ಗರ್ಭಿಣಿ ಮಹಿಳೆಯ ಅನುಮಾನಾಸ್ಪದ ಸಾವು, ವೈದ್ಯೆ ರೋಹಿಣಿ ಮಾನ್ವಿಕರ್ ಅವರಿಂದ ಅನ್ಯಾಯವಾಗಿದೆ – ಎಂದ ಪೋಷಕರು.
ಮಾನ್ವಿ ನ.17

ಗರ್ಭಿಣಿ ಮಹಿಳೆಯಾದ ಮುಸ್ಕಾನ್ ನನ್ನ ಮಗಳಾಗಿದ್ದು, ಆದರೆ ಮಾನ್ವಿಯಲ್ಲಿರುವ ಶ್ರೀನಿವಾಸ ನರ್ಸಿಂಗ್ ಹೋಂನ ವೈದ್ಯೆ ರೋಹಿಣಿ ಮಾನ್ವಿಕರ್ ಅವರ ನಿರ್ಲಕ್ಷ್ಯತೆ ಯಿಂದ ನನ್ನ ಮಗಳ ಸಾವಾಗಿದೆ ನಮಗೆ ನ್ಯಾಯಬೇಕು ಎಂದು ಮುಸ್ಕಾನಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗರ್ಭಿಣಿ ಮಹಿಳೆ ಮುಸ್ಕಾನ್ ಗೆ ಸೀಜರಿಯನ್ ಮಾಡಿದರೆ ಏನಾದರು ತೊಂದರೆಯಾಗುತ್ತಾ ಎಂದು ತಜ್ಞ ವೈದ್ಯರ ಮೂಲಕ ಪರೀಕ್ಷೆ ಮಾಡಿಸಬೇಕು. ಆದರೆ ನಮ್ಮ ಮಗಳಿಗೆ ಹೊಟ್ಟೆಯಲ್ಲಿ ನೀರು ತುಂಬಿದ್ದರಿಂದ ಬಾಯಲ್ಲಿ ನೊರೆ ಬಂದು ಉಸಿರಾಟಕ್ಕೆ ತೊಂದರೆಯಾಗಿ ಎರಡು ದಿನದ ಹಿಂದೆ ಸಾವನ್ನಪ್ಪಿದ್ದಾಳೆ.
ಪುಟ್ಟ ಮಗುವಿಗೆ ದಿಕ್ಕು ಯಾರೆಂದು ಪೋಷಕರು ಕಣ್ಣೀರಿಡುತ್ತಿದ್ದಾರೆ. ನನ್ನ ಮಗಳಿಗಾದ ಅನ್ಯಾಯ ಯಾರಿಗೂ ಅನ್ಯಾಯ ವಾಗಬಾರದು ಎಂದು ಪೋಷಕರಾದ ಹಾಜಿಬಾಬ ಎಂಬಾತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸರಕಾರಕ್ಕೆ ಶ್ರೀನಿವಾಸ ನರ್ಸಿಂಗ್ ಹೋಂ ವಿರುದ್ಧ ದೂರು ಸಲ್ಲಿಸಿ ಕಾನೂನು ಮೂಲಕ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ