ಯಾತಿಥಿ ಯೋಜನಾಧಿಕಾರಿ ಸುನಿತಾ ಪ್ರಭ, ಕಾರ್ಯಕ್ರಮದ ಅಧ್ಯಕ್ಷತೆ ಪ್ರಾಚಾರ್ಯರಾದ ವೀರಭದ್ರಯ್ಯ ಹಿರೇಮಠ, ವಲಯ ಮೇಲ್ವಚಾರಕಿ ಚೇತನ ಮತ್ತು ವಿದ್ಯಾರ್ಥಿ ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ