ವಚನಗಳ ಶರಣರ ಅನುಭಾವದ ದಿವ್ಯ ಬೆಳಕು – ಸಂತೋಷ ಬಂಡೆ.
ಇಂಡಿ ನ.16

ವೃತ್ತಿ ಪ್ರವೃತ್ತಿಯನ್ನು ಒಂದಾಗಿಸಿ ಕೊಂಡು ಬದುಕಿನ ಶಿಸ್ತನ್ನು ಸಮಾಜಕ್ಕೆ ನೀಡಿದ ಶರಣರ ಸಂದೇಶಗಳು ಗೀತ ಮಾತುಗಳಾಗಿದ್ದು, ಅವುಗಳು ಅನುಭಾವದ ದಿವ್ಯಬೆಳಕು ಮತ್ತು ಸಾರ್ವಕಾಲಿಕ ಸತ್ಯಗಳಾಗಿವೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು. ಅವರು ಪಟ್ಟಣದ ಶ್ರೀ ಬಸವರಾಜೇಂದ್ರ ದೇವಸ್ಥಾನದಲ್ಲಿ ಶ್ರೀ ಬಸವರಾಜೇಂದ್ರ ಸತ್ಸಂಗ ಸಮಿತಿ, ಬಸವ ರಾಜೇಂದ್ರ ಗಜಾನನ ಮಂಡಳಿ, ಇವರ ಸಹಯೋಗದಲ್ಲಿ ಜರುಗಿದ 88 ನೇ. ಹುಣ್ಣಿಮೆ ಬೆಳಕು ಕಾರ್ಯಕ್ರಮದ ನಿಮಿತ್ತ “ಶರಣರ ವಚನಗಳ ಸಂದೇಶಗಳು” ವಿಷಯದ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದರು. ಶರಣ ಸಂದೇಶಗಳು ಪ್ರಸಕ್ತ ಸನ್ನಿವೇಶಕ್ಕೆ, ಸಮಕಾಲೀನ ಸವಾಲುಗಳಿಗೆ ಸಿದ್ದೌಷದ ವಿದ್ದಂತಾಗಿವೆ. ಸತ್ಯ, ಅಹಿಂಸೆ, ನಿಸ್ವಾರ್ಥ, ಪ್ರೀತಿ, ತ್ಯಾಗ, ಸ್ನೇಹ, ಪ್ರಾಮಾಣಿಕತೆ, ಕಾಯಕ, ದಾಸೋಹ, ಸಾಮಾಜಿಕ ನ್ಯಾಯದಂತಹ ಮೌಲ್ಯಗಳ ಮೂಲಕ ಶರಣರು ಪರಿಶುದ್ಧ ಬದುಕಿಗೆ ಅಡಿಪಾಯ ಹಾಕಿದ್ದಾರೆ ಎಂದು ಹೇಳಿದರು. ದಿವ್ಯಸಾನಿಧ್ಯ ವಹಿಸಿದ್ದ ಅರ್ಜುಣಗಿ ಜೈನಾಪುರ ಮಠದ ಷ ಬ್ರ ರೇಣುಕ ಶಿವಾಚಾರ್ಯರು ಮಾತನಾಡಿ,ವಚನಗಳು ಭವಿಷ್ಯದ ಬದುಕಿನ ಸೂತ್ರಗಳಾಗಿವೆ. ತಾರತಮ್ಯವಿಲ್ಲದ ಜೀವನವನ್ನು ಸಾಕ್ಷೀಕರಿಸಿದ ವಚನಗಳು ಇಂದು ನಾಳೆಗೂ ನಿತ್ಯ ಸತ್ಯಗಳಾಗಿವೆ ಎಂದರು.ಸತ್ಸಂಗ ಸಮಿತಿಯ ಅಧ್ಯಕ್ಷ ಪ್ರೊ ಐ.ಬಿ ಸುರಪುರ ಅಧ್ಯಕ್ಷತೆ ವಹಿಸಿ ಮಾತನಾಡಿ, ಬದುಕಿನ ಸಾರ್ಥಕತೆಯ ಒಳ ನೋಟಗಳನ್ನು ನೀಡಿದ ವಚನಗಳು ಮನುಕುಲದ ಸಂಪತ್ತು. ಇಂದಿನ ಪೀಳಿಗೆ ಅವನ್ನು ಅರಿತು ಸುಂದರ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು. ಲಿಂ.ಜಾನನಗೌಡ.ಕ ಪಾಟೀಲ ಸ್ಮರಣಾರ್ಥ ನಿವೃತ್ತ ಉಪನ್ಯಾಸಕ ಪ್ರೊ ಎಮ್.ಜೆ ಪಾಟೀಲ ಕಾರ್ಯಕ್ರಮ ಪ್ರಾಯೋಜಿಸಿ, ಅನ್ನದಾಸೋಹ ವ್ಯವಸ್ಥೆ ಮಾಡಿದರು. ಕನ್ನಡ ಜಾನಪದ ಪರಿಷತ್ತಿನ ತಾಲೂಕಾಧ್ಯಕ್ಷ ಆರ್.ವ್ಹಿ ಪಾಟೀಲ, ಪ್ರೊ ಎ.ಎಸ್ ಗಾಣಿಗೇರ, ಜಿ.ಎಸ್ ವಾಲಿ, ಬಿ.ಎಸ್ ಪಾಟೀಲ, ಕೆ.ಜಿ ನಾಟೀಕಾರ, ಎಸ್.ಎಸ್ ಈರನಕೇರಿ, ಎಚ್.ಎಸ್ ಎಳೆಗಾಂವ, ಜಿ.ಎಸ್ ಪಾಟೀಲ,ಎಸ್.ವಿ ಹೂಗಾರ, ಸಿ.ಎಂ ಉಪ್ಪಿನ, ಬಿ.ಆರ್ ಬಿರಾದಾರ, ಶ್ರೀಮತಿ ಎನ್.ಟಿ ಸಂಗಾ ಹಾಗೂ ಜಯಶ್ರೀ ಪತ್ತಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಪ್ಪ. ಬಿ.ಹರಿಜನ.ಇಂಡಿ.ವಿಜಯಪರ

