ಭಾರತೀಯ ಕಿಸಾನ್ ಸಂಘ ಗ್ರಾಮ ಸಮೀತಿ – ಅಸ್ತಿತ್ವಕ್ಕೆ.
ಬಣವಿಕಲ್ಲು ಜ.29

ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿ ನಡೆದ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ (ರಿ), ಉತ್ತರ ಪ್ರಾಂತ. ರಾಜ್ಯ ಸಮೀತಿಯ ಪದಾಧಿಕಾರಿಗಳು ಭಾನುವಾರ ಸಂಜೆ ಬಣವಿಕಲ್ಲು ರೈತ ಬಾಂಧವರು ಮತ್ತು ಯುವಕ ಮಿತ್ರರನ್ನು ಸೇರಿಸಿ ಕೊಂಡು ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ತಾಯಿ ಭಾರತ ಮಾತೆಗೆ ಪೂಜೆ ವಿಶೇಷ ಪೂಜೆಯನ್ನು ಮಾಡಿ ಪುಷ್ಪ ನಮನ ಸಲ್ಲಿಸಿದರು. ನಂತರ ಭಾರತೀಯ ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಪುಟ್ಟಸ್ವಾಮಿ ರವರು ಸಂಘದ ಸಿದ್ದಾಂತಗಳು ಮತ್ತು ನೀತಿ ನಿಯಮಗಳು ಹಾಗೂ ಸಂಘದ ಜವಾಬ್ದಾರಿಯ ಬಗ್ಗೆ ಮಾಹಿತಿ ನೀಡಿ ತದ ನಂತರ ಮಾತನಾಡಿ ಈ ನಮ್ಮ ಭಾರತೀಯ ಕಿಸಾನ್ ಸಂಘವು ವಿಶೇಷವಾಗಿ ರೈತರ ಹಿತ ಚಿಂತನೆಗಳೊಂದಿಗೆ ಸ್ಥಾಪನೆಯಾದ ಭಾರತೀಯ ಕಿಸಾನ್ ಸಂಘ ಹಾಗಾಗಿ ನಾವುಗಳು ರಾಜ್ಯಾದ್ಯಂತ ನಮ್ಮ ತಂಡವನ್ನು ಕಟ್ಟಿಕೊಂಡು ಹಗಲು ರಾತ್ರಿ ಎನ್ನದೆ ಸಂಘವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತೆವೆ ಎಂದು ತಿಳಿಸಿದರು , ನಂತರ ಭಾರತೀಯ ಕಿಸಾನ್ ಸಂಘದ ರಾಜ್ಯದ ಪ್ರಮುಖರಾದ ಜಗದೀಶ್ ಸಂಕನ ಗೌಡ್ರು ರವರು ಬಣವಿಕಲ್ಲು ಗ್ರಾಮದ ರೈತರು ಮತ್ತು ವಿದ್ಯಾವಂತ ಯುವಕರಿಗೆ ನಿಮ್ಮ ಊರಿನಲ್ಲಿ ಈ ನಮ್ಮ ಭಾರತೀಯ ಸಂಘ ಸ್ಥಾಪನೆ ಮಾಡಿಕೊಳ್ಳಿ ಎಂದು ತಿಳಿಸಿದರು ನಂತರ ಎಲ್ಲಾ ರೈತರು ಹಾಗೂ ಯುವಕರು ಒಂದೇ ಒಕ್ಕೊರಲಿನಿಂದ ನಾವು ಸಹ ನಮ್ಮ ಗ್ರಾಮದಲ್ಲಿ ಸಂಘವನ್ನು ಮಾಡುತ್ತೇವೆ ಎಂದು ಹೇಳಿ ಸಂಘದ ಸದಸ್ಯತ್ವ ಪಡೆದರು. ನಂತರ ಭಾರತೀಯ ಕಿಸಾನ್ ಸಂಘ ಬಣವಿಕಲ್ಲು ಗ್ರಾಮ ಸಮೀತಿ ಅಧ್ಯಕ್ಷರನ್ನಾಗಿ ರೈತ ಮಿತ್ರರಾದ ವೈ ವೀರೇಶ್ ಹಾಗೂ ಕಾರ್ಯದರ್ಶಿ ಯನ್ನಾಗಿ ಬಿ.ಎಂ.ಬಸವರಾಜ ರವರನ್ನು ಆಯ್ಕೆಯಾದರು , ಇನ್ನುಳಿದಂತೆ ಗ್ರಾಮ ಸಮೀತಿಯ ಸದಸ್ಯರುಗಳಾಗಿ ಅಂಗಡಿ ವೀರೇಂದ್ರ , ಬಿ. ಬಸವನಗೌಡ , ಜಿ. ಸಂದೀಪ್ ಕುಮಾರ್ , ಜಿ.ಸತೀಶ್ , ಬಿ.ಎಸ್.ರವಿಕುಮಾರ , ಬಿ.ಎಂ.ಓಂಕಾರ್ ಗೌಡ , ಬಿ.ಎಸ್.ಚನ್ನಬಸಪ್ಪ , ಬಿ.ಎಂ.ವೀರಭದ್ರಸ್ವಾಮಿ , p ಜಿ.ಡಿ.ಮಹಾಂತೇಶ್ , ಬಿ.ಸಿದ್ದೇಶ್ , ಬಿ.ಎಚ್.ಶಿವಕುಮಾರ್ , ಬಿ.ಸತೀಶ್ , ಗುಮ್ಮ ಶಶಿಧರ , ಬಿ.ಎಂ.ಮರುಳಸಿದ್ದಪ್ಪ , ಪಿ.ಮಲ್ಲೇಶ್ , ಹಾಲಯ್ಯನವರು ವೀರಭದ್ರಸ್ವಾಮಿ , ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜೆ.ಪುಟ್ಟಸ್ವಾಮಿ , ಜಗದೀಶ್ ಸಂಕನ ಗೌಡ , ವಿವೇಕ್ ಮೋರೆ , ಹಾಗೂ ವಿಜಯನಗರ ಜಿಲ್ಲೆಯ ಕಾರ್ಯದರ್ಶಿ ವಿ.ಹುಲುಗಪ್ಪ , ವಿಜಯನಗರ ಜಿಲ್ಲಾ ಪ್ರಮುಖರಾದ ಬನ್ನೀಕಲ್ಲು ಅಂಜೀನಪ್ಪ ಸೇರಿದಂತೆ ರಾಜ್ಯ ಕಾರ್ಯಕರ್ತ ಗುರುನಾಥ ಬೀರನ್ನವರ್ ಹಾಗೂ ಬಣವಿಕಲ್ಲು ಗ್ರಾಮಸ್ಥರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ