ಒತ್ತುವರಿ ಯಾದ ಸರ್ಕಾರಿ ಭೂಮಿ ಕಾಪಾಡುವಲ್ಲಿ ಅಧಿಕಾರಿಗಳು – ವಿಫಲ ಕೆ.ಆರ್.ಎಸ್ ಪಕ್ಷ ಆರೋಪ.

ಬಸಪಟ್ಟಣ ಸ.21

ಗಂಗಾವತಿ ತಾಲೂಕಿನ ಬಸಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ವೆ ನಂಬರ್ 54/*/3 ವಿಸ್ತೀರ್ಣ 1 ಎಕರೆ 36 ಗುಂಟೆ ಭೂಮಿ ಬಸಪಟ್ಟಣ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಗಾಗಿ ಮೀಸಲಿಟ್ಟ ಸರ್ಕಾರಿ ಗಾಯರಾಣ ಭೂಮಿಯನ್ನು ಗ್ರಾಮದ ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿ ಕೊಂಡು ಈ ಸರ್ವೇ ಭೂಮಿಯಲ್ಲಿ ಸದ್ಯ ಭತ್ತವನ್ನು ನಾಟಿ ಮಾಡಿ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆಗಳ ಅಧಿಕಾರಿಗಳ ಯಾವುದೇ ಭಯ ಆತಂಕ ಇಲ್ಲದೇ ಸರ್ಕಾರದ ನೀತಿ-ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಇದನ್ನು ವಿರೋಧಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಹಲವಾರು ಬಾರಿ ಮನವಿ ಸಲ್ಲಿಸಿ ಒತ್ತುವರಿ ಯಾದ ಭೂಮಿಯನ್ನ ಕಾಪಾಡಿ ಅದ್ದು ಬಸ್ತು ಮಾಡಿ, ಸಾರ್ವಜನಿಕರ ಉಪಯೋಗಕ್ಕೆ ಮೀಸಲಿರಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ಅಧಿಕಾರಿಗಳ ದಿವಯು ನಿರ್ಲಕ್ಷ ವಹಿಸಿ ಪ್ರಭಾವಗಳ ಒತ್ತಡಕ್ಕೆ ಮಣಿದು ಯಾವುದೇ ಸೂಕ್ತ ಕ್ರಮ ಕಾನೂನು ಕೈಗೊಳ್ಳದಿರುವುದು ವಿಪರ್ಯಾಸವಾಗಿದೆ ಎಂದು ಕೆ.ಆರ್‌.ಎಸ್ ಪಕ್ಷದ ರಾಜ್ಯ ರೈತ ಘಟಕದ ಕಾರ್ಯದರ್ಶಿ ನಿರುಪಾದಿ.ಕೆ ಗೋಮರ್ಸಿ ಒತ್ತುವರಿ ಯಾದ ಭತ್ತದ ಭೂಮಿಗೆ ಭೇಟಿ ನೀಡಿ ಮಾಹಿತಿ ತಿಳಿಸಿ.

ಕೆ.ಆರ್.ಎಸ್ ಪಕ್ಷದ ರಾಜ್ಯ ರೈತ ಘಟಕದ ಕನಕಪ್ಪ ಉಡೆಜಾಲಿ ಮಾತನಾಡಿ ಇದೇ ಗ್ರಾಮದ ಸರ್ವೆ ನಂಬರ್ 37/1/6 ವಿಸ್ತೀರ್ಣ 3 ಎಕರೆ 27 ಗುಂಟೆ ರುದ್ರ ಭೂಮಿ ಇದ್ದು ಇದನ್ನು ಅಲ್ಲಿಯ ಅಕ್ಕ ಪಕ್ಕದ ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿ ಕೊಂಡಿದ್ದಾರೆ. ಸದ್ಯಕ್ಕೆ ಗ್ರಾಮದ ರುದ್ರ ಭೂಮಿಯು ಒಂದು ಎಕರೆ ಮಾತ್ರ ಉಳಿದಿದ್ದು ಭೂಮಿಯನ್ನು ಉಳಿಸಿ ಕಾಪಾಡುವ ಕೆಲಸದಲ್ಲಿ ವಿಫಲರಾದ ಗ್ರಾಮ ಆಡಳಿತದ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಹಶೀಲ್ದಾರರ ಮೇಲೆ ಜಿಲ್ಲಾ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಂಡು ಒತ್ತುವರೆ ಯಾದ ರುದ್ರಭೂಮಿಯನ್ನ ತೆರವು ಗೊಳಿಸಿ ನಾಗರಿಕ ಸಮಾಜಕ್ಕೆ ಅನುಕೂಲತೆಗಾಗಿ, ಸೌಲಭ್ಯಕ್ಕೆ ಅನುವು ಮಾಡಬೇಕೆಂದು ಒತ್ತಾಯಿಸಿದರು. ಬಸಪಟ್ಟಣ ಗ್ರಾಮದಲ್ಲಿ ನೂರಾರು ಎಕ್ಕರೆ ಭೂ ಪ್ರದೇಶವು ಗೈರಾಣು ಹಾಗೂ ಸರ್ಕಾರಿ ಭೂಮಿ ಯಾಗಿದ್ದು ಸ್ಥಳೀಯ ಪ್ರಭಾವಿ ವ್ಯಕ್ತಿಗಳು ವಿವಿಧ ಪಕ್ಷಗಳ ಮುಖಂಡರು ಅದನ್ನ ಒತ್ತುವರಿ ಮಾಡಿ ತಮ್ಮ ವೈಯಕ್ತಿಕ, ಖಾಸಗಿ ಕೆಲಸಗಳಿಗೆ ಉಪಯೋಗಿಸು ತ್ತಿರುವುದು ಕಂಡು ಬಂದಿದೆ. ಇವರ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಂಡು ಸರ್ಕಾರಿ ಭೂಮಿಯನ್ನು ಕಾಪಾಡ ಬೇಕು ಇಲ್ಲದಿದ್ದಲ್ಲಿ ಮುಂದಿನ ಅಕ್ಟೋಬರ್ ಎರಡ ರಂದು ಗಂಗಾವತಿ ತಾಲೂಕಿನ ಮಹಾತ್ಮ ಗಾಂಧಿ ರುತ್ತದ ಬಳಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ಗ್ರಾಮದ ಸರ್ಕಾರಿ ಭೂಮಿಯ ಉಳಿವಿಗಾಗಿ ಉಗ್ರವಾದ ಹೋರಾಟ, ಉಪಾಸ ಸತ್ಯಾಗ್ರಹವನ್ನು ಹಮ್ಮಿ ಕೊಳ್ಳಲಾಗುವುದೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಶರಣಪ್ಪ ದೊಡ್ಮನೆ ,ಪಕ್ಷದ ಮುಖಂಡರಾದ ಮೈನುದ್ದೀನ್, ಮಹಬೂಬ್ ಸಾಬ್,ದಾದಾಪೀರ್, ಗಣೇಶ್ ಶಿಂದೆ, ದಮ್ಮೂರ್ ಮಾಬುಸಾಬ್, ಪೀರ್ ಸಾಬ್, ಬಾಸುಸಾಬ್, ಅಹಮದ್ ಸಾಬ್, ಮಲ್ಲಪ್ಪ ಬಾರ್ಕೆರ್, ದೇವಪ್ಪ ಹಡಪದ, ಡಿಶ್ ಮುರ್ತುಜಾ, ವೀರೇಶ ಉಡುಮಕಲ್ ಎಂ. ಬಸವರಾಜ್, ಅಕ್ಬರ್. ಸೇರಿದಂತೆ ಅನೇಕರು ಭಾಗವಹಿಸಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್. ವಾಯ್.ಕಿಳ್ಳಿ.ಇಲಕಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button