ಬಿ.ಡಿ ತಟ್ಟಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಮಕ್ಕಳ ದಿನಾಚರಣೆ.
ರೋಣ ನ.14
ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿಯಾದ ಜವಾಹರಲಾಲ್ ನೆಹರು ರವರು 1947 ರಿಂದ 1964 ರವರೆಗೆ ಅಂದರೆ ಅವರ ಮರಣದ ವರೆಗೂ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಮಕ್ಕಳು ಪ್ರೀತಿಯಿಂದ ಚಾಚಾ ನೆಹರು ಎಂದು ಕರೆಯುತ್ತಿದ್ದರು. ದೇಶದ ಮಕ್ಕಳಿಗೆ ಅಗತ್ಯ ಶಿಕ್ಷಣವನ್ನು ಪೂರೈಸ ಬೇಕೆಂಬುದು ಅವರ ಧ್ಯೇಯ ವಾಗಿತ್ತು. ಆದ್ದರಿಂದ ಅವರ ಸವಿ ನೆನಪಿಗಾಗಿ ಅವರ ಜನ್ಮ ದಿನಾಂಕ ದಂದೇ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇಂದು 132 ನೇ. ಮಕ್ಕಳ ದಿನಾಚರಣೆ ಹಾಗೂ ಜವಹರಲಾಲ್ ರವರ ಜನ್ಮ ದಿನಾಚರಣೆ. ಶ್ರೀಮಾನ್ ಬಿ.ಡಿ.ತಟ್ಟಿ(ಅ) ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಲಕ್ಷ್ಮೇಶ್ವರ. ಉಪ ಕೇಂದ್ರ ರೋಣ ಪಟ್ಟಣದ ಏಕ್ ಪ್ರಯಾಸ್ ಕೇಂದ್ರದಲ್ಲಿ ಆಚರಿಸಲಾಯಿತು.
ಈ ಕಾರ್ಯದಲ್ಲಿ ಮುಖ್ಯ ಅತಿಥಿಗಳಾಗಿ ರೋಣ ಪಟ್ಟಣದ ಶ್ರೀ ವಿರೇಶ ಬಳ್ಳೊಳಿ ಯುವ ಮುಖಂಡರು ರೋಣ, ಶ್ರೀ ಸಿಕಂದರಸಾಬ ನದಾಫ್ ಸೈನಿಕರು, ಶ್ರೀ ಚನ್ನಪ್ಪ ಇಟಗಿ ಮಾಜಿ ಸೈನಿಕರು ಹಾಗೂ ಶ್ರೀ ಮತಿ ಗೀತಾ ಇಟಗಿ ಹಾಗೂ ಶ್ರೀ ಅನ್ವರ್ ಕೋಲಾರ ಉಪ ಅರಣ್ಯ ಅಧಿಕಾರಿಗಳು ರೋಣ ಹಾಗೂ ಶ್ರೀ ಅಭಿಷೇಕ್ ಕೊಪ್ಪದ ಸಮಾಜ ಸೇವಕರು ರೋಣ ಹಾಜರಿದ್ದರು. ಶ್ರೀ ಶರಣಬಸಪ್ಪ ಮಾಸ್ತಮ್ಮನವರ ನಿರೂಪಿಸಿದರು. ಹಾಗೂ ಶ್ರೀ ಮತಿ ಕವಿತಾ ಹೀರೇಮಠ ಸ್ವಾಗತಿಸಿದರು. ಹಾಗೂ ಶ್ರೀ ಮತಿ ಶಾಂತಾ.ಜ ಗೋಟುರ ವಂದಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್. ವಿ. ಸಂಕನಗೌಡ್ರ. ರೋಣ.