ಪಿ.ಎಸ್ ಸಜ್ಜನ ಕಾಲೇಜಿನಲ್ಲಿ ಜರುಗಿದ ವಿವಿಧ ಚಟುವಟಿಕೆಗಳ ಉದ್ಘಾಟನಾ ಸಮಾರಂಭ.
ಬೇವೂರ ನ.17
ತಾಯಿಯ ಋಣವನ್ನು ಎಂದಿಗೂ ತೀರಿಸಲಾಗದು ತಾಯಿಗಾಗಿ ಊರು ಕಟ್ಟಿದ ಶ್ರೀ ಕೃಷ್ಣದೇವರಾಯ, ತಾಯಿಯ ಸ್ಮರಣೆಯಲ್ಲಿ ಸಾಮ್ರಾಜ್ಯ ಕಟ್ಟಿದ ಭಾರತದ ಅರಸರ ಪರಂಪರೆ ಸ್ಮರಣಾರ್ಹವಾದದ್ದು ತಂದೆ, ತಾಯಿ, ಗುರುಗಳ ಋಣವನ್ನು ತೀರಿಸಲು ಪ್ರಾಮಾಣಿಕ ಓದು, ಬರಹ, ಕಲಿಕೆಯನ್ನು ಅಳವಡಿಸಿ ಕೊಳ್ಳಬೇಕು. ಆತ್ಮವಿಶ್ವಾಸ ವೃದ್ಧಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಸಾಧಕರಾಗಿ ಹೊರ ಹೊಮ್ಮಬೇಕೆಂದು ಸೃಜನಶೀಲ ಯುವ ಸಾಹಿತಿಗಳು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಮುತ್ತು. ಯ. ವಡ್ಡರ ಹೇಳಿದರು. ಬೇವೂರಿನ ಪಿ.ಎಸ್.ಸಜ್ಜನ ಕಲಾ ಮಹಾ ವಿದ್ಯಾಲಯದಲ್ಲಿ ಜರುಗಿದ ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ, ಕ್ರೀಡಾ, ಸಾಂಸ್ಕೃತಿಕ ಹಾಗೂ ಎನ್.ಎಸ್.ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅವರು ನಮ್ಮ ಜೀವನದ ಪ್ರತಿಯೊಂದು ಸಂಗತಿಗಳು ಸಮಾಜ ಉಪಕೃತರಾಗಿ ಸ್ಮರಿಸುವಂತಿರ ಬೇಕೆಂದು ಹೇಳಿದರು. ಸಸಿಗೆ ನೀರುಣಿಸಿ ಉದ್ಘಾಟನೆ ನೆರವೇರಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆದರ್ಶ ವಿದ್ಯಾವರ್ಧಕ ಸಂಘದ ಸದಸ್ಯರಾದ ಶ್ರೀ ಎಸ್.ಎಮ್. ಹೊಟ್ಟಿಗೌಡರ ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳು ಅವಶ್ಯಕವಾಗಿವೆ, ನಾಯಕತ್ವ ಗುಣ ಬೆಳಸಿಕೊಂಡು ವಿದ್ಯಾರ್ಥಿಗಳು ಸಮಾಜದ ಆಸ್ತಿಯಾಗ ಬೇಕೆಂದು ಅವರು ಹೇಳಿದರು.
ಕನ್ನಡ ವಿಭಾಗದ ಉಪನ್ಯಾಸಕರಾದ ಡಾ. ಸಂಗಮೇಶ ಹಂಚಿನಾಳ ಮಾತನಾಡಿ ವಿದ್ಯಾರ್ಥಿಗಳಿಗೆ ಮಹಾವಿದ್ಯಾಲಯದ ಪರಂಪರೆ ಶೈಕ್ಷಣಿಕ ಸಾಧನೆಯನ್ನು ಪರಿಚಯಿಸಿದರು. ಸಮಾರಂಭದ ವೇದಿಕೆಯ ಮೇಲೆ ಪ್ರಾಚಾರ್ಯರಾದ ಡಾ, ಜಗದೀಶ ಭೈರಮಟ್ಟಿ, ನಿವೃತ್ತ ಪ್ರಾಚಾರ್ಯರಾದ ಬಿ.ಬಿ ಬೇವೂರ, ಮಹಿಳಾ ಸಬಲೀಕರಣ ಘಟಕದ ಮುಖ್ಯಸ್ಥರಾದ ಎಸ್.ಎಸ್ ಆದಾಪೂರ ಉಪಸ್ಥಿತರಿದ್ದರು. ಬಿ.ಎ ದ್ವಿತೀಯ, ತೃತೀಯ ವರ್ಷದ ವಿದ್ಯಾರ್ಥಿಗಳು ನೂತನವಾಗಿ ಪ್ರವೇಶಾತಿ ಪಡೆದ ಬಿ.ಎ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಪುಸ್ತಕ, ಪೆನ್, ಪುಷ್ಪಗುಚ್ಚ ನೀಡಿ ಸ್ವಾಗತವನ್ನು ಕೋರಿದರು. ಸಂಗೀತಾ ಮಾಗನೂರ ತಂಡದ ವಿದ್ಯಾರ್ಥಿಗಳು ಸ್ವಾಗತ, ಪ್ರಾರ್ಥನೆಯನ್ನು ನೇರವೇರಿಸಿದರು. ವಿದ್ಯಾರ್ಥಿನಿ ವಿಜಯಲಕ್ಷ್ಮಿ ಬಂಡಿವಡ್ಡರ ಸ್ವಾಗತಿಸಿದರು, ಜ್ಯೋತಿ ಗೌಡರ ಮಾಲಾರ್ಪಣೆ ಕಾರ್ಯಕ್ರಮ ನಡೆಸಿ ಕೊಟ್ಟರು, ನಾಗರತ್ನಾ ಪೂಜಾರಿ, ಪವಿತ್ರಾ ಮಾಗನೂರ ಪ್ರಶಸ್ತಿ ವಿತರಣೆ, ಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಅಂತಿಮ ವರ್ಷದ ವಿದ್ಯಾರ್ಥಿ ಸಂಗನಬಸಪ್ಪ ಹಾವರಗಿ ಅನಿಸಿಕೆ ನುಡಿಗಳನ್ನು ಹೇಳಿದರು. ಸಾನಿಯಾ ಅತ್ತಾರ ನಿರೂಪಿಸಿದರು, ಫಾತಿಮಾ ನಧಾಪ ವಂದಿಸಿದರು. ಈ ಉದ್ಘಾಟನಾ ಸಮಾರಂಭದಲ್ಲಿ ಎನ್.ಎಸ್.ಎಸ್ ವಿಭಾಗದ ಕಾರ್ಯಕ್ರಮ ಅಧಿಕಾರಿಗಳಾದ ಜಿ.ಎಸ್ ಗೌಡರ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರರಾದ ಡಿ.ವಾಯ್ ಬುಡ್ಡಿಯವರ, ಐ.ಕ್ಯೂ.ಎ.ಸಿ ಘಟಕದ ಮುಖ್ಯಸ್ಥರಾದ ಡಾ, ಎ.ಎಮ್ ಗೊರಚಿಕ್ಕನವರ, ಕ್ರೀಡಾವಿಭಾಗದ ಮುಖ್ಯಸ್ಥರಾದ ನಾಗಲಿಂಗೇಶ ಬೆಣ್ಣೂರ ಸೇರಿದಂತೆ ಬೋಧಕೇತರ ಸಿಬ್ಬಂದಿಗಳಾದ ಆರ್. ಬಿ. ಕರಡಿಗುಡ್ಡ, ಶಿವು ಕಟಗಿ ಮುಂತಾದವರು ಉಪಸ್ಥಿತರಿದ್ದರು.
ವರದಿ : ಅಮರೇಶ. ಗೊರಚಿಕನವರ.(ಕೂಡಲಸಂಗಮ).